ಕರ್ನಾಟಕ ರಾಜ್ಯದ ಬಜೆಟ್‌ನಲ್ಲಿ ಕಾರ್ಮಿಕರ ಬೇಡಿಕೆಗಳ ಪ್ರಶ್ನೆಗಳಿಗೆ ಆಧ್ಯತೆ ನೀಡುವಂತೆ ಒತ್ತಾಯಿಸಿ ಸಿಐಟಿಯುಸಿ ಪ್ರತಿಭಟನೆ

ಚಳ್ಳಕೆರೆ : ರಾಜ್ಯದಲ್ಲಿರುವ ವಿವಿಧ ತೆರೆನಾದ ಕೈಗಾರಿಕೆಗಳಲ್ಲಿ ದುಡಿಯುತ್ತಿರುವ ಲಕ್ಷಾಂತರ ಸಂಘಟಿತ ಕಾರ್ಮಿಕರು ಹಾಗೂ ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಕಟ್ಟಡ ನಿರ್ಮಾಣ ಆಟೋ.ಟ್ಯಾಕ್ಸಿ, ಮನೆಗೆಲಸ, ಹಮಾಲಿ, ಬೀದಿಬದಿ ಹಾಗೂ ಉದ್ಯೋಗ ಖಾತ್ರಿಗಳಲ್ಲಿ ದುಡಿಯುತ್ತಿರುವ ಲಕ್ಷಾಂತರ ಶ್ರಮಜೀವಿಗಳಿಗೆ ಕೇವಲ ನಾಮಕವಸ್ಥೆಗೆ ಈ ಶ್ರಮ ಕಾರ್ಡ್ ನೀಡಿದ್ದಾರೆ ಆದರೆ ಅದರಿಂದ ಉಪಯೋಗ ಇಲ್ಲ ಆದ್ದರಿಂದ ಕಾರ್ಮಿಕರಿಗೆ ಈ ಬಾರಿಯ ಬಜೆಟ್ ನಲ್ಲಿ ಅನುದಾನ ಮೀಸಲಿಟಬೇಕು ಎಂದು ಸಿಐಟಿಯುಸಿ ಸಂಘಟನೆಯ ಕಾರ್ಯದರ್ಶಿ ಟಿ.ತಿಪ್ಪೆಸ್ವಾಮಿ ಕಿಡಿಕಾರಿದರು.
ಅವರು ನಗರದ ತಾಲೂಕು ಕಛೇರಿಗೆ ಸಂಘಟನೆಯೊAದಿಗೆ ಮುತ್ತಿಗೆ ಹಾಕಿ ಆಡಳಿತ ಸರಕಾರದ ವಿರುದ್ದ ಕಿಡಿಕಾರಿದರು. ಇನ್ನೂ ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕು ಕಾರ್ಮಿಕರ ಕಲ್ಯಾಣಕ್ಕೆ ಬಳಕೆಯಾಗಬೇಕು, ಖಾಸಗೀ ಮತ್ತು ಸರ್ಕಾರದ ಮುನ್ಸಿಪಾಲಿಟಿ, ಗ್ರಾಮಪಂಚಾಯತಿಗಳಲ್ಲಿ ದುಡಿಯುತ್ತಿರುವ ನೌಕರರು ಸೇರಿ ವಿವಿಧ ಇಲಾಖೆಗಳಲ್ಲಿ ಗುತ್ತಿಗೆ, ಹೊರಗುತ್ತಿಗೆ, ಮತ್ತು ವಿವಿಧ ಯೋಜನೆಗಳಲ್ಲಿ ಕೆಲಸ ಮಾಡುತ್ತಿರುವ ಅಂಗನವಾಡಿ, ಬಿಸಿಯೂಟ,ಆಶಾ ಮೊದಲಾದ ಕಾರ್ಮಿಕರ ಪರವಾಗಿ ಫೆ.17 ರಂದು ಮಂಡಿಸುವವ ರಾಜ್ಯ ಬಜೆಟ್‌ನಲ್ಲಿ ಅಗತ್ಯ ಪರಿಹಾರಗಳನ್ನು ಪ್ರಕಟಿಸಬೇಕೆಂದು ಕೋರುತ್ತೇವೆ ಎಂದರು.

ಸAಪತ್ತನ್ನು ಸೃಷ್ಟಿಸುವ ಭೌತಿಕ-ದೈಹಿಕ ಶ್ರಮಿಕರು ಇಂದು ಬಂಡವಾಳಗಾರರ ಪರವಾಗಿ ರೂಪಿತವಾದ ನೀತಿಗಳಿಂದ ಹಲವು ರೀತಿಯಲ್ಲಿ ಸಂಕಷ್ಟಕ್ಕೆ ಒಳಗಾಗಿದ್ದಾರೆ, ಕರೋನಾ ಬಂದ ನಂತರವAತೂ ಕಾರ್ಮಿಕ ವರ್ಗ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿ ತೀವ್ರ ಶೋಷಣೆಗೊಳಗಾಗಿದೆ.

ಕೆಲಸದ ಭದ್ರತೆಗಿಂತ ಉದ್ದಿಮೆಗಳ ಭದ್ರತೆ ಅದ್ಯತೆಯಾಗಿದೆ. ಉದ್ದಿಮೆಗಳ ಭದ್ರತೆಗೆ ಉದ್ಯೋಗ ಯೋಗ ಎಂಬುದಾಗಿ ಬದಲಾಗಿ “ಇನ್ನು ಮುಂದೆ ಯಾವುದೇ ಉದ್ಯೋಗಗಳಿಗೆ ದೀರ್ಘವಧಿಯ ಭದ್ರತೆಯಿಲ್ಲ’ ಎಂಬAತಾಗಿದೆ ಎಂದರು.

ಒAದೇ ಬಾರಿ ಸಾವಿರ ಕನಿಷ್ಠ ವೇತನ ಪರಿಷ್ಕರಣೆಯಾಗಬೇಕು ಎಂಬುದು ಕನಿಷ್ಟ ವೇತನ ಸಲಹಾ ಮಂಡಳಿಯಲ್ಲಿರುವ ಕಾರ್ಮಿಕ ವರ್ಗದ ಕರೋನೋತ್ತರ ಕನಿಷ್ಟ ವೇತನ ಬೆಲೆಯೇರಿಕೆಯ ಆಧಾರದಲ್ಲಿ 31 ಈ ಸಂಕಷ್ಟಗಳು ನಿವಾರಣೆಯಾಗಬೇಕಾದರೆ ಎಲ್ಲ ರೀತಿಯ ಕೆಲಸ ಮಾಡುವ ಶ್ರಮಜೀವಿಗಳ ಒಕ್ಕೊರಲಿನ ಆಗ್ರಹವಾಗಿದೆ. ಈ ಹಿನ್ನಲೆಯಲ್ಲಿ, ಕೈಗಾರಿಕಾ ಶಾಂತಿಯನ್ನು ಕಾಪಾಡಲು ಕಾರ್ಮಿಕರ ಸಮಸ್ಯೆಗಳಿಗೆ ಸಂಬAಧಿಸಿ ಹಾಗೂ ಎಲ್ಲ ಕ್ಷೇತ್ರಗಳಲ್ಲಿರುವ ಅನೌಪಚಾರಿಕ ಕರ್ನಾಟಕ ಕಾರ್ಮಿಕ ಸಮ್ಮೇಳನ” (ಏಐ8) ವನ್ನು ನಡೆಸಬೇಕು ಎನ್ನುವ ಬೇಡಿಕೆಯನ್ನು ಒಳಗೊಂಡು ಈ ಕೆಳಕಂಡ ವಿವಿಧ ಕಾರ್ಮಿಕ ವಿಭಾಗಗಳ ಬೇಡಿಕೆಗಳಿಗೆ ತಮ್ಮ ಬಜೆಟ್ ನಲ್ಲಿ ನ್ಯಾಯ ಒದಗಿಸಬೇಕೆಂದು ಇದೇ ಫೆಬ್ರವರಿ 10 ರಂದು ಸಿಐಟಿಯುವಿನ ನೇತೃತ್ವದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಿ ಮನವಿಯನ್ನು ಮಾನ್ಯ ಜಿಲ್ಲಾಧಿಕಾರಿಗಳ ಮೂಲಕ ಸಲ್ಲಿಸಲಾಗುತ್ತಿದ್ದು ತಾವು ಈ ಬಗ್ಗೆ ಅಗತ್ಯ ಕ್ರಮವಹಿಸಲು ಕೋರುತ್ತೆವೆ ಎಂದು ಗಾಡಿ ತಿಪ್ಪೆಸ್ವಾಮಿ, ನಿಂಗಣ್ಣ, ನಾಗರಾಜ್ಮ ತಿಪ್ಪೆಸ್ವಾಮಿ, ಆಕ್ರೊಶ ವ್ಯಕ್ತಪಡಿಸಿದರು.

Namma Challakere Local News
error: Content is protected !!