ಚಳ್ಳಕೆರೆ : ಧಾರ್ಮಿಕ ಪರಂಪರೆ ಮತ್ತು ಇತಿಹಾಸ ಯಾವ ನಾಡಿನಲ್ಲಿ ನೆಲಸಿದೆಯೋ ಆ ನಾಡಿನಲ್ಲಿ ಶಾಂತಿ ಸುಖ ಸಹಬಾಳ್ವೆ ಮತ್ತು ನೆಮ್ಮದಿ ನೆಲೆಸಿರುತ್ತದೆ ಎಂದು ಚಳ್ಳಕೆರೆ ತಾಲೂಕಿನಲ್ಲಿ ಈ ಹಿಂದೆ ಕಾರ್ಯನಿವಹಿಸಿದ ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದರು.
ಅವರು ತಾಲೂಕಿನ ಟಿಎನ್.ಕೋಟೆ ಗ್ರಾಮದ ಮೇಲುಕೋಟೆಯಲ್ಲಿ ಸಾಮಾಜಿಕ ನಾಟಕದ ಪ್ರದರ್ಶನವೊಂದರಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಚಿತ್ರದುರ್ಗದ ಇತಿಹಾಸ ಮತ್ತು ಪರಂಪರೆಗೆ ಇನ್ನೊಂದು ಹೆಸರೇ ತಿಮ್ಮಣ್ಣ ನಾಯಕನಕೋಟೆ ಈ ಗ್ರಾಮವು ಚಿತ್ರದುರ್ಗ ಜಿಲ್ಲೆಯಲ್ಲಿ ಐತಿಹಾಸಿಕ ಪರಂಪರೆವುಳ್ಳ ಗ್ರಾಮವಾಗಿದ್ದು ಗ್ರಾಮದಲ್ಲಿರುವಂತಹ ಎಲ್ಲಾ ಯುವಕರು ಮತ್ತು ನಾಗರಿಕರು ಪ್ರಜ್ಞಾವಂತರಾಗಿರುತ್ತಾರೆ ಮತ್ತು ಸ್ವಾಭಿಮಾನಿಗಳಾಗಿದ್ದಾರೆ ಕಲೆ ಮತ್ತು ಕೌಶಲ್ಯಗಳಿಗೆ ಹೆಸರು ವಾಸಿಯಾದಂತವರು ಇಂತಹ ನಾಟಕಗಳು ಮತ್ತು ಅಭಿನಯಗಳ ಮುಖಾಂತರ ಯುವ ಪ್ರತಿಭೆಗಳಲ್ಲಿ ಅಡಗಿರುವಂತ ಕೌಶಲ್ಯವನ್ನು ಹೊರೆ ಹಚ್ಚಬೇಕು.
ಈ ಗ್ರಾಮದಲ್ಲಿ ಇರುವಂತಹ ಎಲ್ಲ ಕುಟುಂಬಗಳಲ್ಲಿ ಶೈಕ್ಷಣಿಕ ಕ್ರಾಂತಿ ಕಾಣಬೇಕು, ಪ್ರತಿ ಕುಟುಂಬದಲ್ಲಿರುವAತಹ ಮಕ್ಕಳು ಆಧ್ಯಾತ್ಮಿಕ ಮತ್ತು ಉನ್ನತ ಶಿಕ್ಷಣವನ್ನು ಕೊಡಬೇಕು ಇದರ ಮುಖಾಂತರ ಸ್ವಾವಲಂಬಿಗಳಾಗಿ ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಬೇಕು ಗ್ರಾಮದಲ್ಲಿ ಇರುವಂತಹ ಎಲ್ಲರೂ ಕೂಡ ಧಾರ್ಮಿಕ ಪರಂಪರೆ ಇರುವಂತಹ ನಮ್ಮ ದೇಶದಲ್ಲಿ ಇಂತಹ ಪೂಜಾ ಕೈಕಾರ್ಯಗಳು ಮುಂದುವರೆಯಬೇಕು ಎಂದರು.
ಇದೇ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ವೀರಭದ್ರಪ್ಪ, ಗ್ರಾಮ ಪಂಚಾಯತಿ ಸದಸ್ಯ ಚಂದ್ರಣ್ಣ ಹಾಗೂ ನಾಟಕ ಸಮಿತಿಯ ಪದಾಧಿಕಾರಿಗಳು, ಕಲಾಭಿಮಾನಿಗಳು, ಸಾರ್ವಜನಿಕರು ಮತ್ತು ಇತರರ ಉಪಸ್ಥಿತರಿದ್ದರು