ಚಳ್ಳಕೆರೆ:: ಮಹಿಳೆಯರು ಆರ್ಥಿಕವಾಗಿ ಸಾಮಾಜಿಕವಾಗಿ ಸದೃಢರಾಗಲು ಧರ್ಮಸ್ಥಳ ಮಹಿಳಾ ಜ್ಞಾನವಿಕಾಸ ಯೋಜನೆಯಿಂದ ಮಾತ್ರ ಸಾಧ್ಯ ಎಂದು ಪುಷ್ಪ ಸಂಜೀವಮೂರ್ತಿ
ಹೇಳಿದ್ದಾರೆ.
ಅವರು ಶುಕ್ರವಾರ ನಗರದ ಜೈನ ಭವನ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಭಿವೃದ್ಧಿ ಸಂಸ್ಥೆ ಬಿ .ಸಿ.ಟ್ರಸ್ಟ್ ನಾಯಕನಹಟ್ಟಿ ಯೋಜನಾ ಕಚೇರಿ ವತಿಯಿಂದ
ಆಯೋಜಿಸಿದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದ ಅಡಿಯಲ್ಲಿ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಯಲ್ಲಿ ದೀಪ ಬೆಳಗುವುದರ ಮುಖಾಂತರ ಉದ್ಘಾಟಿಸಿ ಮಾತನಾಡಿದ್ದಾರೆ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನವಿಕಾಸ ಯೋಜನೆಯು ಮಹಿಳೆಯರ ಸಬಲೀಕರಣಕ್ಕೆ ಹೆಚ್ಚಿನ ಒತ್ತು ಕೊಡುತ್ತದೆ ಎಲ್ಲರೂ ಇದನ್ನು ಉಪಯೋಗಿಸಿ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಶುಭ ಹಾರೈಸಿದರು.
ವಕೀಲರಾದ ಬಸವರಾಜೇಶ್ವರಿ ಮಾತನಾಡಿ ಭೂಮಿಯ ಕಣಕಣದಲ್ಲಿಯೂ ದೇವರಿದ್ದಾನೆ ಅದೇ ರೀತಿ ಪ್ರತಿ ವಿಚಾರದಲ್ಲಿ ಕಾನೂನು ಇದೆ ಉಚಿತ ಕಾನೂನು ವರದಕ್ಷಿಣೆ ಕಿರುಕುಳ ಸರ್ಕಾರಿ ಕಾನೂನು ಸೌಲಭ್ಯ ಕುರಿತು ಮಾಹಿತಿ ನೀಡಿದರು.
ಸಹಾಯಕ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಎಸ್ ಎನ್. ನವೀನ್ ಕುಮಾರ್ ಮಾತನಾಡಿ ಚಳ್ಳಕೆರೆ ಅತಿ ಹೆಚ್ಚು ಬಾಲ್ಯ ವಿವಾಹ ಆಗುತ್ತದೆ ಅದನ್ನು ನಾವು ತಡೆಗಟ್ಟಲು ಈ ದಿನ ಸಂಕಲ್ಪ ಮಾಡುತ್ತೇವೆ ಮೂಢನಂಬಿಕೆಗಳಿAದ ಹೊರಬಂದು ಕಾನೂನು ಬಗ್ಗೆ ತಿಳಿದುಕೊಳ್ಳಬೇಕು ನಮ್ಮ ಮಕ್ಕಳನ್ನು ನಾವು ರಕ್ಷಣೆ ಮಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬ ತಂದೆ ತಾಯಿಯು ಮುಂಚೂಣಿಯಲ್ಲಿರಬೇಕು ಮಾತೃ ವಂದನ ಕಾರ್ಯಕ್ರಮದ ಸೌಲಭ್ಯ ಬಗ್ಗೆ ಮಾಹಿತಿ ನೀಡಿದರು.
ಪ್ರಾದೇಶಿಕ ನಿರ್ದೇಶಕಿ ಶ್ರೀಮತಿ ಬಿ. ಗೀತಾ ಮಾತನಾಡಿ ಬಹು ಸೌಂದರ್ಯಕ್ಕಿAತ ಅಂತರAಗದ ಸೌಂದರ್ಯ ಮುಖ್ಯ ಜ್ಞಾನವಿಕಾಸ ಸ್ವಸಹಾಯ ತಂಡಗಳು ಜನಜಾಗೃತಿ ಕಾರ್ಯಕ್ರಮ ಜ್ಞಾನದೀಪ ಶಿಕ್ಷಣ, ನಮ್ಮೂರ ನಮ್ಮ ಕೆರೆ ಯೋಜನೆ, ಶುದ್ಧ ಗಂಗಾ ಯೋಜನೆ, ಜನ ಮಂಗಳ ಕಾರ್ಯಕ್ರಮ ಮುಂತಾದ ಅನೇಕ ಜನಪರ ಕಾರ್ಯಕ್ರಮಗಳನ್ನು ಯೋಜನೆಯಲ್ಲಿ ಇದೆ ಮಾತೃಶ್ರೀ ಯವರು ಅಸಾಯಕರನ್ನ ಗುರುತಿಸಿ ತಿಂಗಳಿಗೆ ಮಾಶಾಸನ ಕೊಡುವುದು, ಪ್ರತಿ ತಿಂಗಳು ಆಹಾರ ಕಿಟ್ಟು ಒದಗಿಸುವುದು, ಮನೆ ರಚನೆ ಮನೆ ರಿಪೇರಿ, ಶೌಚಾಲಯವನ್ನು ಮಾಡಿಕೊಡುವ ಮೂಲಕ ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ಗುರುತಿಸಿ ಸೌಲಭ್ಯ ಒದಗಿಸಿ ಗ್ರಾಮಾಭಿವೃದ್ಧಿ ಯೋಜನೆ ಕೆಲಸ ಮಾಡುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಶಾರದಾಶ್ರಮದ ಮಾತೃಶ್ರೀ ಮಾತಾಜಿ ತ್ಯಾಗಮಯಿ, ಯೋಜನಾಧಿಕಾರಿ ಪಿ ಎಸ್ ಅಣ್ಣಪ್ಪ, ಪ್ರಾದೇಶಿಕ ನಿರ್ದೇಶಕರಾದ ಶ್ರೀಮತಿ ಬಿ ಗೀತಾ , ಪ್ರಾದೇಶಿಕ ಸಮನ್ವಯಧಿಕಾರಿ ಅನುಷ ರೈ, ಜ್ಞಾನವಿಕಾಸ ಸಮನ್ವಯಾಧಿಕಾರಿ ಹೇಮಲತಾ, ತಾಲೂಕಿನ ಎಲ್ಲಾ ಮೇಲ್ವಿಚಾರಕರು ಕಚೇರಿ ಸಿಬ್ಬಂದಿಗಳು ಸೇವಾ ಪ್ರತಿನಿಧಿಗಳು 25 ಕೇಂದ್ರದ ಸದಸ್ಯರುಗಳು ಭಾಗವಹಿಸಿದ್ದರು.