ಚಳ್ಳಕೆರೆ : ಬುಡಕಟ್ಟು ಸಂಪ್ರಾದಯಾಗಳ ಹಾಸು ಹೊದ್ದ ಬಯಲು ಸೀಮೆನಾಡಲ್ಲಿ ಹೆಣ್ಣಿಗೆ ವಿಶೇಷ ಸ್ಥಾನಮಾನ ಹಾಗೂ ಗೌರವ ನೀಡುವುದನ್ನು ಕಾಣಬಹುದು, ಅದೇ ರೀತಿಯಲ್ಲಿ ಈಡೀ ದೇಶದಲ್ಲಿ ಹೆಣ್ಣಿಗೆ ಪೂಜ್ಯ ಸ್ಥಾನವಿದೆ, ಅದರಂತೆ ಹೆಣ್ಣು ಕೇವಲ ಹೆಣ್ಣಲ್ಲ ಅವಳು ಸಮಾಜ ಕಣ್ಣು ಎಂಬುದು ಮತ್ತೊಮ್ಮೆ ಸಾಬಿತು ಪಡಿಸಿದ ವಿಜ್ಞಾನ ನಗರೀ ಚಳ್ಳಕೆರೆ ತಾಲೂಕಿನ ಚೌಲಕೆರೆ ಗ್ರಾಮದ ಯುವ ಪ್ರತಿಭೆ ವಾಲ್ಮೀಕಿ ರವರು ತಮ್ಮ ಚೊಚ್ಚಲ ಸಿನಿಮಾದಲ್ಲಿ ಹೆಣ್ಣಿನ ಬಗ್ಗೆ ವಿಶೇಷವಾದ ಕಥೆಯ ಮೂಲಕ ಅಭಿವ್ಯಕ್ತಪಡಿಸಿದ್ದಾರೆ.
ಭಾರತ ದೇಶದಲ್ಲಿ ಹೆಣ್ಣು ಮಕ್ಕಳಿಗೆ ಆಗುತ್ತಿರುವ ಅನ್ಯಾಯಾಯದ ಬಗ್ಗೆ ಹಾಗು ಹೆಣ್ಣು ಮಕ್ಕಳಿಗೆ ಸಮಾಜದಲ್ಲಿ ಆಗಿತ್ತಿರುವ ಸಾಮಾನ್ಯ ತೊಂದರೆಗಳನ್ನು ಆಧಾರವಾಗಿಟ್ಟುಕೊಂಡು ಸಮಾಜಕ್ಕೆ ಅರಿವು ಮೂಡಿಸಿ ರಾಜ್ಯದಲ್ಲಿ ಒಂದು ಬದಲಾವಣೆ ತಂದು ಹೊಸ ಅಧ್ಯಯನ ಶುರು ಮಾಡಲು ಹೊರಟಿರುವ ನಾಯಕ ಪುತ್ರ ವಾಲ್ಮೀಕಿ ಚೌಲಕೆರೆ ತಮ್ಮ ದಾರಿದೀಪ ಚಿತ್ರದಲ್ಲಿ ವ್ಯಕ್ತಪಡಿಸಿದ್ದಾರೆ.
ಇನ್ನೂ ಮಧ್ಯ ಕರ್ನಾಟಕ ಭಾಗದ ಚಿತ್ರದುರ್ಗ ಜಿಲ್ಲೆಯ ಸುತ್ತಾ ಮುತ್ತಾ ಚಿತ್ರದ ಶೂಟಿಂಗ್ ನಡೆದಿದು, ಈ ಡಾಕ್ಯುಮೆಂಟ್ ದಾರಿದೀಪ ಚಿತ್ರದ ಪೋಸ್ಟರ್ ಬಿಡುಗಡೆಯನ್ನು ವಾಲ್ಮೀಕಿ ಗುರುಪೀಠದ ಶ್ರೀ ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ ಸಾರಥ್ಯದಲ್ಲಿ ಮಠದ ದರ್ಮದರ್ಶಿಗಳಾದ ಶಾಂತಲ,ರವರು ದಾರಿದೀಪ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದರು.
ಈದೇ ಸಂಧರ್ಭದಲ್ಲಿ ವಾಲ್ಮೀಕಿ ಗುರುಪೀಠದ ಶ್ರೀ ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ, ವಾಲ್ಮೀಕಿ ಗುರುಪೀಠದ ದರ್ಮ ದರ್ಶಿದಳಾದ ಶಾಂತಲ, ರಾಜಣ್ಣ, ವಾಲ್ಮೀಕಿ ಅಭಿವೃದ್ದಿ ನಿಗಮದ ಅಧ್ಯಕ್ಷ ಹಾಗೂ ಜಗಳೂರು ಕ್ಷೇತ್ರದ ಶಾಸಕ ಎಸ್ ವಿ ರಾಮಚಂದ್ರಪ್ಪ, ಕರ್ನಾಟಕ ಅಧಿವಾಸಿ ಮಹಿಳಾ ಸಮಿತಿ ಅಧ್ಯಕ್ಷೆ ಮಂಜುಶ್ರೀ, ಹಾಗೂ ಸಾವಿರಾರು ಅಭಿಮಾನಿಗಳು, ಸಾರ್ವಜನಿಕರ ಸಮ್ಮುಖದಲ್ಲಿ ದಾರಿದೀಪದ ಪೋಷ್ಟರ್ ಬಿಡುಗಡೆ ಮಾಡಲಾಯಿತು.
ಇನ್ನೂ ಚಿತ್ರಕತೆ ಸಾಹಿತ್ಯ ನಿರ್ದೇಶನ ನಿರ್ಮಾಣ ನಾಯಕ ಪುತ್ರ ವಾಲ್ಮೀಕಿ ಚೌಲಕೆರೆ, ಸಂಗೀತ ಶ್ರೀಶಾಸ್ತ, ಗಾಯಕ ಬಸವಾಂತ್ರಾವ್, ಹಿನ್ನಲೆ ಧ್ವನಿ ಉದಯ್ ರಶ್ಮಿ, ನಟನೆ ಚಂದನ್, ಮಂಜು, ಮಂಜುನಾಥ್, ಕೆ.ಪುನೀತ್, ಆಕಾಶ್, ತಿಲಕ್, ಲಕ್ಷ್ಮಿ ವಂದಿತಾ, ಭವನ ಇತರ ಹಲವರು ಭಾಗಿಯಾಗಿದ್ದರು.