ಚಳ್ಳಕೆರೆ : ಆಧುನಿಕ ಸಮಾಜದಲ್ಲಿ ಮೊಬೈಲ್, ಟಿ.ವಿ ಮತ್ತು ಇಂಟರ್ನೆಟ್ ಬಳಕೆಯಲ್ಲಿ ವಿದ್ಯಾರ್ಥಿಗಳ ಕಲಿಕಾ ಆಸಕ್ತಿ ಕುಂಠಿತವಾಗುತ್ತಿರುವುದು ಅಪಾಯಕಾರಿ ಬೆಳವಣಿಗೆ ಎಂದು ನಿವೃತ್ತ ಪ್ರಾಚಾರ್ಯ, ಪ್ರಗತಿಪರ ಚಿಂತಕ ಪ್ರೊ.ಜೆ. ಯಾದವರೆಡ್ಡಿ ಹೇಳಿದರು.
ತಾಲೂಕಿನ ಪಿ. ಮಹದೇವಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆ, ಶಾಲಾ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಗಡಿಭಾಗದ ಸಾಹಿತ್ಯ ಪ್ರತಿಭಾವಂತರ ಅಭಿನಂದನಾ’ ಕಾರ್ಯಕ್ರಮದಲ್ಲಿ ಮಾತನಾಡಿದರು. ಜ್ಞಾನ ಮತ್ತು ಭಾವಕೋಶ ಬೆಳವಣಿಗೆಗೆ ಮೊದಲು ಕುಟುಂಬ, ಸಂಬAಧಿಕರ ಪ್ರೀತಿ ವಿಶ್ವಾಸ ಮತ್ತು ಬೋಧಿಸುವ ಶಿಕ್ಷಕರ ಸಂಬAಧಗಳಲ್ಲಿ ಅನುಸಂಧಾನ ರೀತಿಯಲ್ಲಿ ವಿದ್ಯಾರ್ಥಿಗಳು ಬೆಳೆಯಬೇಕು. ಪ್ರೌಢಾವಸ್ಥೆಯಲ್ಲಿ ಪಂಚತAತ್ರ ಕತೆಗಳನ್ನು ಓದಿಕೊಳ್ಳುವ ಮೂಲಕ ಸಾಹಿತ್ಯ ಅಭಿರುಚಿ ರೂಢಿಸಿಕೊಳ್ಳಬೇಕು. ಇದರಿಂದ ಭೌದ್ದಿಕ ಮತ್ತು ಸಾಮಾಜಿಕ ಬದುಕಿನ ಸೂಕ್ಷö್ಮತೆ ಸೆಳೆತ ಅರ್ಥವಾಗುತ್ತದೆ. ಓದುವ ಹವ್ಯಾಸದಿಂದ ಪಡೆದುಕೊಂಡ ಜ್ಞಾನ ಸಂಪಾದನೆಯಿAದ ಅಂಬೇಡ್ಕರ್ ಅವರು ವಿಶ್ವಕ್ಕೆ ಆದರ್ಶ ಸ್ಥಾನದಲ್ಲಿದ್ದಾರೆ. ಸಮಾಜದ ಸಂಪನ್ಮೂಲತೆಯಿAದ ಪಡೆದುಕೊಳ್ಳುವ ಜ್ಞಾನಾರ್ಜನೆಯನ್ನು ಸ್ವಾರ್ಥಕ್ಕೆ ಬಳಸಿಕೊಳ್ಳದೆ ಸಮಾಜಕ್ಕೆ ಬಳಕೆ ಮಾಡಿದಾಗ ಮಾತ್ರ ಸಾರ್ಥಕವಾಗಲು ಸಾಧ್ಯ ಎನ್ನುವುದಕ್ಕೆ ಅಂಬೇಡ್ಕರ್ ಬದುಕು ಇತಿಹಾಸವಾಗಿದೆ. ಶಿಕ್ಷಣದಿಂದ ಸಮಾಜ ಮತ್ತು ದೇಶಕ್ಕೆ ಕೊಡುಗೆ ನೀಡುವ ಆದರ್ಶ ಗುರಿ ವಿದ್ಯಾರ್ಥಿಗಳಲ್ಲಿ ಇರುವ ರೀತಿಯಲ್ಲಿ ಪರಿಶ್ರಮದಿಂದ ಓದಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಗಡಿನಾಡು ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಎಚ್. ರಾಮಚಂದ್ರಪ್ಪ ಮಾತನಾಡಿ, ಗ್ರಾಮೀಣ ಜನ ಜೀವನದ ನಡುವೆ ಸಾಹಿತ್ಯ ಬದುಕನ್ನು ಆರಂಭಿಸಿದ ತಿಪ್ಪಣ್ಣಮರಿಕುಂಟೆ, ಇಲ್ಲಿನ ಸಂಸ್ಕೃತಿ ಮತ್ತು ಆಚರಣೆಗಳ ಸಂಬAಧ ನಡುವೆಯೆ ಸಾಹಿತ್ಯವನ್ನು ಆಸ್ವಾದಿಸಿ ಉತ್ತಮ ಬರಹಗಾರರೆನಿಸಿಕೊಂಡಿದ್ದಾರೆ. ಗಡಿಭಾಗದಲ್ಲಿ ಕನ್ನಡ ಭಾಷಾ ಸಂಘಟಕರಾಗಿ, ಸಾಹಿತ್ಯ ಅಭಿರುಚಿ ಬೆಳೆಸಿಕೊಂಡು ನಾಡಿನ ಸೇವಾ ಕಾರ್ಯಕ್ಕೆ ತೊಡಗಿಸಿಕೊಂಡಿರುವ ಕರ್ಲಕುಂಟೆ ತಿಪ್ಪೇಸ್ವಾಮಿ, ಯುವ ಸಮುದಾಯಕ್ಕೆ ಮಾದರಿಯಾಗಿದ್ದಾರೆ. ವಿದ್ಯಾರ್ಥಿ ದಿಸೆಯಲ್ಲಿ ಉತ್ತಮ ಸಾಧನೆ ಮಾಡುವ ಹವ್ಯಾಸದೊಂದಿಗೆ ಆದರ್ಶವಾಗಿ ಬೆಳೆಯಲು ಸ್ಥಳೀಯ ಸಾಧಕರ ಬದುಕಿನ ಅನುಕರಣೆ ತಿಳಿದುಕೊಳ್ಳಬೇಕು ಎಂದು ಹೇಳಿದರು.
ಇದೇ ವೇಳೆ 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಸ್ಥಾನಕ್ಕೆ ಭಾಜನರಾಗಿರುವ ಹಿರಿಯ ಕತೆಗಾರ ಬಿ.ತಿಪ್ಪಣ್ಣಮರಿಕುಂಟೆ, ಜಿಲ್ಲಾ ಕನ್ನಡ ರಾಜ್ಯೋತ್ಸವ ಪುರಸ್ಕೃತ ಕರ್ಲಕುಂಟೆ ತಿಪ್ಪೇಸ್ವಾಮಿ ಅವರನ್ನು ಆತ್ಮೀಯವಾಗಿ ಅಭಿನಂದಿಸಲಾಯಿತು.
ಶಾಲಾ ಸಮಿತಿ ಅಧ್ಯಕ್ಷ ಲಕ್ಷö್ಮಣಮೂರ್ತಿ, ಪ್ರಭಾರಿ ಮುಖ್ಯಶಿಕ್ಷಕ ಎ. ವೀರಣ್ಣ, ಶಿಕ್ಷಕರಾದ ಟಿ.ದೀನನಾಥ, ವೈ. ಶಶಿಕಲಾ, ಜಿ.ಟಿ. ಮಂಜುಳ, ಯಾಸ್ಮೀನ್ ಮತ್ತಿತರರು ಇದ್ದರು.