ಚಳ್ಳಕೆರೆ: ಕ್ರೀಡೆಯಿಂದ ಯುವಕರ ಮನಸ್ಸು ಸರ್ವಾಗಿಣ ಅಭಿವೃದ್ದಿಯಾಗುತ್ತದೆ. ಕ್ರೀಡೆಯ ಮಹತ್ವ ಅರಿತು ಇಂದಿನ ಯುವಕರು ಕ್ರೀಡೆಗೆ ಹೆಚ್ಚಿ ಆದ್ಯತೆ ನೀಡುವುದರ ಮೂಲಕ ದೇಶಕ್ಕೆ ಕೀರ್ತಿ ತರಬಹುದು ಎಂದು ಚಳ್ಳಕೆರೆ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಟಿ.ತಿಪ್ಪೆಸ್ವಾಮಿ ಹೇಳಿದರು
ಅವರು ನಗರದ ನಗರಂಗೆರೆಯಲ್ಲಿ ನಡೆದ ಕೀಕೆಟ್ ಕ್ರೀಡಾಕೂಟವನ್ನು ಉದ್ಘಾಟಿಸುವುದರ ಮೂಲಕ ಮಾತನಾಡಿದ ಅವರು. ಇಂದಿನ ಯುವಕರು ಕ್ರೀಡೆಯಲ್ಲಿ ತಪ್ಪದೆ ಎಲ್ಲರೂ ಭಾಗವಹಿಸಬೇಕು, ಕ್ರೀಡೆಗೆ ಹೆಚ್ಚಿನ ಮಹತ್ವ ನೀಡುವುದರ ಮೂಲಕ ನಮ್ಮ ದೇಶದಲ್ಲಿ ಕ್ರೀಡಾಭಿಮಾನಿಗಳು ಇರುವುದರಿಂದ ಕ್ರೀಡೆಗೆ ಹೆಚ್ಚಿನ ಪ್ರೋತ್ಸಹ ಸಿಗುತ್ತದೆ. ಕ್ರೀಡೆ ಎಂಬುದು ಸಂಘಟಿತ, ಸ್ಪರ್ಧಾತ್ಮಕ ಮತ್ತು ಕುಶಲತೆಯಿಂದ ಕೂಡಿದೆ ದೈಹಿಕ ಚಟುವಟಿಕೆಯಾಗಿದೆ. ಅಲ್ಲದೇ ಇದಕ್ಕೆ ಬದ್ದತೆ ಮತ್ತು ನ್ಯಾಯದ ಆಟದ ಅಗತ್ಯ ವಿರುತ್ತದೆ ಎಂದರು.
ಇದೆ ಸಂಧರ್ಭದಲ್ಲಿ ಮುಖಂಡರಾದ ಶಿವಕುಮಾರ್, ರಾಜು, ಗ್ರಾಮದ ಮುಖಂಡರು, ಕ್ರೀಡಾಪಡುಗಳು ಭಾಗವಹಿಸಿದ್ದರು.