ಫೆ.26ರಂದು ಸಂತ ಸೇವಾಲಾಲ್ ಜಯಂತಿ ಅರ್ಥಗರ್ಭಿತವಾಗಿ ಆಚರಣೆ ಮಾಡಬೇಕು : ತಹಶೀಲ್ದಾರ್ ರೇಹಾನ್ ಪಾಷ

ಚಳ್ಳಕೆರೆ : ಭಾರತೀಯ ಸಂಸ್ಕೃತಿಯಲ್ಲಿ ವಿಷ್ಠವಾದ ಭಾಷೆಹೊಂದಿದೆ, ಲಿಪಿ ಇಲ್ಲದೆ ಇರುವ ಭಾಷೆ ಬಂಜಾರ ಭಾಷೆಯಾಗಿದೆ. ಆದರೆ ಇವರ ವಿಶೇಷ ಉಡುಗೆ- ತೊಡುಗೆಯನ್ನು ಹೊಂದಿರುವ ಸಮುದಾಯವಾಗಿದೆ ಇಂತಹ ಸಂತ ಶ್ರೇಷ್ಠ ಸೇವಾಲಾಲ್ ಜಯಂತಿಯನ್ನು ಅರ್ಥಗರ್ಭಿತವಾಗಿ ಆಚರಣೆ ಮಾಡಬೇಕು ಎಂದು ತಹಶೀಲ್ದಾರ್ ರೇಹಾನ್ ಪಾಷ ಹೇಳಿದ್ದಾರೆ.

ಅವರು ನಗರದ ತಾಲೂಕು ಕಛೇರಿಯಲ್ಲಿ ಆಯೋಜಿಸಿದ್ದ ರಾಷ್ಟೀಯ ಹಬ್ಬಗಳ ಆಚರಣಾಸಮಿತಿ ಹಾಗೂ ತಾಲ್ಲೂಕು ಬಂಜಾರ ಸಮುದಾಯದ ವತಿಯಿಂದ ಸೇವಾಲಾಲ್ ಮಹಾರಾಜ್ 284ನೇ ಜಯಂತೋತ್ಸವವನ್ನು ಆಚರಣಾ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಸಂತರಲ್ಲಿ ಸರ್ವ ಶ್ರೇಷ್ಠ ಸಂತರ ಸಾಲಿನಲ್ಲಿ ಸೇವಾಲಾಲ್ ಒಬ್ಬರು ಇಂತಹ ಮಹಾತ್ಮರನ್ನು ನೆನೆಯಬೇಕು ಎಂದರು.

ಡಾಕ್ಟರ್ ಚಂದ್ರನಾಯಕ್ ಮಾತನಾಡಿ, ಸರ್ಕಾರದ ಸುದರಿ ಆದೇಶದ ಮೇರೆಗೆ ಫೆ.26 ರ ಭಾನುವಾರ ತಾಲೂಕಿನಾದ್ಯಂತ ಆಚರಿಸುತ್ತೇವೆ ಹಾಗೂ ತಾಲೂಕಿನ ಎಲ್ಲಾ ಘೋರ ಬಾಯಿ ಬಂಧುಗಳು ತಮ್ಮ ತಮ್ಮ ತಾಂಡಗಳಲ್ಲಿ ಫೆ.17ರ ಶುಕ್ರವಾರದಂದು ನಮ್ಮ ಸಾಂಪ್ರದಾಯದAತೆ ಪವಿತ್ರ ಟೀಜ್ ಬಿತ್ತನೆ ಗೋದಿ ಪೂಜೆ ಯನ್ನು ಕೈಗೊಳ್ಳಲು ತಾಂಡಾದ ಡಾ ಓ ಕಾರ್ಬಾರಿ ನಾಯಕ್ ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರುಗಳು ಯುವಕರು ಮಹಿಳೆಯರು ಸಂಘಟನೆಗಳು ಯುವತಿಯರಿಗೆ ಗೋಧಿ ಬಿತ್ತಲು ಸಹಕಾರ ನೀಡಲಾಗಿದೆ
ಈ ರೀತಿ ಬಿತ್ತಿದ ಗೋಧಿಯನ್ನು ಒಂಬತ್ತು ದಿನ ಪೋಷಣೆ ಮಾಡಿ ಫೆ.26ರಂದು ತಮ್ಮ ತಮ್ಮ ತಾಂಡಗಳಿAದ ಭವ್ಯ ಮೆರವಣಿಗೆ ಮೂಲಕ ನಗರಕ್ಕೆ ಬಂದು ಚಳಕೆರಮ್ಮ ದೇವಸ್ಥಾನ ಹತ್ತಿರದಿಂದ ಭವ್ಯ ಮೆರವಣಿಗೆ ಹೊರಟು ನಂತರ ತಾಲೂಕು ಕಚೇರಿಯ ಮೂಲಕ ಬಿಸಿನೀರು ಮುದ್ದಪ್ಪ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿರುವ ರಂಗಮAಟಪಕ್ಕೆ ಸೇರುವುದು ಎಂದು ತಿಳಿಸಿದರು

ಈ ವೇಳೆ ಸೇವಾಲಾಲ್ ಸಂಘದ ಗುರುಗಳಾದ ಬೇನಾ ಭಗತ್ ಸ್ವಾಮೀಜಿಂ, ಗೋಪಾಲ್ ನಾಯಕ್, ಡಾಕ್ಟರ್ ಚಂದ್ರನಾಯಕ್, ಓಬ ನಾಯಕ್, ಗೀತಾಬಾಯಿ ರಾಜೇಶ್, ರಂಗಸ್ವಾಮಿ, ರಾಜಣ್ಣ, ಶಂಕರ್, ಗೋವಿಂದ ನಾಯಕ್, ಲತಾ ನಾಯಕ್ ಇನ್ನು ಅನೇಕ ಬಂಜಾರ ಸಮುದಾಯದ ಮುಖಂಡರುಗಳು ಭಾಗವಹಿಸಿದ್ದರು

About The Author

Namma Challakere Local News
error: Content is protected !!