ಚಳ್ಳಕೆರೆ : ಮತದಾರರು ಈ ಬಾರಿ ಎರಡು ರಾಷ್ಟಿçÃಯ ಪಕ್ಷಗಳ ದುರಾಡಳಿತದಿಂದ ರಾಜ್ಯದಲ್ಲಿ ಬೇಸಾತ್ತು ಹೋಗಿದ್ದಾರೆ, ಇನ್ನೂ ರಾಜ್ಯದಲ್ಲಿ ಪ್ರದೇಶಿಕ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಈ ಬಾರಿ ಮತದಾರರು ಕಂಕಣ ಬದ್ಧರಾಗಿದ್ದಾರೆ ಎಂದು ಜೆಡಿಎಸ್ ಅಭ್ಯರ್ಥಿ ಎಂ.ರವೀಶ್ ಕುಮಾರ್ ಹೇಳಿದ್ದಾರೆ.
ಅವರು ಕ್ಷೇತ್ರದ ತುರುವನುರು ಹೋಬಳಿಯ ಬೆಳಗಟ್ಟ ಪಂಚಾಯ್ತಿ ವ್ಯಾಪ್ತಿಯ ಬೆಳಗಟ್ಟ, ಹಾಯಕಲ್, ಪೆಲಾರಹಟ್ಟಿ, ದೊಡ್ದಟ್ಟಿ, ಕೋಟೆ ಹಟ್ಟಿಯ ವಿವಿಧೆಡೆ ಜೆಡಿಎಸ್ ಪಕ್ಷಕ್ಕೆ ಕಾರ್ಯಕರ್ತರನ್ನು ಸೇರ್ಪಡೆ ಮಾಡಿಕೊಳ್ಳುವುದರ ಮೂಲಕ ಬಯಲು ಸೀಮೆಯಲ್ಲಿ ತಮ್ಮದೇ ಆದ ವರ್ಚಸ್ಸು ಪಡೆಯುವ ಮೂಲಕ ಹೊಸ ಮೈಲುಗಲ್ಲು ಸೃಷ್ಠಿಸಿದ್ದಾರೆ, ಇನ್ನೂ ಕ್ಷೇತ್ರದಲ್ಲಿ ಬೀಡು ಬಿಟ್ಟ ಅಭ್ಯರ್ಥಿ ಗೆಲುವಿನ ನಗೆ ಬೀರಲು ದಿನವೀಡಿ ಸುತ್ತಾಟ ನಡೆಸುತ್ತಿದ್ದಾನೆ ಎಂದರು.
ಇದೇ ಸಂಧರ್ಭದಲ್ಲಿ ತಾಲೂಕು ಅಧ್ಯಕ್ಷ ಪಿ.ತಿಪ್ಪೆಸ್ವಾಮಿ, ನಗರಸಭೆ ಸದಸ್ಯ ವಿ.ವೈ.ಪ್ರಮೋದ್, ವಿಶ್ವನಾಥ್ ರೆಡ್ಡಿ, ವೆಂಕಟೇಶ್ ರೆಡ್ಡಿ, ಜಯಶೀಲ ರೆಡ್ಡಿ, ಮಲ್ಲೇಶಪ್ಪ, ಜಗನ್ನಾಥ್ ರೆಡ್ಡಿ, ತಿಪ್ಪೇಸ್ವಾಮಿ, ಗಿರೀಶ್ ರೆಡ್ಡಿ , ಹಂಸ ತಿಪ್ಪೇಸ್ವಾಮಿ, ಭಾರತಮ್ಮ ಪಾಪೈಯ್ಯ, ಪೆಲಾರಹಟ್ಟಿ ಲೋಕೇಶ್, ಶ್ರೀನಿವಾಸ್ , ನಿಂಗರೆಡ್ಡಿ , ಮಲ್ಲೇಶಪ್ಪ , ಗುರುಮೂರ್ತಿ, ದೊಡ್ದಟ್ಟಿ ಹರೀಶ ಬೆಳಗಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೆಂಕಟೇಶ, ಸಂದೀಪ್, ರಾಮ್, ಭಾರತ್ ಇತರರು ಇದ್ದರು.
ಈದೇ ಸಂಧರ್ಭದಲ್ಲಿ ಹಾಲಿ ಗ್ರಾಮ ಪಂಚಾಯಿತಿ ಸದಸ್ಯರು, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರು, ಮಾಜಿ ಅದ್ಯಕ್ಷರು ಹಾಗೂ ಮುಖಂಡರು ಕಾಂಗ್ರೆಸ್ಸ್ ಮತ್ತು ಬಿಜೆಪಿ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷದ ಸಿದ್ಧಾಂತಗಳನ್ನು ಒಪ್ಪಿಕೊಂಡು ಸೇರ್ಪಡೆಗೊಂಡರು.