ಮ್ಯಾಸನಾಯಕರ ಬುಡಕಟ್ಟು ಸಂಸ್ಕೃತಿ ಜಿವಂತ : ಮಾಜಿ ಶಾಸಕ ತಿಪ್ಪೇಸ್ವಾಮಿ ಅಭಿಪ್ರಾಯ

ನಾಯಕನಹಟ್ಟಿ: ಮ್ಯಾಸನಾಯಕರ ಬುಡಕಟ್ಟು ಸಂಸ್ಕೃತಿಯ ಆಚರಣೆಗಳು ನಮ್ಮ ಪೂರ್ವಜರಿಂದಲೂ ಆಚರಿಸುತ್ತಾ ಬಂದಿದ್ದಾರೆ ಎಂದು ಮಾಜಿ ಶಾಸಕ ತಿಪ್ಪೇಸ್ವಾಮಿ ಹೇಳಿದ್ದಾರೆ.
ಅವರು ಮಂಗಳವಾರ ರಾಮಸಾಗರ ಗ್ರಾಮದ ಬುಡಕಟ್ಟು ಜನರ ಆರಾಧ್ಯ ದೈವ ಗಟ್ಟಿ ಮುತ್ತಪ್ಪ ನಾಯಕನ ವಂಶಸ್ಥರು ಶ್ರೀ ಗಾದ್ರಿಪಾಲ ನಾಯಕ ಸ್ವಾಮಿಯ ಗುಗ್ಗರಿ ಹಬ್ಬದಲ್ಲಿ ಭಾಗವಹಿಸಿ ಪತ್ರಿಕೆಯೊಂದಿಗೆ ಮಾತನಾಡಿದ್ದಾರೆ. ಶ್ರೀ ಗ್ರಾದಿಪಾಲನಾಯಕ ಸ್ವಾಮಿಯ ಗುಗ್ಗರಿ ಹಬ್ಬವು ಪ್ರತಿ ವರ್ಷವೂ ಸಂಪ್ರದಾಯದAತೆ ಮಣೇವು ದೇವರ ಎತ್ತುಗಳ ಓಟ ಶ್ರೀ ಸ್ವಾಮಿಯ ಪೂಜಾ ಕಾರ್ಯಗಳು ಗ್ರಾಮಸ್ಥರು ಅಣ್ಣತಮ್ಮಂದಿರು ನೆರವೇರಿಸಿದ್ದಾರೆ ಎಂದರು.

ಇನ್ನು ಇದೇ ವೇಳೆ ಗುತ್ತಿಗೆದಾರ ಕಾರ್ತಿಕೇಹಟ್ಟಿ ರಮೇಶ್ ಬಾಬು ಮಾತನಾಡಿ ಶ್ರೀ ಗಾದ್ರಿಪಾಲ ನಾಯಕ ಸ್ವಾಮಿಯ ಜಾತ್ರಾ ಮಹೋತ್ಸವವನ್ನು ಗಟ್ಟಿ ಮುತ್ತಪ್ಪ ನಾಯಕ ವಂಶಸ್ಥರಾದ ಸೂರಮ್ಮಹಳ್ಳಿ, ಚೌಳಕೆರೆ. ಕುದಾಪುರ ,ರಾಮಸಾಗರ, ಭೀಮನಕೆರೆ ,ವರವು, ಮಲ್ಲೂರಹಳ್ಳಿ ಓಬಯ್ಯನಹಟ್ಟಿ ಕಾವಲಹಳ್ಳಿ ಪೇಲ್ಲೂರಹಟ್ಟಿ ಗ್ರಾಮಗಳ ಅಣ್ಣತಮ್ಮಂದಿರು ಸಂಭ್ರಮಸಡಗರದಿAದ ಶ್ರೀ ಗಾದ್ರಿ ಪಾಲನಾಯಕ ಹಬ್ಬವನ್ನು ಆಚರಣೆ ಮಾಡುತ್ತಾ ಬಂದಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ತಿಪ್ಪೇಸ್ವಾಮಿ, ಸರ್ಕಲ್ ಇನ್ಸ್ಪೆಕ್ಟರ್ ಜಿಬಿ.ಉಮೇಶ್ ಕುದಾಪುರ, ಗ್ರಾಮ ಪಂಚಾಯತಿ ಸದಸ್ಯ ಎಂ ತಿಪ್ಪೇಸ್ವಾಮಿ, ಮುಖಂಡ ಸಣ್ಣ ಪಾಲಯ್ಯ, ರಾಷ್ಟ್ರೀಯ ಕಿಸಾನ್ ಸಂಘದ ಹೋಬಳಿಯ ಯುವ ಘಟಕದ ಅಧ್ಯಕ್ಷ ಸಿ ಪಿ ಮಹೇಶ್, ಯುವ ಮುಖಂಡ ಪಿ ಪಿ ಮಹಾಂತೇಶ್ ನಾಯಕ, ನೀರಾವರಿ ಹೋರಾಟ ಸಮಿತಿ ಸದಸ್ಯ ಜಯಣ್ಣ, ಪಿ ಎಂ ಮಂಜಣ್ಣ, ಸಿಪಿ.ಓಬಣ್ಣ, ಪೂಜಾರಿ ಪಾಲಯ್ಯ, ಪಿ ಬಸವರಾಜ್, ಸಿಎಂ.ಪಾಲಯ್ಯ, ಸೇರಿದಂತೆ ಗಟ್ಟಿ ಮುತ್ತಪ್ಪ ನಾಯಕರ ಸಮಸ್ತ ವಂಶಸ್ಥರು ಗ್ರಾಮಸ್ಥರು ಉಪಸ್ಥಿತರಿದ್ದರು

About The Author

Namma Challakere Local News
error: Content is protected !!