ಚಳ್ಳಕೆರೆ : ಪ್ರಸ್ತುತ ಕಲಿಕಾ ಕಾರ್ಯಕ್ರಮಕ್ಕೆ ಪೂರಕವಾದ ಕಲಿಕಾ ಚೇತರಿಕೆ ಕಾರ್ಯಕ್ರಮವು ಶಿಕ್ಷಕರಿಗೆ ಹಾಗೂ ಚಟುವಟಿಕೆ ಆಧಾರಿತ ಪಾಲಕರಿಗೆ ಈ ತರಬೇತಿ ವರದಾನವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಎಸ್ ಸುರೇಶ್ ಹೇಳಿದರು

ಅವರು ನಗರದ ಪಾವಗಡ ರಸ್ತೆ ಹೊರವಲಯದಲ್ಲಿರುವ ಆದರ್ಶ ವಿದ್ಯಾಲಯದಲ್ಲಿ ತಾಲೂಕು ಹಂತದ ಕಲಿಕಾ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದರು,

ಇಂದಿನ ಮಕ್ಕಳು ವಿದ್ಯಾವಂತರಾಗಬೇಕೆಂದರೆ ಮೊದಲು ಶಿಕ್ಷಕರಿಗೆ ಶಿಕ್ಷಣದ ತರಬೇತಿ ಅತ್ಯವಶ್ಯಕ ಶಿಕ್ಷಕರು ಮೌಲ್ಯಧಾರಿತ ಕಲಿಕೆಯಿಂದ ಮಕ್ಕಳ ಮನದಾಳಕ್ಕೆ ಹೋಗಿ ಅವರ ಪ್ರತಿಭೆಯನ್ನು ಹೊರ ತರಲು ಸಾಧ್ಯ,

ಆದ್ದರಿಂದ ಎರಡು ದಿನದ ಕಲಿಕಾ ತರಬೇತಿ ಕಾರ್ಯಕ್ರಮ ಹಾಗೂ ಚಟುವಟಿಕೆ ಆಧಾರಿತ ಕಲಿಕೆ ಪಾಲಕರಿಗೆ ಹಾಗೂ ಸಮುದಾಯಕ್ಕೆ ಹರಿವು ಮೂಡಿಸಿದಂತಾಗುತ್ತದೆ,

ಈ ಕಲಿಕೆ ಹಬ್ಬದಲ್ಲಿ ಚಳ್ಳಕೆರೆ ತಾಲೂಕಿನ ಎಲ್ಲಾ 31 ಕ್ಲಸ್ಟರ್ ನ 155 ಜನ ಸಂಪನ್ಮೂಲ ಶಿಕ್ಷಕರು ತರಬೇತಿಯಲ್ಲಿ ಭಾಗವಹಿಸಿ ನೃತ್ಯ ಹಾಡುಗಳೊಂದಿಗೆ ಶಿಕ್ಷಕರ ಹಾಗೂ ಶಿಕ್ಷಕಿಯರು ಗಮನ ಸೆಳೆದರು

ಈ ವೇಳೆ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಾರುತೇಶ್, ಎಪಿಸಿ ಮಂಜುನಾಥ್ , ಉಪನಿರ್ದೇಶಕ ಚಿತ್ರದುರ್ಗ ಜಿಲ್ಲೆ ಮತ್ತು ಬಿ ಆರ್ ಸಿ ಮಂಜಣ್ಣ, ಮುಖ್ಯ ಶಿಕ್ಷಕ ಅಶೋಕ್ ರೆಡ್ಡಿ , ಇನ್ನೂ ಎಲ್ಲಾ ಬಿ ಆರ್ ಪಿ ಇಸಿಓ ಮತ್ತು ಎಂ ಆರ್ ಪಿ ಕ್ಲಸ್ಟರ್ನ ಶಿಕ್ಷಕರು ಶಿಕ್ಷಕಿಯರು ವಿದ್ಯಾರ್ಥಿಗಳು ಹಾಜರಿದ್ದರು.

About The Author

Namma Challakere Local News
error: Content is protected !!