ಚಳ್ಳಕೆರೆ : ಆಡಳಿತ ರೂಡ ಬಿಜೆಪಿ ಸರಕಾರ ಜನರಿಗೆ ಮಾರಕವಾದ ನಿರ್ಣಯಗಳನ್ನು ಕೈಗೊಳ್ಳುವುದರ ಮೂಲಕ ರಾಜ್ಯದಲ್ಲಿ ಸಮುದಾಯಗಳನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಅವರು ತಾಲೂಕಿನ ಹರವಿಗೊಂಡನಹಳ್ಳಿ ಗ್ರಾಮದಲ್ಲಿ ನಡೆದ ಮುಖಂಡರುಗಳು ಹಾಗೂ ಕಾರ್ಯಕರ್ತರ ಸಭೆ ಮತ್ತು ಬಿ.ಜೆ.ಪಿ. ಹಾಗೂ ಜೆ.ಡಿ.ಎಸ್ ಪಕ್ಷದ ಮುಖಂಡರುಗಳು ಕಾಂಗ್ರೇಸ್ ಪಕ್ಷಕ್ಕೆ ಸೆರ್ಪಡೆ ಕಾರ್ಯಕ್ರಮದಲ್ಲಿ ಮುಖಂಡರನ್ನು ಆತ್ಮಿಯವಾಗಿ ಸ್ವಾಗತಿ ಮಾತನಾಡಿದರು,
ರಾಜ್ಯದಲಿ ಆಡಳಿತ ರೂಢ ಸರಕಾರ ಸ್ಥಗಿತವಾಗಿದೆ, ಇದರಿಂದ ರಾಜ್ಯದಲ್ಲಿ ಹಾಗೂ ಕ್ಷೇತ್ರದಲ್ಲಿ ಎರಡು ಪಕ್ಷಗಳಿಂದ ಕಾಂಗ್ರೇಸ್ ಪಕ್ಷಕ್ಕೆ ಕಾರ್ಯಕರ್ತರು ಮುಖಂಡರು ಸೇರುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಚಂದ್ರಮೌಳಿ, ಮಂಜುನಾಥ, ಚಿದಾನಂದ, ಸುಚಿಂದ್ರ, ರವಿಚಂದ್ರ, ಯುವರಾಜ, ನೀಲಕಂಠಪ್ಪ, ರಾಮಾಂಜನೇಯ, ಗಾಂಧಿ ರಾಮಾಂಜನೇಯ, ರುದ್ರಮುನಿ, ಶಿವರಾಮ, ನಾಗರಾಜು ಚಂದ್ರಣ್ಣ, ಬಸವರಾಜಪ್ಪ, ಶಿವರಾಜು, ಶೇಖರ್ ಮುಂತಾದವರು ಹಾಜರಿದ್ದರು