ಚಳ್ಳಕೆರೆ : ಈಡೀ ರಾಜ್ಯಾದ್ಯಾಂತ ಕಾಂಗ್ರೇಸ್ ಪಕ್ಷದಿಂದ ಆಮ್ಮಿಕೊಂಡಿರುವ ಪ್ರಜಾಧ್ವನಿ ಕಾರ್ಯಕ್ರಮ ಎರಡು ಹಂತದಲ್ಲಿ ಜರುಗುವ ಕಾರ್ಯಕ್ರಮ ಇದಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್, ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರಜಾಧ್ವನಿಯ ಆಶಯವನ್ನು ಜನರಿಗೆ ತಿಳಿಸಲಾಗುತ್ತದೆ.
ಇದೇ ಫೆ.6ರಂದು ಚಿತ್ರದುರ್ಗ ಜಿಲ್ಲೆಗೆ ಆಗಮಿಸುವ ಪ್ರಜಾಧ್ವನಿ ಕಾರ್ಯಕ್ರಮದ ವರಿಷ್ಠರಿಗೆ ಆಯಿಲ್ ಸಿಟಿಯಲ್ಲಿ ಭರ್ಜರಿಯಾಗಿ ಸ್ವಾಗತ ಕೋರಲು ಈಗಾಗಲೇ ನಗರದಲ್ಲಿ ವೇದಿಕೆ ಸಜ್ಜಾಗಿದೆ.
ನಗರದ ಹೃದಯ ಭಾಗದಲ್ಲಿ ಬೃಹತ್ ಕಟೌಟರ್‌ಗಳು, ಬ್ಯಾನರ್ ಗಳು, ಹಾಗೂ ಪ್ಲೆಕ್ಸ್ಗಳು ರಾರಾಜಿಸುತ್ತಿವೆ, ಇನ್ನೂ ನಗರದ ಬಿಸಿನೀರು ಮುದ್ದಪ್ಪ ಪ್ರೌಢಶಾಲಾ ಮೈದಾನದಲ್ಲಿ ಬೃಹತ್ ವೇದಿಕೆ ಸಜ್ಜುಗೊಂಡಿದೆ.
ಇದರAತೆ ಸರಿಸುಮಾರು ಇಪ್ಪತ್ತು ಸಾವಿರ ಕಾಂಗ್ರೇಸ್ ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸುವ ನಿರೀಕ್ಷೆ ಇದೆ. ಒಟ್ಟಾರೆಯಾಗಿ ಈ ಕಾರ್ಯಕ್ರಮದ ಈಡೀ ಕ್ಷೇತ್ರದಲ್ಲಿ ಮೈಲುಗಲ್ಲಾಗಲಿದೆ. ಕ್ಷೇತ್ರದಲ್ಲಿ ಈಗಾಗಲೇ ಎರಡು ಭಾರಿ ಅಧಿಕಾರದ ಗದ್ದುಗೆ ಹಿಡಿದ ಶಾಸಕ ಟಿ.ರಘುಮೂರ್ತಿ ಮೂರನೇ ಬಾರಿಗೆ ಅಧಿಕಾರದ ಗದ್ದುಗೆ ಹೇರಿ ಸಚಿವ ಸ್ಥಾನ ಗಿಟ್ಟಿಸಿಕೊಳ್ಳುವ ಮಹಾದಾಸೆಯಿಂದ ಕಳೆದ ಹತ್ತು ವರ್ಷಗಳ ಸಾಧನೆ ಮೆಲುಕು ಹಾಕುತ್ತಿದ್ದಾರೆ.

ಒಟ್ಟಾರೆಯಾಗಿ ಈ ಪ್ರಜಾಧ್ವನಿ ಕಾರ್ಯಕ್ರಮದಿಂದ ಕ್ಷೇತ್ರದ ಮತದಾರರಿಗೆ ಪೂರ್ಣ ಪ್ರಮಾಣದ ಸಂದೇಶ ರವಾನಿಸುವ ಪ್ರಮುಖ ಪಾತ್ರ ಕಾಂಗ್ರೇಸ್ ಪಕ್ಷದಿಂದ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ.

About The Author

Namma Challakere Local News
error: Content is protected !!