ಚಳ್ಳಕೆರೆ : ಚಳ್ಳಕೆರೆ ತಾಲೂಕಿನ ಹೊಟ್ಟಪ್ಪನಹಳ್ಳಿ ಮೇಲ್ಸೇತುವೆ ಹಾಗೂ ರೈತರ ಜಮೀನುಗಳಿಗೆ ಹೋಗಲು ರಾಷ್ಟ್ರೀಯ ಹೆದ್ದಾರಿ ಎರಡು ಬದಿಯಲ್ಲಿ ಸರ್ವೀಸ್ ನಿರ್ಮಿಸದೆ ಅವೈಜ್ಞಾನಿಕ ರಸ್ತೆ ನಿರ್ಮಿಸಿರುವುರುವುದು ರೈತರಿಗೆ ಮಾರಕವಾಗಿದೆ, ರೈತರು ತಮ್ಮ ಜಮೀನುಗಳಿಗೆ ಹೋಗಲು ಹಾಗೂ ಊರುಗಳನ್ನು ತಲುಪಲು ಪರಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಹೆದ್ದಾರಿ ಪ್ರಾಧಿಕಾರದ ವಿರುದ್ದ ಅಕ್ರೋಶವ್ಯಕ್ತಪಡಿಸಿದ್ದಾರೆ.
ಹೊಟ್ಟೆಪ್ಪನಹಳ್ಳಿ ಹೈವೆ ರಸ್ತೆ ಅಂಡರ್ ಪಾಸ್ ನಿಂದ ಕಮ್ಮತ್‌ಮರಿಕುಂಟೆಯರಸ್ತೆಯವರೆಗೆ ಸರ್ವೀಸ್ ರಸ್ತೆ ನಿರ್ಮಿಸುವಂತೆ ಆಗ್ರಹಿಸಿ ವಿವಿಧ ಗ್ರಾಮಸ್ಥರು ಕಮ್ಮತ್ ಮರಿಕುಂಟೆ ಗೇಟ್ ಬಳಿ ಪ್ರತಿಭಟನೆ ನಡೆಸಿದರು.
ರಾಷ್ಟಿçÃಯ ಹೆದ್ದಾರಿ ರಸ್ತೆಯ ಅಭಿವೃದ್ಧಿಗೆ ರೈತರು ಜಮೀನು ನೀಡಿದ್ದು ಈಗ ರೈತರು ಕೃಷಿ ಚಟುವಟಿಕೆ ಹಾಗೂ ಬೆಳೆದ ಬೆಳಗಳನ್ನು ಸಾಗಾಟ ಮಾಡಲು ರೈತರಿಗೆ ದಾರಿಯಿಲ್ಲದೆ ರಾಷ್ಟಿçÃಯ ಹೆದ್ದಾರಿಯಲ್ಲಿ ಎತ್ತಿನ ಗಾಡಿ, ವಾಹನಗಳನ್ನು ನಿಲ್ಲಿಸ ಬೇಕಾಗಿದೆ. ರಾಷ್ಟಿçÃಯ ಹೆದ್ದಾರಿಗೆ ಹೊಂದಿಕೊAಡು ಎರಡು ಬದಿಯ ರೈತರಿಗೆ ಸರ್ವಿಸ್ ರಸ್ತೆಗೆಂದು ಮೀಸಲಿಟ್ಟ ಜಾಗದಲ್ಲಿ ದೊಡ್ಡ ಮತ್ತು ಆಳವಾದ ಅವೈಜ್ಞಾನಿಕ ಚರಂಡಿನಿರ್ಮಿಸಿದ್ದು ಈಗ ಗಿಡಗಳನ್ನು ಸಹ ನೆಟ್ಟಿರುವುದರಿಂದ ರಸ್ತೆಯ ಎರಡೂ ಬದಿಯಲ್ಲಿರುವ ನೂರಾರು ರೈತರು ತಮ್ಮ ಹೊಲಗಳಿಗೆ ಜನಜಾನುವಾರುಗಳೊಂದಿಗೆ ಹೋಗಲು ಹರಸಹಾಸ ಪಡುವ ಜತೆಗೆ ರಸ್ತೆ ಅಪಘಾತಕ್ಕೆ ತುತ್ತಾಗುವ ಭೀತಿಯೂ ಎದುರಾಗಿದೆ ಎಂದು ಪ್ರತಿಭನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ರಾಷ್ಟಿçÃಯ ಹೆದ್ದಾರಿಯಿಂದ ಕಮ್ಮತ್ ಮರಿಕುಂಟೆ ಗ್ರಾಮದ ಮೂಲಕ ಗಂಜಿಗುAಟೆ. ಹಿರೆಮಧುರೆ. ಚಿಗತನಹಳ್ಳಿ, ಉಪ್ಪಾರಹಟ್ಟಿ, ಲಂಬಾಣಿ ತಾಂಡ, ಸೇರಿದಂತೆ ವಿವಿಧ ಗ್ರಾಮಗಳಿಗೆ ಹೋಗಲು ಕಮ್ಮತ್ ಮರಿಕುಂಟೆ ಗೇಟ್ ಬಳಿ ಸುತ್ತಿ ಬಳಸಿ ಹೋಗುವ ಅನಿವಾರ್ಯತೆ ಇದೆ ಸರ್ವೀಸ್ ರಸ್ತೆ ನಿರ್ಮಿಸುವಂತೆ ರಾಜ್ಯ ಮುಖ್ಯ ಮಂತ್ರಿ, ಜಿಲ್ಲಾಧಿಕಾರಿ, ತಹಶೀಲ್ದಾರ್, ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿ ಅಲೆದಾಡಿದರೂ ಯಾವುದೇ ಪ್ರಯೋಜನವಾಗಿ ಅನಿವಾರ್ಯವಾಗಿ ಪ್ರತಿಭಟನೆ ಮಾಡುವ ಪರಿಸ್ಥಿತಿಯಾಗಿದ್ದು ರಸ್ತೆಯ ಎರಡು ಬದಿಯಲ್ಲಿ ಸರ್ವೀಸ್ ರಸ್ತೆ ನಿರ್ಮಿಸಿದರಿಂದ ಹೋರಾಟ ತೀವ್ರಗೊಳಿಸುವುದಾಗಿ ಮಾಜಿ ತಾಪಂ ಸದಸ್ಯ ಹೆಚ್.ಆಂಜನೇಯ, ದಿನೇಶ್‌ರೆಡ್ಡಿ, ಮನೋಹರ, ಓಂಕಾರಪರಪ್ಪ, ಶ್ರೀಧರ್, ಶೃತಿ, ಬಾಲರಾಜ್, ಕರಿಣ್‌ಕುಮಾರ್, ಹನುಮಂತರೆಡ್ಡಿ, ಅನಿತಮ್ಮ, ನಾಗೇಶ್, ಶಾಂತಮ್ಮ ಇತರರಿದ್ದರು.