ನಾಡು ನುಡಿಯ ಸಂಸ್ಕೃತಿಗೆ ಚಳ್ಳಕೆರೆ ಹೆಸರುವಾಸಿ : ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿಕೆ

ಚಳ್ಳಕೆರೆ : ನಮ್ಮ ಪಂರAಪರೆಯನ್ನು ಉಳಿಸುವ ನಿಟ್ಟಿನಲ್ಲಿ ಇಂದಿನ ಯುವಕರು ಕಂಕಣ ಬದ್ದರಾಗಬೇಕು ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದ್ದಾರೆ.
ನಗರದ ವೆಂಕಟೇಶ್ ನಗರದ ಆರಾಧ್ಯದೈವ ಶ್ರೀ ಚೌಡೇಶ್ವರಿ ಮಹಾತಾಯಿಯ 5ನೇ ವರ್ಷದ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು
ಇನ್ನೂ ಮಾಧ್ಯಮದೊಂದಿಗೆ ಮಾತನಾಡಿದ ಅವರು ತಾಲೂಕಿನ ಇಂದಿನ ಆಧುನಿಕ ಕಾಲಗಟ್ಟದಲ್ಲಿ ಪುರಾತನ ಕಾಲದಿಂದ ನಡೆದುಕೊಂಡು ಬಂದ ಸಂಪ್ರಾದಯಗಳು ನಶಿಸಿ ಅಳವಿನಂಚಿಗೆ ಹೋಗುತ್ತಿವೆ ಆದರೆ ನಾವು ಎಷ್ಟೆ ಪ್ರಬುದ್ದರಾದರೂ ನಮ್ಮ ನಾಡು ನುಡಿಯ ಸಂಸ್ಕೃತಿಗೆ ಬೆಲೆ ಕಟ್ಟಲಾಗದು ಆದ್ದರಿಂದ ನಮ್ಮ ಗ್ರಾಮದ ಆರಾಧ್ಯ ದೇವರುಗಳನ್ನು ನಾವು ನಮ್ಮ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಸಾಗೋಣ ಎಂದಿದ್ದಾರೆ.
ಇದೇ ಸಂಧರ್ಭದಲ್ಲಿ ಬೋವಿ ಜನಾಂಗದ ಮುಖಂಡ ಜಗದೀಶ್ ಹಾಗೂ ನಗರದ ಹಲವು ಮುಖಂಡರು, ಭಕ್ತಗಣ ನೆರೆದಿತ್ತು.

About The Author

Namma Challakere Local News
error: Content is protected !!