ಚಳ್ಳಕೆರೆ : ಆಧುನಿಕ ಭರಾಟೆಯಲ್ಲಿ ಕಲಾ ಶ್ರೀಮಂತಿಕೆಯ ಸಂಸ್ಕೃತಿ ಚಟುವಟಿಕೆಗಳು ಮರೆಯಾಗುತ್ತಿರುವುದು ವಿಷಾದನೀಯ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಂ. ಸುಮತಿಮ್ಮರಾಯ ಹೇಳಿದರು.
ಅವರು ತಾಲೂಕಿನ ದೊಡ್ಡ ಚೆಲ್ಲೂರು ಗ್ರಾಮದಲ್ಲಿ ಶುಕ್ರವಾರ ಜ್ಯೋತಿ ಬಾಪುಲೆ ಗ್ರಾಮೀಣಾಭಿವೃದ್ದಿ ಸಾಂಸ್ಕೃತಿಕ ಸೇವಾ ಸಂಸ್ಥೆ, ಕರ್ನಾಟಕ ಗಡಿ ಪ್ರದೇಶಾಭಿವೃದ್ದಿ ಪ್ರಾಧಿಕಾರ ಸಹಯೋಗದಲ್ಲಿ ಭಾರತ ಸ್ವಾತಂತ್ರö್ಯ ಅಮೃತ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು.
ನಾಡಿನ ಸೌಂದರ್ಯವನ್ನು ಕಲೆ ಮತ್ತು ಸಾಂಸ್ಕೃತಿಕ ನೆಲೆಯಲ್ಲಿ ಕಾಣಬೇಕಿದೆ. ಇಂತಹ ಶ್ರೀಮಂತಿಕೆಯ ಕಲೆ ಉಳಿಸಿಕೊಳ್ಳಲು ಕಲಾವಿದರನ್ನು ಗೌರವಿಸಬೇಕು. ಗ್ರಾಮೀಣ ಭಾಗದ ಜಾನಪದ ಮತ್ತು ರಂಗಭೂಮಿ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ಅಗತ್ಯವಿದೆ. ಸ್ಥಳೀಯವಾಗಿ ಆಯೋಜನೆಗೊಳ್ಳುವ ಕಲಾ ಕಾರ್ಯಕ್ರಮಗಳನ್ನು ಸಮಾಜಮುಖಿಯಾಗಿ ಪ್ರೋತ್ಸಾಹಿಸಿದಾಗ ಮಾತ್ರ ಕಲಾ ಚಟುವಟಿಕೆಗಳು ಜೀವಂತಿಕೆಯಾಗಿ ಉಳಿಯಲು ಸಾಧ್ಯ ಎಂದು ಹೇಳಿದರು.
ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಡಿ.ಟಿ.ಶ್ರೀನಿವಾಸನ್ ಮಾತನಾಡಿ, ರಂಗಭೂಮಿ ಕಲಾವಿದರಿಂದ ಭಾಷಾ ಮತ್ತು ಜನ ಜೀವನದ ಸಂಸ್ಕೃತಿ ಜಾಗೃತಿಗೊಳಿಸಲು ಮುಖ್ಯಭೂಮಿಕೆಯಾಗಿ ಕಾಣುತ್ತೇವೆ. ಆದರೆ, ಪ್ರಸ್ತುತ ಸಮಾಜದಲ್ಲಿ ಕಲಾವಿದರನ್ನು ನಿರ್ಲಕ್ಷö್ಯ ಮಾಡಲಾಗುತ್ತಿದೆ. ಸರ್ಕಾರ ಕಲಾವಿದರ ಬದುಕಿಗೆ ಸಾಮಾಜಿಕ ಭದ್ರತೆ ಕಲ್ಪಿಸುವ ಮೂಲಕ ಪೋಷಣೆ ಮಾಡಬೇಕು. ಉತ್ಸವ ಮತ್ತು ಸಂಭ್ರಮದ ಜಾತ್ರೆಗಳನ್ನು ಕಲಾ ಪ್ರದರ್ಶನಗಳಿಗೆ ಅವಕಾಶ ಕಲ್ಪಿಸುವ ಮೂಲಕ ಕಲೆಯನ್ನು ಪೋಷಣೆ ಮಾಡಬೇಕು ಎಂದು ಹೇಳಿದರು.
ಮುಖ್ಯಶಿಕ್ಷಕ ಬಿ.ಪಿ. ಹನುಮಂತರಾಯ ಮಾತನಾಡಿ, ಗಡಿಭಾಗದಲ್ಲಿ ದ್ವಿಭಾಷಿಗರ ಸಂಬAಧಗಳು ಗಟ್ಟಿಗೊಳ್ಳುತ್ತಾ ನೆಲಮೂಲದ ಕಲೆ ಮತ್ತು ಸಂಸ್ಕೃತಿಗೆ ದಕ್ಕೆಯಾಗುತ್ತಿದೆ. ಇಲ್ಲಿನ ಜನಪದ ಕಲೆ ಮತ್ತು ಭಜನೆ, ರಂಗಭೂಮಿ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಬೇಕಿದೆ. ಕಲಾವಿದರ ಪೋಷಣೆಯಿಂದ ನಾಡಿನ ಪ್ರಾದೇಶಿಕ ಸೊಬಗನ್ನು ಕಾಣಲು ಸಾಧ್ಯವಾಗುತ್ತದೆ. ಸಾಮಾಜಿಕ ಕಲಾವಿದರಿಗೆ ಬದುಕಿನ ಭದ್ರತೆ ಮತ್ತು ವೃತ್ತಿ ಪ್ರೋತ್ಸಾಹ ನಿರಂತರವಾಗಿ ಸರ್ಕಾರ ಮಾಡಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗಮಕ, ಗಾಯನ ಸಂಗೀತ, ಕೋಲಾಟ ಮತ್ತು ಭಜನೆ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸಲಾಯಿತು.
ಗ್ರಾಪಂ ಸದಸ್ಯರಾದ ಎಚ್. ಪಟೇಲ್‌ರಾಘವೇಂದ್ರ, ಕೆ. ರತ್ನಮ್ಮ, ಡಿ.ಎಂ. ಶಿವಕುಮಾರ್, ಜಯಮ್ಮ, ಎಲ್. ಶೃತಿ, ಎಲ್.ವಿ. ಸವಿತಾ, ಟಿ. ದೇವರಾಜ್, ಎಲ್. ಕೆಂಚರಾಯ, ಜ್ಯೋತಿ ಬಾಪುಲೆ ಗ್ರಾಮೀಣಾಭಿವೃದ್ದಿ ಸಾಂಸ್ಕೃತಿಕ ಸೇವಾ ಸಂಸ್ಥೆ ಅಧ್ಯಕ್ಷ ಎಚ್. ಶ್ರೀನಿವಾಸ, ಎಂ. ಅರ್ಪಿತಾ, ಕಲಾವಿದರಾದ ಮುತ್ತುರಾಜ್, ನನ್ನಿವಾಳ ಹನುಮಂತಪ್ಪ ಪೂಜಾರ್, ಎಚ್. ಪುನೀತ್‌ಪೂಜಾರ್, ಭದ್ರಿ ಮತ್ತಿತರರು ಇದ್ದರು.