ಚಳ್ಳಕೆರೆ : ನಗರಸಭೆ ಸ್ಥಾಯಿ ಸಮಿತಿ ನೂತನ ಅಧ್ಯಕ್ಷ ಎಂ.ಜೆ.ರಾಘವೇAದ್ರರವರನ್ನು ಭಗತ್ ಸಿಂಗ್ ಹಿತರಕ್ಷಣಾ ಸಮಿತಿಯಿಂದ ಆತ್ಮಿಯವಾಗಿ ಸನ್ಮಾನಿಸಿ ಗೌರವಿಸಿದರು.
ನಂತರ ಮಾತನಾಡಿದ ಭಗತ್ ಸಿಂಗ್ ಹಿತರಕ್ಷಣಾ ಸಮಿತಿ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನಾ, ಸಾರ್ವಜನಿಕ ಸೇವೆ ಮಾಡುವ ಮನೋಧರ್ಮ ಎಲ್ಲಾರಲ್ಲೂ ಇರುವುದಿಲ್ಲ ಕೆಲವೇ ಕೆಲವು ವ್ಯಕ್ತಿಗಳಲ್ಲಿ ಮಾತ್ರ ಕಾಣಬಹುದು ಅಂತಹ ವ್ಯಕ್ತಿತ್ವ ಇರುವ ಇವರ ಸೇವೆ ಸಾರ್ವಜನಿಕರಿಗೆ ಅತ್ಯಗತ್ಯ ಎಂದರು.
ಇನ್ನೂ ಇದೇ ಸಂಧರ್ಭದಲ್ಲಿ ರಾಜ್ಯ ಕುರುಬರ ಸಂಘದ ಹಿರಿಯ ಉಪಾಧ್ಯಕ್ಷರು ಹಾಗೂ ಚಿತ್ರದುರ್ಗ ಜಿಲ್ಲಾ ಹಾಲುಮತ ಮಹಾಸಭಾ ಅಧ್ಯಕ್ಷರು, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಬಿ.ಟಿ ಜಗದೀಶ ಮಾತನಾಡಿ, ಸಾರ್ವಜನಿಕರ ಸೇವೆ ಮಾಡಲು ಮುಂದೆ ಬಂದಿರುವ ರಾಘವೇಂದ್ರರವರ ಜೀವನ ಸುಖಕರವಾಗಿರಲಿ ಅವರ ಒಡನಾಟ ರಾಜಾಕಿಯ ಹಲವು ದಿಕ್ಕುಗಳಲ್ಲಿ ಹಬ್ಬಲಿ ಎಂದು ಹಾರೈಸುತ್ತೆನೆ ಎಂದರು.
ಈದೇ ಸಂಧರ್ಭದಲ್ಲಿ ಭಗತ್ ಸಿಂಗ್ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷ ಶಾರು, ಖಜಾಂಚಿ ಚಂದ್ರಪ್ಪ, ಧನಂಜಯ್, ಯೋಗೇಶ್, ಮಂಜುನಾಥ್, ಪುಟ್ಟ, ಮಲ್ಲಿಕಾರ್ಜುನಾ, ಸುದೀಪ್, ಕಿಶೋರ್ ಮೊಳಕಾಲ್ಮೂರು ತಾಲೂಕು ಕುರುಬ ಸಂಘದ ಅಧ್ಯಕ್ಷರು ಕೆ.ಪಿ.ಸಿ.ಸಿ ಹಿಂದುಳಿದ ವರ್ಗಗಳ ವಿಭಾಗದ ಪ್ರಧಾನ ಕಾರ್ಯದರ್ಶಿಗಳಾದ ಜಿಎನ್.ಜಗದೀಶ್ ಜಿಲ್ಲಾ ಹಾಲುಮತ ಮಹಾಸಭಾದ ಪ್ರಧಾನ ಕಾರ್ಯದರ್ಶಿಯಾದ ಸುರೇಶ್ ಉಪಸ್ಥಿತರಿದ್ದರು