ಚಳ್ಳಕೆರೆ : ನಗರದ ತಾಲೂಕು ಪಂಚಾಯಿತ್ ಸಭಾಂಗಣದಲ್ಲಿ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಅಧಿಕಾರಿಗಳ ಪ್ರಗತಿ ಪರೀಶೀಲನಾ ಸಭೆಯಲ್ಲಿ ಸ್ಮಶಾನ ಹಾಗೂ ನಿವೇಶ ವಿಷಯ ಪ್ರಸ್ತಾಪವಾಯಿತು.
ಗ್ರಾಮ ಪಂಚಾಯಿತ್ ವಾರು ಪರಿಶೀಲನೆ ಕೈಗೆತ್ತಿಕೊಂಡ ಸಭೆsೆಯಲ್ಲಿ ಪರುಶುರಾಂಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಂಜೂರು ಮಾಡಿದ ಸ್ಮಶಾನ ಜಾಗದಲ್ಲಿ ಅಲ್ಲಿನ ಸ್ಥಳೀಯರು ತೊಂದರೆ ಮಾಡುತ್ತಿದ್ದಾರೆ ಎಂದು ಪಿಡಿಓ ಗುಡ್ಡಪ್ಪ ಸಭೆಯ ಗಮನ ಸೆಳೆದಾಗ,
ಶಾಸಕ ಟಿ.ರಘುಮೂರ್ತಿ ಮಾತನಾಡಿ ಸಾರ್ವಜನಿಕರ ಹಿತಸಕ್ತಿ ಮುಖ್ಯ ಆದ್ದರಿಂದ ಅವರಿಗೆ ಅನ್ಯಯವಾಗಬಾರದು ಕೆಲವೇ ಕೆಲವು ವ್ಯಕ್ತಿಗಳಿಂದ ತೊಂದರೆಯಾಗಬಾರದು ಆದ್ದರಿಂದ ಅವರಿಗೂ ಮನವೊಲಿಸಿ ಸ್ಮಶಾನ ಜಾಗ ನಿಗಧಿ ಪಡಿಸಿ ಎಂದಾಗ ಪಿಡಿಓ.ಗುಡ್ಡಪ್ಪ ಹನುಮಂತನಹಳ್ಳಿ ಸ್ಮಶಾನ ಜಾಗ ಒತ್ತುವರಿಯಲ್ಲಿ ತಹಶೀಲ್ದಾರ್ ರವರು ಗ್ರಾಮಸ್ಥರ ಮೇಲೆ ನೋಟಿಸ್ ನೀಡದೆ ಒತ್ತಾಯ ಪೂರ್ವಕವಾಗಿ ಗಲಬೆ ಸೃಷ್ಠಿ ಮಾಡಿದ್ದರೆ ಎಂದಾಗ ಶಾಸಕರು ಗರಂಹಾಗಿ ನಾವು ಕೇಳಿದ್ದು ಪರುಶುರಾಂಪುರದ ಮಾಹಿತಿ ನೀನು ಯಾವುದೋ ಪ್ರಕರಣಕ್ಕೆ ತಳಕು ಹಾಕಬೇಡ ಎಂದರು. ಇನ್ನೂ ತಹಶೀಲ್ದಾರ್ ಎನ್.ರಘುಮೂರ್ತಿ ನಾನು ಕಾನೂನು ಚೌಕಟ್ಟಿನಲ್ಲಿ ಮಾಡಿದ್ದೆನೆ ಒಂದು ವೇಳೆ ಅಕ್ರಮ ಒತ್ತುವಾರಿದಾರರನ್ನು ತಾಲೂಕಿನಲ್ಲಿ ಒಕ್ಕಲು ಎಬ್ಬಿಸದ್ದಿದರೆ ಸ್ಮಶಾನಭೂಮಿ ಜಾಗ ಸಿಗುವುದಿಲ್ಲ ಆದ್ದರಿಂದ ಅನಿವಾರ್ಯವಾಗಿ ಈ ಕಾರ್ಯ ಮಾಡಬೇಕು ಎಂದು ಸಮಜಾಯಿಷಿಕೊಂಡರು.
ಈಗೇ ಸಭೆ ಮುಂದುವರೆದ ನಂತರ ಹಲವು ಗ್ರಾಪಂ.ಗಳ ಪ್ರಗತಿ ನಡೆಯುವ ಸಭೆಯ ಮಧ್ಯೆ ಶಾಸಕರು ತಾಲೂಕು ಮಟ್ಟದ ಅಧಿಕಾರಗಳು ಯಾವ ವೇಳೆಯಲ್ಲಿ ಯಾವ ಸ್ಥಳದಲ್ಲಿ ತಿರುಗಾಡಿದ್ದೀರೀ ಎನ್ನುವುದು ಮಾಹಿತಿ ನೀಡಿ ನಿಮ್ಮ ವಾಹನದ ಲಾಗ್ಬುಕ್ ತನ್ನಿ ಎಂದು ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳಿಗೆ ಸೂಚಿಸಿದರು.
ನಂತರ ಕಳೆದ ಸಭೆಯಲ್ಲಿ ಇಓ ಗಮನಕ್ಕೆ ತಂದ ಹಾಗೇ ದೊಡ್ಡೆರೆ ಗ್ರಾಮದ ಯಾದವ ಜಾನಾಂಗಕ್ಕೆ ಭೂಮಿ ಮಂಜೂರು ಮಾಡುವುದು, ನಿಮ್ಮ ಮುಖಾಂತರ ತಹಶೀಲಾರ್ಗೆ ರವಾನಿಸಬೇಕಿತ್ತು ಆದರೆ ನೀವು ಜಿಲ್ಲಾ ಪಂಚಾಯಿತ್ಗೆ ಏಕೆ ಕಳಿಸಿದ್ದೀರಿ ಎಂದು ಇಓ ಹೊನ್ನಯ್ಯ ರವರನ್ನು ತರಾಟೆಗೆ ತೆಗೆದುಕೊಂಡರು ನಂತರ ನಮ್ಮ ಮೇಲಾಧಿಕಾರಿ ಸಿಇಓ ರವರು ತಾಪಂ. ಆಸ್ತಿ ನಮ್ಮದು ನಾವು ಮಂಜೂರು ಮಾಡಬೇಕು ಎಂದು ಕಡತವನ್ನು ಜಿಪಂ.ತರಿಸಿಕೊAಡಿದ್ದಾರೆ ಎಂದರು.
ನಂತರ ತಾಲೂಕಿನಲ್ಲಿ ಯಾದವ ಜನಾಂಗದವರು ಸ್ಥಳೀಯ ಶಾಸಕರು ಭೂಮಿ ಮಂಜೂರು ಮಾಡುವುದನ್ನು ತಡೆ ಹಿಡಿದಿದ್ದಾರೆ, ತಹಶೀಲ್ದಾರ್ ಹಾಗಿದ್ದಾರೆ ಅದನ್ನು ಮಾಡುತ್ತಿದ್ದರು ಎಂದು ಅಪಪ್ರಚಾರ ಮಾಡುತ್ತಿದ್ದಾರೆ, ಇಂತಹ ಗಾಳಿ ಸುದ್ದಿಗಳು ತಾಲೂಕು ಆಪೀಸ್ನಿಂದ ಸೃಷ್ಠಿಯಾಗುತ್ತಿವೆ ಆದ್ದರಿಂದ ಇದಕ್ಕೆ ಉತ್ತರ ನೀಡಬೇಕು ಎಂದಾಗ ತಹಶೀಲ್ದಾರ್ ಮಾತನಾಡಿ, ಸರ್ ಕಳೆದ ಸಭೆಯಲ್ಲಿ ಪರ್ಲಹಳ್ಳಿ ಗ್ರಾಮದ ಜಾಗದ ವಿವಾಧ ಕೂಡ ನಿಮ್ಮಿಂದ ಹಾಗಿದೆ ಎಂದಿರೀ ಈಗ ನಿಮ್ಮ ಕಛೇರಿಯಿಂದ ಬರುತಿದೆ ಎನ್ನುತಿರೀ ಸ್ಪಷ್ಟ ಮಾಹಿತಿ ನನಗಿಲ್ಲ ಯಾರೂ ಮಾಡುತ್ತಾರೋ ಗೊತಿಲ್ಲ ಆದರೆ ನನ್ನ ಅಧಿಕಾರಿ ವ್ಯಾಪ್ತಿಯ ಕೆಲಸ ಮಾಡಿದ್ದೆನೆ ಎಂದಾಗ ಶಾಸಕರು ಮತ್ತೆ ಯಾರೂ ಇಂತಹ ಕೆಲಸ ಮಾಡುತ್ತಾರೆ ಎಂದು ಗರಂ ಹಾದರು..!, ಚುನಾವಣೆಗೆ ಕೇವಲ ಇನ್ನೂ ಮೂರು ತಿಂಗಳು ಬಾಕಿ ಇರುವಾಗ ಇಂತಹ ಆರೋಪಗಳ ಸಲ್ಲದು ನನಗೆ ಮಾಹಿತಿ ಬೇಕು ಎಂದು ಹೇಳಿದರು.
ನಂತರ ತಹಶೀಲ್ದಾರ್ ಮಾತನಾಡಿ ನಮಗೆ ಗೊತಿಲ್ಲ ಒಂದು ವೇಳೆ ಅಂತಹ ವ್ಯಕ್ತಿ ಯಾರಾದರೂ ಇದ್ದರೆ ಹೇಳಿ ನಾವೇ ಪ್ರಕರಣ ದಾಖಲು ಮಾಡುತ್ತೆವೆ, ಆಧಾರ ರಹಿತವಾಗಿ ನಮ್ಮ ತೇಜೋವಧೆ ಮಾಡಬೇಡಿ ಎಂದರು, ಆಗ ಶಾಸಕರು ಈದು ಸಭೆ, ಇಲ್ಲಿ ಯಾವ ಅಧಿಕಾರಿಗೂ ತೇಜೋವಧೆ ಮಾಡಲು ಹಾಗದು ನಿಮ್ಮ ವ್ಯಾಪ್ತಿ ಮೀರಬೇಡಿ ಎಂದರು, ಇನ್ನೂ ಈಗೇ ಸಭೆಯಲ್ಲಿ ಗದ್ದಲ ಉಂಟಾಗಿ ಮಾತಿಗೆ ಮಾತು ಬೆಳೆದು ಸಭೆಯಿಂದ ತಹಶೀಲ್ದಾರ್ ನಿರ್ಗಮಿಸಿದರು. ನಂತರ ಯಥಾ ಪ್ರಕಾರ ಸಭೆ ಮುಂದುವರೆಯಿತು ಈಗೇ ಇಂದು ಮಹತ್ವದ ಸಭೆಯಲ್ಲಿ ಗದ್ದಲದ ಕೋಲಾಹಲ ಉಂಟಾಗಿ ಸಭೆಯಲ್ಲಿ ಇದ್ದ ತಾಲೂಕು ಮಟ್ಟದ ಅಧಿಕಾರಿಗಳು ಮಾತ್ರ ಮೌನ ವಹಿಸಿದ್ದರು.
ಈ ಸಭೆಯಲ್ಲಿ ಇಓ ಹೊನ್ನಯ್ಯ, ತೋಟಗಾರಿಕೆ ಅಧಿಕಾರಿ ವಿರುಪಾಕ್ಷಪ್ಪ, ಪಶು ಸಂಗೋಪನೆ ಇಲಾಖೆ ಅಧಿಕಾರಿ ಡಾ.ರೇವಣ್ಣ, ರೇಷ್ಮೇ ಇಲಾಖೆ ಅಧಿಕಾರಿ ಕೆಂಚಾಜಿರಾವೋ, ಎಇಇ ಕಾವ್ಯ, ಕಂದಾಯ ಅಧಿಕಾರಿ ಲಿಂಗೇಗೌಡ, ಮೋಹನ್, ಇತರೆ ಗ್ರಾಮ ಲೆಕ್ಕಾಧಿಕಾರಿಗಳು, ಪಿಡಿಓಗಳು, ಇಂಜಿನಿಯಾರ್ಗಳು ಹಾಜರಿದ್ದರು.
ಪೋಟೋ 1.ಚಳ್ಳಕೆರೆ ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರೀಶಿಲನೆ ಸಭೆಯಲ್ಲಿ ಶಾಸಕ ಟಿ,ರಘುಮೂರ್ತಿ ಬಾಗಿಯಾಗಿದ್ದರು.

