ಚಳ್ಳಕೆರೆ : ನಗರಸಭೆ ನಿಲ್ಯಕ್ಷö್ಯಕ್ಕೆ ಕುದ್ದಾಗಿ ನಗರಸಭೆ ಸದಸ್ಯರೇ ಆರೋಪ ಮಾಡಿರುವುದು ಚಳ್ಳಕೆರೆ ನಗರಸಭೆ ವ್ಯಾಪ್ತಿಯಲ್ಲಿ ಕಾಣಬಹುದು.
ಹೌದು ನಿಜಕ್ಕೂ ಶೋಚನೀಯ ನಗರದಲ್ಲಿ ಚರಂಡಿ, ರಸ್ತೆಗಳು, ಪಾರ್ಕ್ಗಳು ಸ್ವಚ್ಚತೆ ಇಲ್ಲ ಎಂದು ಈಡೀ ನಗರಸಭೆಗೆ ಆಯ್ಕೆ ಮಾಡಿ ಕಳಿಸಿದ ನಗರಸಭೆ ಸದಸ್ಯರಿಗೆ ದಿಕ್ಕಾರ ಕೂಗುವ ಸಾರ್ವಜನಿಕರು ಒಂದೆಡೆಯಾದರೆ ಇನ್ನೂ ನಗರಸಭೆ ಸದಸ್ಯರೇ ಅಧಿಕಾರಿಗಳ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಸ್ವಚ್ಚತೆ ಇಲ್ಲದೆ ಇರುವ ಪೋಟೋಗಳನ್ನು ಪೋಷ್ಟ್ ಮಾಡುವುದು ಅಧಿಕಾರಿಗಳ ಕಾರ್ಯ ವೈಖರಿಗೆ ಹಿಡಿದ ಕೈ ಗನ್ನಡಿಯಾಗಿದೆ.

ನಗರಸಭೆಯಲ್ಲಿ ಸದಸ್ಯರ ಹಾಗೂ ಅಧಿಕಾರಿಗಳ ಮಧ್ಯೆ ಹೊಂದಾಣಿಕೆ ಇಲ್ಲದೆ ಇರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಇನ್ನೂ ಆಯ್ಕೆಯಾಗಿ ಬಂದ ಸದಸ್ಯರ ಇಂತಹ ಸ್ಥಿತಿಯಾದರೆ ಇನ್ನೂ ನಗರಸಭೆ ವಾರ್ಡ್ಗಳಲ್ಲಿ ವಾಸಿಸುವ ಸಾರ್ವಜನಿಕರ ಗೋಳು ಕೇಳುವರಾರು ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಪೋಸ್ಟ್ನಲ್ಲಿ ಇರುವ ಮಾಹಿತಿ :
ನಗರಸಭೆ ವ್ಯಾಪ್ತಿಗೆ ಬರುವ ಮೂರನೇ ವಾರ್ಡಿನಲ್ಲಿ ಚರಂಡಿ ವ್ಯವಸ್ಥೆ ಹದಗೆಟ್ಟಿರುವುದು ನಗರಸಭೆಗೆ ಎಷ್ಟು ಬಾರಿ ಹೇಳಿದರೂ ಸಹ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಈ ವಾರ್ಡಿನಲ್ಲಿ ಸಣ್ಣ ಮಕ್ಕಳು ವಯಸ್ಸಾದವರು ಇದ್ದು ಇದರಿಂದ ಬಹಳ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಆದಷ್ಟು ಬೇಗ ನಗರಸಭೆಯವರು ಇದರ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ನಗರಸಭೆ ಸದಸ್ಯ ಆರ್.ರುದ್ರನಾಯಕ ಮನವಿ ಮಾಡಿಕೊಂಡಿದ್ದಾರೆ.

Namma Challakere Local News
error: Content is protected !!