ಚಳ್ಳಕೆರೆ : ಚುನಾವಣೆಗೆ ಇನ್ನೂ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ ಆದ್ದರಿಂದ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ತಮ್ಮ ಕಾರ್ಯಗಳನ್ನು ಚಾಚು ತಪ್ಪದೆ ಮಾಡಬೇಕು ಎಂದು ಚುನಾವಣಾಧಿಕಾರಿ ಹಾಗೂ ಕೈಕಾರಿಕಾ ಜಂಟಿ ನಿರ್ದೇಶಕ ಆನಂದ್ ಕಿವಿಮಾತು ಹೇಳಿದರು.
ಅವರು ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಚಳ್ಳಕೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಮತಕಟ್ಟೆಗಳಿಗೆ ನೇಮಕೊಂಡ ಸೆಕ್ಟರ್ ಅಧಿಕಾರಿಗಳಿಗೆ ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಚುನಾವಣೆ ಯಾವುದೇ ಸಂದರ್ಭದಲ್ಲಿ ಘೋಷಣೆ ಯಾಗುವ ಸಾಧ್ಯತೆ ಇದ್ದು ಮತಗಟ್ಟೆ ವೀಕ್ಷಣೆಗೆ ನೇಮಕಗೊಂಡ ಅಧಿಕಾರಿಗಳು ಮತಕಟ್ಟೆಗಳಿಗೆ ಭೇಟಿ ನೀಡಿ ಮತಗಟ್ಟೆಯಲ್ಲಿ ಕುಡಿವ ನೀರು, ಶೌಚಾಲಯ, ರ‍್ಯಾಂಪ್, ನೆರಳಿನ ವ್ಯವಸ್ಥೆ, ವಿದ್ಯುತ್ ಕೊಠಗಳಿ ಸ್ಥಿತಿ ಬಗ್ಗೆ ನಿಕರವಾದ ಮಾಹಿತಿ ಸಂಗ್ರಹಿಸಿ ಸಂಬಧಪಟ್ಟ ಅಧಿಕಾರಿಗಳ ಗಮನಹರಿಸಿ ಕೂಡಲೆ ಅವುಗಳನ್ನು ಸರಿಪಡಿಸುವಂತೆ ತಿಳಿಸಿದರು.
ಚುನಾವಣೆ ಕರ್ತವ್ಯಕ್ಕೆ ನೇಮಕಗೊಂಡ ಅಧಿಕಾರಿಗಳು ಪಕ್ಷ ಬೇದ ಮರೆತು ಕರ್ತವ್ಯ ಮಾಡಬೇಕು ಯಾವುದೇ ಪಕ್ಷದೊಂದಿಗೆ ಗುರುತಿಸಿಕೊಳ್ಳುವತ್ತಿಲ್ಲ ಚುನಾವಣೆ ಘೋಷಣೆ ಪ್ರಾರಂಭದಿAದ ಮತದಾನ, ಚುನಾವಣೆ ಮತ ಎಣಿಕೆಯವರೆಗೆ ನಿಮ್ಮ ಹೊಣೆಗಾರಿಕೆ ಇರುತ್ತದೆ.
ಚುನಾವಣೆ ಕರ್ತವ್ಯಕ್ಕೆ ನೇಮವಾದ ಸಿಬ್ಬಂದಿಗಳ ವಾಟ್ಸ್ ಆಪ್ ಗ್ರೂಪ್ ಮಾಡಲಾಗುವುದು ಎಲ್ಲಾ ಮಾಹಿತಿಗಳನ್ನು ಹಾಗೂ ಕ್ಷಣ ಕ್ಷಣದ ಮಾಹಿಗಳನ್ನು ಹಾಕಲಾಗುವುದು ಅವುಗಳನ್ನು ಪರಿಶೀಲನೆ ಮಾಡ ಬೇಕು ನೆಟ್ ದೊರೆಯದ ಗ್ರಾಮಗಳಲ್ಲಿ ಯಾವ ನೆಟ್ ವರ್ಕ್ ಇರುತ್ತದೆಯೋ ಆ ಸಿಮ್ ಬಳಕೆ ಮಾಡ ಬೇಕು ಚುನಾವಣೆ ಕರ್ತವ್ಯ ನಿರ್ಲಕ್ಷಿಸಿದರೆ ಕಾನೂನು ಶಿಕ್ಷೆಗೆ ಗುರಿಯಾಗ ಬೇಕಾಗುತ್ತದೆ ಎಂದು ತಿಳಿಸಿದರು.
ಕ್ಷೇತ್ರದಲ್ಲಿ ಸೂಕ್ಷö್ಮ, ಅತಿಸೂಕ್ಷö್ಮ ಮತಗಟ್ಟೆಗಳ ಮಾಹಿತಿ ಪಡೆಯ ಬೇಕು ಮತನಾದ ಸಂದರ್ಭದಲ್ಲಿ ಯಾವುದೇ ಅಹಿತರ ಘಟನೆಗಳು ನಡೆಯದಂತೆ ಹೆಚ್ಚುವರಿ ಪೊಲೀಸ್ ರಕ್ಷಣೆ ನೀಡಲು ಸಹಕಾರಿಯಾಗುತ್ತದೆ ಯಾವುದೇ ಗೊಂದಲಕ್ಕೆ ಆಸ್ಪದ ಆಗದೆ ಅಚ್ಚುಕಟ್ಟಾಗಿ ಚುನಾವಣೆ ಕರ್ತವ್ಯ ನಿರ್ವಹಿಸುವಂತೆ ತಿಳಿಸಿದರು.
ತಹಶೀಲ್ದಾರ್ ಎನ್,ರಘುಮೂರ್ತಿ ಮಾತನಾಡಿ ಈಗಾಲೆ ನಿಗಧಿಯಾಗಿರುವ ಮತಗಟ್ಟೆಗಳು ಒಂದೇ ಆವರಣದಲ್ಲಿದ್ದರೆ ಕೊಠಡಿ ಶಿಥಿಲವಾಗಿದ್ದರೆ ಬದಲಾವಣೆ ಮಾಡಬಹುದು ಆದರೆ ಮತಗಟ್ಟೆ ಹೆಸರು ಬದಲಾವಣೆಯಾದರೆ ಮತಗಟ್ಟೆ ಬದಲಾಣೆ ಮಾಡಲು ಬರುವುದಿಲ್ಲ ಆದ್ದರಿಂದ ಇನ್ನು ಕಾಲಾವಕಾಶ ಇರುವುದರಿಂದ ಮತಗಟ್ಟೆಗಳಲ್ಲಿನ ನ್ಯೂನ್ಯತೆಗಳನ್ನು ಸರಿಪಡಿಸಿಕೊಳ್ಳಬೇಕು, ಮತಗಟ್ಟೆಗಳಿಗೆ ರ‍್ಯಾಂಪ್, ಕುಡಿಯುವ ನೀರು, ವಿದ್ಯುತ್, ಸಣ್ಣ ಪುಟ್ಟ ದುರಸ್ಥಿ, ಶೌಚಾಲಯ ವ್ಯವಸ್ಥೆಗೆ ತಾಲೂಕು ಪಂಚಾಯತ್ ಇಂದ ಸೌಲಭ್ಯಗಳನ್ನು ಕಲ್ಪಿಸಲು ತಿಳಿಸಿಲಾಗಿದೆ ಎಂದು ತಿಳಿಸಿದರು.
ವ್ಯಾಪ್ತಿಯ ಚಳ್ಳಕೆರೆ ವಿಧಾನ ಸಭಾ ವ್ಯಾಪ್ತಿಯ 259 ಮತಗಟ್ಟೆಗಳಿಗೆ ನೇಮಕೊಂಡ 24 ಸೆಕ್ಟರ್ ಅಧಿಕಾರಿಗಳು ಮತಕಟ್ಟೆಗೆ ಭೇಟಿ ನೀಡಿ ಪರಿಶೀಲನೆ ಮಾಡಿರುವ ಬಗ್ಗೆ ಮಾಹಿತಿ ನೀಡಿದರು
ಇದೇ ಸಂಧರ್ಭದಲ್ಲಿ ಚುನಾವಣೆ ಶಿರಸ್ತೆದಾರ್ ಶಕುಂತಲಾ, ಓಬಳೇಶ್, ಕಂದಾಯ ನೀರೀಕ್ಷಕ ಲಿಂಗೇಗೌಡ, ಪ್ರಕಾಶ್, ಇತರರು ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.