ಚಳ್ಳಕೆರೆ : ಕಿಡಿಗೇಡಿಗಳಿಂದ ಹೊತ್ತಿ ಹುರಿದ ಹಣ್ಣಿನ ಅಂಗಡಿಗಳು
ಹೌದು ಚಳ್ಳಕೆರೆ ನಗರದ ಹೃದಯ ಭಾಗದ ಖಾಸಗಿ ಬಸ್ ನಿಲ್ದಾಣದ ಸಮೀಪ ಇರುವ ಹಣ್ಣಿನ ಅಂಗಡಿಗಳಿಗೆ ತಡ ರಾತ್ರಿ ಸುಮಾರು 3ರ ಸಮಯದಲ್ಲಿ ಐದು ಹಣ್ಣಿನ ಅಂಗಡಿಗಳು ಹಾಗೂ ಬೀಡಾ ಸ್ಟಾಲ್, ಎಗ್ ರೈಸ್ ಅಂಗಡಿಗಳು ಸೇರಿದಂತೆ ಸುಮಾರು 8 ಅಂಗಡಿಗಳಿಗೆ ಸುಟ್ಟು ಭಸ್ಮವಾಗಿವೆ ಆದರೆ ಮಧ್ಯ ರಾತ್ರಿ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ತಂಗಿಸುವಷ್ಟರಲ್ಲೆ ಅಪಾರ ಹಾನಿಯಾಗಿದ್ದರು.
ಈ ಎಲ್ಲಾ ಸುಟ್ಟುಹೊದ ಅಂಗಡಿಗಳಿAದ ಸುಮಾರು ಆರು ಲಕ್ಷಕ್ಕೂ ಹೆಚ್ಚಿನ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ
ಇನ್ನೂ ಸ್ಥಳೀಯ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಮುಂಜಾನೆಯೇ ಆಗಮಿಸಿ ಸಂತ್ರಸ್ಥರನ್ನು ಬೇಟಿ ಮಾಡಿ ಸರಕಾರದಿಂದ ಸಿಗಬೇಕಾದ ಪರಿಹಾರವನು ಶೀಘ್ರವೇ ದೊರಕಿಸಿಕೊಡಲಾಗುವುದು ಎಂದು ವೈಕ್ತಿಕವಾಗಿ ಧನ ಸಹಾಯ ಮಾಡಿದರು.
ಇನ್ನೂ ನಗರಸಭೆ ಅಧ್ಯಕ್ಷೆ ಸುಮಕ್ಕ ಬೇಟಿ ನೀಡಿ ಆಕಸ್ಮಿಕ ಅಗ್ನಿ ದುರಂತಕ್ಕೆ ಸಂಭವಿಸಿದ ಹಣ್ಣಿನ ಅಂಗಡಿಗಳ ಮಾಲೀಕರಿಗೆ ದೈರ್ಯವನ್ನು ತುಂಬಿ ನಗರಸಭೆಯಿಂದ ಸಿಗಬೇಕಾದ ಪರಿಹಾರದ ಮೊತ್ತ ನೀಡಲಾಗುವುದು ಹಾಗೂ ವೈಯಕ್ತಿಕವಾಗಿ ಸಂಕಷ್ಟದಲ್ಲಿರುವ 8 ಅಂಗಡಿಗಳ ಮಾಲೀಕರಿಗೆ ಆರ್ಥೀಕ ನೆರವು ನೀಡಿ ಮಾನವೀಯತೆ ಮೆರೆದರು.
ಇನ್ನೂ ಕೆಪಿಪಿಸಿ ರಾಜ್ಯ ಸಂಘಟನಾ ಕಾರ್ಯದರ್ಶಿ ಪರೀದ್ ಖಾನ್ ರವರು ಅಂಕಷ್ಟದಲ್ಲಿರುವ ಹಣ್ಣಿನ ಮಾಲೀಕರಿಗೆ ಆರ್ಥಿಕ ನೆರವು ನೀಡುವುದರ ಮೂಲಕ ಸ್ಥೆöÊರ್ಯ ತುಂಬಿದರು.
ಇದೇ ಸಂಧರ್ಭದಲ್ಲಿ ನಗರಸಭೆ ಸದಸ್ಯ ಮಲ್ಲಿಕಾರ್ಜುನ, ರಮೇಶ್ ಗೌಡ, ಮಾಜಿ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಚೇತನ್ ಕುಮಾರ್(ಕುಮ್ಮಿ), ನಗರಸಭೆ ಅಧಿಕಾರಿ ಲಿಂಗರಾಜ್, ಪಿಎಸ್‌ಐ ಕೆ.ಸತೀಶ್ ನಾಯ್ಕ್, ಹಾಗೂ ಸಂಕಷ್ಟದಲ್ಲಿರುವ ಮಾಲೀಕರಾದ ಓಬಣ್ಣ, ವೆಂಕಟೇಶ್, ಮಹಾಂತೇಶ್, ಪಟೇಲ್‌ಸಾಬ್, ಮಂಜುನಾಥ್, ಇತರ ಸಿಬ್ಬಂದಿಗÀಳು ಇದ್ದರು.