ಪಿಡಿಓ-ಕಂಪ್ಯೂಟರ್ ಆಪರೇಟರ್ ಲೋಕಾಯುಕ್ತ ಬಲೆಗೆ
ಹೊಸದುರ್ಗದ ಜಾನಕಲ್ಲು ಗ್ರಾಪಂಯಲ್ಲಿ ನರೇಗಾ ಕಾಮಗಾರಿಗೆ ಲಂಚ ಸ್ವೀಕಾರ ವೇಳೆ

ಚಿತ್ರದುರ್ಗ : ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಮಂಜೂರಾತಿಗೆ ಲಂಚದ ಬೇಡಿಕೆ ಇಟ್ಟಿದ್ದ ಪಿಡಿಓ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿರುವುದು ಜಿಲ್ಲೆಯ ಹೊಸದುರ್ಗ ತಾಲೂಕಿನ ಜಾನಕಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಣಬಹುದಾಗಿದೆ.
ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿ ಮಂಜೂರಾತಿ ಸಂಬAಧ ಲಂಚ ಸ್ವೀಕರಿಸುವಾಗ ಜಾನಕಲ್ಲು ಗ್ರಾಮ ಪಂಚಾಯಿತಿ ಪಿಡಿಓ ಶ್ರೀನಿವಾಸ್ ಹಾಗೂ ಕಂಪ್ಯೂಟರ್ ಆಪರೇಟರ್ ಚೆನ್ನಬಸಪ್ಪ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಮೂಡ್ಲ ಬೋವಿಹಟ್ಟಿ ಗ್ರಾಮ ಪಂಚಾಯಿತಿ ಸದಸ್ಯ ಭೀಮಪ್ಪ ಬಿನ್ ಹೊಸೂರಪ್ಪ ಜಾನಕಲ್ಲು ಗ್ರಾಮ ಪಂಚಾಯತಿ ವ್ಯಾಪ್ತಿಯ ದೇವರಹಟ್ಟಿ ಗ್ರಾಮದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಹೂಳೆತ್ತುವ ಕಾಮಗಾರಿಯಲ್ಲಿ ಕೂಲಿಗಾರರಿಗೆ ಭಾಗಶಹ ಕೂಲಿ ಹಣ ನೀಡಿದರು, ಉಳಿದ ಹಣ ನೀಡಲು ಹಾಗೂ ಸರ್ಕಾರಿ ಶಾಲೆಯ ಕಾಂಪೌAಡ್ ಗೋಡೆ ನಿರ್ಮಾಣ ಮಾಡಲು ಕ್ರಿಯ ಯೋಜನೆಯಲ್ಲಿ ಸೇರಿಸದ ಕಾಮಗಾರಿಯೂ ಕಾರ್ಯ ಆದೇಶ ಮಾಡಲು ಪಿಡಿಒ ಶ್ರೀನಿವಾಸ್ 4000 ಲಂಚ ಬೇಡಿಕೆ ಇಟ್ಟಿದ್ದರು.

ಇವರ ಬೇಡಿಕೆ ಬಗ್ಗೆ ಭೀಮಪ್ಪ ಚಿತ್ರದುರ್ಗ ಲೋಕಾಯುಕ್ತ ಕಚೇರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಗುರುವಾರ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ ಲೋಕಾಯುಕ್ತ ಎಸ್‌ಪಿ ವಾಸುದೇವ ರಾಮ್ ಮಾರ್ಗದರ್ಶನದಲ್ಲಿ ಈ ದಾಳಿ ನಡೆದಿದ್ದು ಪಿಡಿಓ ಲಂಚ ಸ್ವೀಕರಿಸುವ ವೇಳೆ ಬಲೆಗೆ ಬಿದ್ದಿದ್ದಾರೆ.

About The Author

Namma Challakere Local News
error: Content is protected !!