ಪ್ರಜಾಧ್ವನಿ ಯಾತ್ರೆ ಮೂಲಕ ಕ್ಷೇತ್ರದ ಜನತೆಗೆ ಸ್ಪಷ್ಟ ಸಂದೇಶ : ಶಾಸಕ ಟಿ.ರಘುಮೂರ್ತಿ
ಚಳ್ಳಕೆರೆ : ಈಡೀ ರಾಜ್ಯಾದ್ಯಾಂತ ಕಾಂಗ್ರೇಸ್ ಪಕ್ಷದಿಂದ ಆಮ್ಮಿಕೊಂಡಿರುವ ಪ್ರಜಾಧ್ವನಿ ಕಾರ್ಯಕ್ರಮ ಎರಡು ಹಂತದಲ್ಲಿ ಜರುಗುವ ಕಾರ್ಯಕ್ರಮ ಇದಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್, ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರಜಾಧ್ವನಿಯ ಆಶಯವನ್ನು ಜನರಿಗೆ ತಿಳಿಸಲಾಗುತ್ತದೆ.
ಇದೇ ಫೆ.6ರಂದು ಚಿತ್ರದುರ್ಗ ಜಿಲ್ಲೆಗೆ ಆಗಮಿಸುವ ಪ್ರಜಾಧ್ವನಿ ಕಾರ್ಯಕ್ರಮದ ವರಿಷ್ಠರಿಗೆ ಆಯಿಲ್ ಸಿಟಿಯಲ್ಲಿ ಭರ್ಜರಿಯಾಗಿ ಸ್ವಾಗತ ಕೋರಲು ಈಗಾಗಲೇ ನಗರದಲ್ಲಿ ವೇದಿಕೆ ಸಜ್ಜಾಗಿದೆ.
ನಗರದ ಹೃದಯ ಭಾಗದಲ್ಲಿ ಬೃಹತ್ ಕಟೌಟರ್‌ಗಳು, ಬ್ಯಾನರ್‌ಗಳು, ಹಾಗೂ ಪ್ಲೆಕ್ಸ್ ಗಳು ರಾರಾಜಿಸುತ್ತಿವೆ, ಇನ್ನೂ ನಗರದ ಬಿಸಿನೀರು ಮುದ್ದಪ್ಪ ಪ್ರೌಢಶಾಲಾ ಮೈದಾನದಲ್ಲಿ ಬೃಹತ್ ವೇದಿಕೆ ಸಜ್ಜುಗೊಂಡಿದೆ.
ಇದರAತೆ ಸರಿಸುಮಾರು ಇಪ್ಪತ್ತು ಸಾವಿರ ಕಾಂಗ್ರೇಸ್ ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸುವ ನಿರೀಕ್ಷೆ ಇದೆ. ಒಟ್ಟಾರೆಯಾಗಿ ಈ ಕಾರ್ಯಕ್ರಮದ ಈಡೀ ಕ್ಷೇತ್ರದಲ್ಲಿ ಮೈಲುಗಲ್ಲಾಗಲಿದೆ.
ಒಟ್ಟಾರೆಯಾಗಿ ಈ ಪ್ರಜಾಧ್ವನಿ ಕಾರ್ಯಕ್ರಮದಿಂದ ಕ್ಷೇತ್ರದ ಮತದಾರರಿಗೆ ಪೂರ್ಣ ಪ್ರಮಾಣದ ಸಂದೇಶ ರವಾನಿಸುವ ಪ್ರಮುಖ ಪಾತ್ರ ಕಾಂಗ್ರೇಸ್ ಪಕ್ಷದಿಂದ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ.
ನಗರದ ಬಿಸಿನೀರು ಮುದ್ದಪ್ಪ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ಸೋಮವಾರ ಮಧ್ಯಹ್ನಾ 2 ಗಂಟೆಗೆ ಸರಿಯಾಗಿ ಪ್ರಜಾಧ್ವನಿ ಯಾತ್ರೆ ಸಮಾವೇಶ ಹಮ್ಮಿಕೊಳ್ಳಲಾಗಿದ್ದು. ಕಾರ್ಯಕ್ರಮದಲ್ಲಿ ಕೆಪಿಸಿಸಿ ರಾಜ್ಯ ಅಧ್ಯಕ್ಷ ಡಿಕೆ ಶಿವಕುಮಾರ್,ಹರಿಪ್ರಸಾದ್, ಮಾಜಿ ಮುಖ್ಯ ಮಂತ್ರಿ ವೀರಪ್ಪಮೊಯಿಲಿ, ಮಾಜಿ ಉಪಮುಖ್ಯ ಮಂತ್ರಿ ಪರಮೇಶ್ವರ್.ಮಾಜಿ ಸಚಿವರಾದ, ಮುನಿಯಪ್ಪ, ದಿನೇಶ್‌ಗುಂಡುರಾವ್, ರಾಮಲಿಂಗರೆಡ್ಡಿ, ಸಲೀಮ್ ಆಹ್ಮದ್, ರಮೇಶ್‌ಕುಮಾರ್,ಕೃಷ್ಣಬೈರೇಗೌಡ ,ಸುದರ್ಶನ್ ಜಯಚಂದ್ರ, ರೇವಣ್ಣ, ಎಸ್,ಎಸ್,ಮಲ್ಲಿಕಾರ್ಜುನ ಸೇರಿದಂತೆ ನೂರಕ್ಕೂ ಹೆಚ್ಚು ರಾಜ್ಯ ಮಟ್ಟದ ಮುಖಂಡರು ಭಾಗವಹಿಸಲಿದ್ದಾರೆ ಕಾಂಗ್ರೆಸ್ ಮುಖಂಡರು ಕಾರ್ಯಕ್ರಕರ್ತರು ಜನಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕ್ಷೇತ್ರದ ಶಾಸಕ ಟಿ,ರಘುಮೂರ್ತಿ ಮನವಿ ಮಾಡಿಕೊಂಡಿದ್ದಾರೆ.
ಶಾಸಕ ಟಿ.ರಘುಮೂರ್ತಿ ಮಾತನಾಡಿ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದು ಕ್ಷೇತ್ರದ ಎರಡು ಸಾವಿರ ಜನರಿಗೆ ಉದ್ಯೋಗ ದೊರೆಯಲಿದೆ. ನಗರದ ಬಳ್ಳಾರಿ ರಸ್ತೆಯಲ್ಲಿ ಸುಮಾರು 20 ಎಕರೆ ಪ್ರದೇಶದಲ್ಲಿ ಗಾರ್‌ಮೆಂಟ್ ಕಾರ್ಖಾನೆಯನ್ನು ಇಂಟರ್ ನ್ಯಾಷನಲ್ ಶಾಯಿ ಪ್ರತಿಷ್ಠಿತ ಖಾಸಗಿ ಕಂಪನಿಯವರು ನಿರ್ಮಿಸಲಾಗುತ್ತಿದ್ದು ಸುಮಾರು ಎರಡು ಸಾವಿರಕ್ಕೂ ಹೆಚ್ಚು ನಿರುದ್ಯೋಗಗಳಿಗೆ ಉದ್ಯೋಗ ದೊರೆಯುವುದು ಇದರಿಂದ ಉದ್ಯೋಗ ಹರಸಿ ಬೆಂಗಳೂರು ಸೇರಿದಂತೆ ವಿವಿಧ ನಗರಿಗೆ ಹೋಗುವುದು ತಪ್ಪಿ ಸ್ಥಳಿಯಾವಾಗಿದೆ ಕೆಲಸ ದೊರೆಯುವಂತೆ ಮಾಡಲಾಗುತ್ತಿದೆ.
ಬಾಂಡ್ ವಿತರಣೆ.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ಉಚಿತ, ಹಾಗೆ ಪ್ರತಿ ಮನೆ ಯಜಮಾನಿಯರಿಗೆ 2 ಸಾವಿರ ರೂ ನೀಡುವ ಯೋಜನೆ ಸಹಿತ ಪ್ರಣಾಳಿಕೆ ಇರುವ ಗ್ಯಾರೆಂಟ್ ಕಾರ್ಡ್ಗಳನ್ನು ಮನೆ ಮನೆಗೆ ತಲುಪಿ ಅವರಿಂದ ಸ್ವೀಕೃತಿಯನ್ನು ಪಡೆದು ಕೊಳ್ಳಲಾಗುವುದು. ಪ್ರಜಾದ್ವನಿ ಯಾತ್ರೆ ಯಶಸ್ವಿ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಮನೆ ಮನೆಗೆ ಗ್ಯಾರಂಟಿ ಕಾರ್ಡ್ ತಲುಪಿಸುವ ಮಹತ್ತರ ಯೋಜನೆಯನ್ನು ಹಮ್ಮಿಕೊಳ್ಳಲಾಗುವುದು
ಎಲ್ಲಾ ಬೂತ್ ಮಟ್ಟದ ಸಮಿತಿಗಳನ್ನು ಸಂಘಟಿಸಿ ಮನೆಗೆ ಮನೆ ಮನೆಗೆ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಕೆಪಿಪಿಸಿ ಆಧ್ಯಕ್ಷ ಡಿ.ಕೆ ಶಿವಕುಮಾರ್ ಸಹಿ ಮಾಡಿರುವ ಗ್ಯಾರೆಂಟ್ ಕಾರ್ಡ್ಗಳ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುದುದು ಎಂದು ತಿಳಿಸಿದರು.