ಕಿಡಿಗೇಡಿಗಳ ಕೃತ್ಯಕ್ಕೆ ಬಲಿಯಾದ ರೇಷ್ಮೆ ಬೆಳೆಗಾರ : ವಿಷಪೂರಿತ ರೇಷ್ಮೇ ಸೊಪ್ಪು ತಿಂದ ರೇಷ್ಮೆ ಹುಳುಗಳು ಸಾವು

ರಾಮಾಂಜನೇಯ ಕೆ.ಚನ್ನಗಾನಗಳ್ಳಿ
ಚಳ್ಳಕೆರೆ : ಕೇವಲ ಎರಡು ದಿನ ಕಳೆದರೆ ಎರಡು ಲಕ್ಷ ಹಣ ನೋಡಬೇಕಿದ್ದ ರೈತ, ಇಂದು ಕಂಗಲಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾನೆ
ಯಾವುದೋ ಕಿಡಿಗೇಡಿಗಳ ಕೃತ್ಯಕ್ಕೆ ಬಲಿಯಾದ ರೈತನ ಕುಟುಂಬ ಕಣ್ಣಿರಲ್ಲಿ ಕೈ ತೊಳೆಯುತ್ತಿದೆ.
ಕಳೆದ ಮೂವತ್ತು ದಿನಗಳಿಂದ ತನ್ನ ಮಕ್ಕಳಂತೆ ನೊಡಿಕೊಳ್ಳುತ್ತಿದ್ದ ರೇಷ್ಮೆ ಹುಳಗಳ ಸಾಣಿಕೆಯಲ್ಲಿ ಯಶಸ್ಸು ಕಂಡಿದ್ದ ಆದರೆ ರೈತ ತಿಪ್ಪೆಸ್ವಾಮಿಯ ಹೇಳಿಗೆಯನ್ನು ಸಹಿಸದ ಕಿಡಿಗೇಡಿಗಳು ಫಸಲಿಗೆ ಬಂದ ರೇಷ್ಮೆ ಸೊಪ್ಪಿಗೆ ಕಿಟನಾಶಕ ಸಿಂಪಡಿಸಿ ರೇಷ್ಮೆ ಹುಳಗಳ ಸಾವಿಗೆ ಕಾರಣರಾಗಿದ್ದಾರೆ.
ಇನ್ನೂ ರೈತ ತಿಪ್ಪೆಸ್ವಾಮಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ಮಮ್ಮಲು ಮರುಗುತ್ತಾನೆ.

ಮಾರುಕಟ್ಟೆಯಲ್ಲಿ ಸರಾಸಿ ಒಂದು ಕೆಜಿಗೆ 800 ರೂಪಾಯಿಂದ 1000 ಸಾವಿರ ರೂಪಾಯಿ ಬೆಲೆ ಇದೆ ಇದರಿಂದ ಕೆಲವು ರೈತರು ರೇಷ್ಮೆ ಬೆಳೆಯನ್ನು ಬೆಳೆದು ತಮ್ಮ ಆರ್ಥಿಕ ಮಟ್ಟ ಸುಧಾರಿಸಿಕೊಳ್ಳಲು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದಾರೆ,
ಚಳ್ಳಕೆರೆ ತಾಲೂಕಿನ ರೇಣುಕಾಪುರ ಗ್ರಾಮದ ರೈತ ಬಿ.ತಿಪ್ಪೇಸ್ವಾಮಿ ರೈತ ತನ್ನ ಜಮೀನಿನಲ್ಲಿ ರೇಷ್ಮೆ ಬೆಳೆದು ಕೃಷಿಯಲ್ಲಿ ಪ್ರಗತಿ ಕಾಣುತ್ತಿದ್ದರು. ಇದನ್ನು ಸಹಿಸದ ಕೆಲವು ಕಿಡಿಗೇಡಿಗಳು ರೇಷ್ಮೆ ಸೊಪ್ಪಿಗೆ ಔಷಧಿ ಸಿಂಪಡಣೆ ಮಾಡಿ ರೇಷ್ಮೆ ಹುಳು ಸಾವಿಗೆ ಕಾರಣವಾಗಿದ್ದಾರೆ.
ರೈತ ತಿಪ್ಪೇಸ್ವಾಮಿ ತನ್ನ ಸುಮಾರು 2 ಎಕರೆ ಜಮೀನಿನಲ್ಲಿ ರೇಷ್ಮೆ ಬೆಳೆಯಲಾಗಿತ್ತು ರೇಷ್ಮೆ ಒಂದು ತಿಂಗಳ ಬೆಳೆಯಾಗಿದ್ದು ರೈತ 200 ಮೊಟ್ಟೆ ತಂದು ಸಾಕಾಣಿಕೆ ಮಾಡಿದ್ದ ರೈತ ಕಷ್ಟ ಪಟ್ಟು ಬೆಳೆದ ಬೆಳೆ ಕೈಗೆ ಬಾರದೆ ರೈತ ಕಂಗಲಾಗಿದ್ದಾನೆ.

ಇನ್ನೂ ಕೇವಲ ಎರಡು ದಿನ ಇದ್ದಾರೆ ರೇಷ್ಮೆ ಹುಳುವು ಗೂಡು ಕಟ್ಟಿ ಮಾರುಕಟ್ಟೆಗೆ ಸೇರಬೇಕಿತ್ತು ಆದರೆ ಸುಮಾರು 200 ಕೆಜಿ ರೇಷ್ಮೆ ಗೂಡೂ ಕೈಗೆ ಸಿಗುತ್ತಿತ್ತು ಇದನ್ನ ಸಹಿಸದ ಕಿಡಿಗೇಡಿಗಳ ರಾತ್ರೋ ರಾತ್ರಿ ರೇಷ್ಮೆ ಸೊಪ್ಪಿಗೆ ವಿಷ ಸಿಂಪರಣೆ ಮಾಡಿದ್ದಾರೆ.

ಇದನ್ನು ತಿಳಿಯದ ರೈತ ರೇಷ್ಮೆ ಸೊಪ್ಪನ್ನು ರೇಷ್ಮೆ ಹುಳುಗಳಿಗೆ ಮೇಯಲು ಹಾಕಿದ್ದಾರೆ. ರೆಷ್ಮೆ ಸೊಪ್ಪುತಿಂದ ಹುಳುಗಳು ಸಂಪೂರ್ಣ ನಾಶವಾಗಿವೆ, ನಂತರ ರೈತ ವಿಚಾರ ಮಾಡಿದಾಗ ರೇಷ್ಮೆ ಬೆಳೆಗೆ ವಿಷ ಅಲಿನ ಸಿಂಪಡಣೆ ಮಾಡಿರುವುದು ಕಂಡುಬAದಿದೆ. ಇದರಿಂದ ರೈತನಿಗೆ ಸುಮಾರು ಎರಡು ಲಕ್ಷ ರೂಪಾಯಿ ನಷ್ಟವಾಗಿದೆ.
ರೇಷ್ಮೆ ಬೆಳೆದು ನಷ್ಟ ಅನುಭವಿಸಿದ ರೈತ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಮನನೊಂದು ಬಿ. ತಿಪ್ಪೇಸ್ವಾಮಿ ತಳಕು ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.

ಈ ವೇಳೆ ರೈತ ತಿಪ್ಪೇಸ್ವಾಮಿ, ಪ್ರಹ್ಲಾದ್, ಕರುಣಾಪ್ರಸಾದ್, ತಿಪ್ಪೇಸ್ವಾಮಿ, ದೇವಿರಪ್ಪ, ಶಿವಣ್ಣ ಓ.ತಿಪ್ಪೇಸ್ವಾಮಿ, ಕೆಂಗಣ್ಣ ವೆಂಕಟೇಶ್, ನಾಗಭೂಷಣ್, ಆಂಜನೇಯ, ವೀರಭದ್ರಪ್ಪ ಜ್ಞಾನಜ, ಕುಮಾರ್, ಬಸವರಾಜ್ ಇನ್ನು ಅನೇಕ ರೈತ ಮುಖಂಡರು ಸಾರ್ವಜನಿಕರು ರೈತನ ನೋವಿಗೆ ಕಂಬನಿ ಮಿಡಿದ್ದಾರೆ.

Namma Challakere Local News
error: Content is protected !!