ಬಜೆಟ್ ಪ್ರತಿಕ್ರಿಯೆ

ಎನ್‌ಪಿಎಸ್ ರದ್ದು ಪ್ರಸ್ತಾವನೆ ಇಲ್ಲ, ನೌಕರರಿಗೆ ಮಧ್ಯಂತರ ಪರಿಹಾರವೂ ಇಲ್ಲ

ಚಳ್ಳಕೆರೆ : ಸರ್ಕಾರಿ ನೌಕರರು, ಶಿಕ್ಷಕರು ಪ್ರಸ್ತುತ ಬಜೆಟ್ ನಲ್ಲಿ 7 ವೇತನ ಆಯೋಗದ ವರದಿ ನಿರೀಕ್ಷಿಸಿ ಅದಕ್ಕೆ ಅನುದಾನ ಮೀಸಲಿನ ನಿರೀಕ್ಷೆ ಇಟ್ಟುಕೊಂಡಿದ್ದೇವು, ಪ್ರಸ್ತುತ ಬಜೆಟ್‌ನಲ್ಲಿ ಆ ವರದಿ ಅನುಸರಿಸಿ ಯಾವುದೇ ಅನುದಾನ ಭರವಸೆ, ಮಧ್ಯಂತರ ಪರಿಹಾರವಾಗಲಿ ಘೋಷಿಸದೇ ಇರುವುದು ನಿರಾಶೆಯಾಗಿದೆ. ನೌಕರರಿಗೆ ಮಾರಕವಾಗಿರುವ ಎನ್‌ಪಿಎಸ್ ರದ್ದುಗೊಳಿಸಲು ಹೋರಾಟ ಹೆಚ್ಚಿತ್ತು. ಈ ವಿಷಯದ ಕುರಿತು ಬಜೆಟ್‌ನಲ್ಲಿ ಯಾವುದೇ ಪ್ರಸ್ತಾಪ ಇಲ್ಲ. ಈ ಎಲ್ಲಾ ಅಂಶಗಳು ಇಡೀ ರಾಜ್ಯದ ಶಿಕ್ಷಕರಿಗೆ ತೀವ್ರ ನಿರಾಶೆಯಾಗಿದೆ.

—ಮಾರುತೇಶ. ಆರ್, ಜಿಲ್ಲಾಧ್ಯಕ್ಷರು
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ
ಚಿತ್ರದುರ್ಗ

About The Author

Namma Challakere Local News
error: Content is protected !!