ಚಳ್ಳಕೆರೆ : ಇಂತಹ ಯುವಕ ಸಂಘಗಳು ರಾಜಕೀಯ ಹೊರತಾಗಿ ಕೆಲಸ ನಿರ್ವಹಿಸಬೇಕು ಮತ್ತು ಸಾರ್ವಜನಿಕರ ಸೇವೆಯಲ್ಲಿ ಭಾಗಿಯಾಗಬೇಕು ಸಂಕ್ರಾAತಿಯ ದಿನದಂದು ಇಂತಹ ರೈತರನ್ನು ಗುರುತಿಸುವುದು ಮತ್ತು ಪ್ರೋತ್ಸಾಹಿಸುವುದು ತುಂಬಾ ಸಂತೋಷ ತಂದಿದೆ ಶಾಸಕ ಟಿ.ರಘುಮೂರ್ತಿ ಹೇಳಿದರು.
ಅವರು ತಾಲೂಕಿನ ರಾಮಜೋಗಿಹಳ್ಳಿಯಲ್ಲಿ ಇಂದು ಹಮ್ಮಿಕೊಂಡಿದ್ದAತಹ ಸಾಂಪ್ರದಾಯಿಕ ಜಾನುವಾರು ಸಾಕಾಣಿಕೆ ಮಾಡಿದಂತ ರೈತರಿಗೆ ಬಹುಮಾನ ವಿತರಣ ಕಾರ್ಯಕ್ರಮದಲ್ಲಿ ಮಾತನಾಡಿ ಡಾಕ್ಟರ್ ಬಿಆರ್.ಅಂಬೇಡ್ಕರ್ ಅವರ ಸಂವಿಧಾನದ ಆಶಯದಂತೆ ನಾವೆಲ್ಲರೂ ಕೂಡ ಕೆಲಸ ನಿರ್ವಹಿಸಬೇಕಿದೆ ದೇವರು ಕೊಟ್ಟಂತಹ ಈ ಜವಾಬ್ದಾರಿಯನ್ನು ಸಂವಿಧಾನದ ಕರ್ತವ್ಯದ ಮೂಲಕ ಜನರಿಗೆ ತಲುಪಿಸಿ ಸಾರ್ಥಕತೆಯನ್ನು ಮೆರೆಯೋಣವೆಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ತಹಶೀಲ್ದಾರ್ ಎನ್.ರಘುಮೂರ್ತಿ ಮಾತನಾಡಿ ಇಂತಹ ಯುವಕ ಸಂಘಗಳು ಮತ್ತು ಸೇವಾ ನಿರತ ಸಂಘಗಳು ಹೆಚ್ಚು ಹೆಚ್ಚು ಗ್ರಾಮಗಳಲ್ಲಿ ಸಂಘಟಿತರಾಗಬೇಕು ಸಮಾಜದಲ್ಲಿ ಕಷ್ಟದಲ್ಲಿರುವಂತಹ ಜನರಿಗೆ ನೆರವು ನೀಡಬೇಕು ಈ ಭಾಗದ ರೈತರು ಹೆಚ್ಚು ಹೆಚ್ಚು ಸಾಂಪ್ರದಾಯಿಕ ಕೃಷಿಯಲ್ಲಿ ತೊಡಗಿಕೊಳ್ಳಬೇಕು ಜೀವ ಅಮೃತ ಮತ್ತು ಕಾಂಪೋಸ್ಟ್ ಗೊಬ್ಬರಗಳ ಮೊರೆ ಹೋಗಬೇಕು ರೈತನೇ ದೇಶದ ಬೆನ್ನೆಲುಬು ಅನ್ನುತ್ತೇವೆ ಯಾವುದೇ ಕಾರಣಕ್ಕೂ ರೈತನು ಆತ್ಮವಿಶ್ವಾಸ ಕಳೆದುಕೊಳ್ಳಬಾರದು ದೇಶದಲ್ಲಿ ಇನ್ನೂ ಹೆಚ್ಚಿನ ಕೃಷಿಯನ್ನು ನೆಲೆಗೊಳಿಸಬೇಕು ಇದರ ಮುಖಾಂತರ ರೈತರು ಹೆಚ್ಚು ಹೆಚ್ಚು ಬೆಳೆಗಳನ್ನು ಬೆಳೆದು ಸ್ವಾವಲಂಬಿಗಳಾಗಬೇಕು ಇದರ ಮುಖಾಂತರ ಸ್ವಾಭಿಮಾನದಿಂದ ಬದುಕು ನಡೆಸಬೇಕು, ಶಾಸಕರ ಮತ್ತು ಜಿಲ್ಲಾಧಿಕಾರಿಗಳ ಆಶಯದಂತೆ ಸರ್ಕಾರದ ಸೌಲತ್ತುಗಳನ್ನು ತಾಲೂಕಿನ ಎಲ್ಲ ಜನತೆಯ ಮನೆ ಬಾಗಿಲಿಗೆ ತಲುಪಿಸಲಾಗಿದೆ ಹಲವಾರು ಗ್ರಾಮಗಳನ್ನು ಕಂದಾಯ ಇಲಾಖೆಯಲ್ಲಿ ಕೊಡ ಮಾಡುವಂತಹ ಪೌತಿಕತೆ, ಧರಾಕಾಸ್ತು ಜಮೀನಿನ ಪೋಡಿ ದಾರಿ ವಿವಾದಗಳು ಸ್ಮಶಾನದ ಸಮಸ್ಯೆಗಳು ಬೆಳೆ ಪರಿಹಾರ ಮುಂತಾದ ಕಂದಾಯ ಇಲಾಖೆಯ ಹಲವಾರು ಸಮಸ್ಯೆಗಳನ್ನು ಶೇಕಡ ನೂರಕ್ಕೆ ನೂರರಷ್ಟು ಬಗೆಹರಿಸಲಾಗಿದೆ, ಇನ್ನು ಹಲವಾರು ಗ್ರಾಮಗಳು ಉಳಿದಿದ್ದು ಇವುಗಳನ್ನು ಕೂಡ ಆಂದೋಲನದ ರೂಪದಲ್ಲಿ ಬಗೆಹರಿಸಲಾಗುವುದು ರೈತರು ಯಾವುದೇ ಕಾರಣಕ್ಕೂ ಭರವಸೆ ಕಳೆದುಕೊಳ್ಳಬಾರದೆಂದು ಮನವಿ ಮಾಡಿದರು.
ಕ್ಷೇತ್ರದ ಶಾಸಕರು ಮತ್ತು ತಾಲೂಕಿನ ತಹಶೀಲ್ದಾರರು ಜನಸಾಮಾನ್ಯರ ಅಭಿವೃದ್ಧಿಗೆ ತಕ್ಕಂತೆ ಕೆಲಸ ಮಾಡಿದರೆ ಕ್ಷೇತ್ರದ ಶ್ರೇಯಸ್ಸು ಮತ್ತು ಅಭಿವೃದ್ಧಿಯ ಸೂಚ್ಯಂಕ ಅಂತರಾಷ್ಟ್ರೀಯ ಮಟ್ಟಕ್ಕೂ ಕೊಂಡೊಯ್ಯಬಹುದೆAದು ಜನ ಸೇವಾ ಟ್ರಸ್ಟ್ ಗೌರವಾಧ್ಯಕ್ಷ ರಾಮಕೃಷ್ಣರೆಡ್ಡಿ ಹೇಳಿದರು.
ಚಳ್ಳಕೆರೆ ಕ್ಷೇತ್ರದ ಶಾಸಕರಾದ ಟಿ.ರಘುಮೂರ್ತಿ ಅವರು ನಿರಂತರ ಸಾರ್ವಜನಿಕರ ಒಟ್ಟಿಗಿದ್ದು ಕೆಲಸ ನಿರ್ವಹಿಸುತ್ತಿದ್ದಾರೆ ಹಾಗೆಯೇ ಚಳ್ಳಕೆರೆ ತಹಸಿಲ್ದಾರ್ ಎನ್ ರಘುಮೂರ್ತಿ ಸಾರ್ವಜನಿಕರ ಸಮಸ್ಯೆಗಳು ಗೊತ್ತಾದ ತಕ್ಷಣ ಅಲ್ಲಿಗೆ ಹಾಜರಾಗಿ ಎಂತದೇ ಸಮಸ್ಯೆಗಳಿದ್ದರೂ ಬಗೆಹರಿಸುತ್ತಾರೆ, ಇಂತಹ ಅಧಿಕಾರಿ ಮತ್ತು ಶಾಸಕರ ಜೋಡಿಗಳಿದ್ದರೆ ಕ್ಷೇತ್ರ ಮತ್ತು ತಾಲೂಕುಗಳು ಅಭಿವೃದ್ಧಿಯ ಪಥದಲ್ಲಿ ಸಾಗಿ ಈ ಅಭಿವೃದ್ಧಿಯ ಮಟ್ಟ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟಕ್ಕೂ ಕೊಂಡಯಬಹುದೆAದು ಹೇಳಿದರು.
ಉಪನ್ಯಾಸ ನೀಡಿದ ಪ್ರಗತಿಪರ ರೈತರ ಏಕಾಂತಪ್ಪ ಮಾತನಾಡಿ ರೈತರು ತಮ್ಮ ಸಾಂಪ್ರದಾಯಿಕ ಬೆಳೆಗಳಿಂದ ವಿಮುಖರಾಗ ಕೂಡದು ವೈಜ್ಞಾನಿಕವಾಗಿ ತಮ್ಮ ಬೆಳೆಗಳನ್ನು ಬೆಳೆಯಬೇಕು ಅವಮಾನ ಮತ್ತು ನೀರಿನ ಲಭ್ಯತೆಗನುಗುಣವಾಗಿ ತಂತ್ರಜ್ಞಾನವನ್ನು ಉಪಯೋಗಿಸಿ ಕೃಷಿ ಕ್ಷೇತ್ರದಲ್ಲಿ ಬದಲಾವಣೆ ಆಗಬೇಕು ಮಳೆ ಕಡಿಮೆ ಬೀಳುವಂತಹ ಇಂತಹ ತಾಲೂಕುಗಳಲ್ಲಿ ಸರ್ಕಾರವು ಹೆಚ್ಚಿನ ರೀತಿಯಲ್ಲಿ ರೈತರಿಗೆ ಪ್ರೋತ್ಸಾಹ ನೀಡಿ ಹೊಸ ತಂತ್ರಜ್ಞಾನದ ತರಬೇತಿ ನೀಡಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪ್ರಗತಿಪರ 25ರೈತರನ್ನು ಶಾಸಕರು ಸನ್ಮಾನಿಸಿದರು ಜನ ಸೇವಾ ಟ್ರಸ್ಟ್ ಅಧ್ಯಕ್ಷ ಹರೀಶ್, ಗೌರವಾಧ್ಯಕ್ಷ ರಾಮಕೃಷ್ಣರೆಡ್ಡಿ, ಗ್ರಾಪಂ.ಅಧ್ಯಕ್ಷ ರಾಮಸ್ವಾಮಿ, ನಾಯಕ್, ಗೋವಿಂದರೆಡ್ಡಿ, ಡಾಕ್ಟರ್ ಗೋವಿಂದರೆಡ್ಡಿ ಸ್ಥಳೀಯ ಮುಖಂಡರಾದ ದೇವರಾಜರೆಡ್ಡಿ, ಪಶುಸಂಗೋಪನ ಇಲಾಖೆಯ ಸಹಾಯಕ ನಿರ್ದೇಶಕ ರೇವಣ್ಣ, ಕೃಷಿ ಇಲಾಖೆ ಅಧಿಕಾರಿ ತಿಪ್ಪೆಸ್ವಾಮಿ, ಮತ್ತು ಎಲ್ಲಾ ಪ್ರಗತಿಪರ ರೈತರು ಉಪಸ್ಥಿತರಿದ್ದರು