ರಾಮುದೊಡ್ಮನೆ ಚಳ್ಳಕೆರೆ
ಚಳ್ಳಕೆರೆ : ಹಾಗೋ ಇಗೋ ಸಾವಿನ ಮನೆ ಸೇರುವ ಮೂಕ ಪ್ರಾಣಿಯ ನರಳಾಟ ಒಂದೇಡೆ
ನರ ಭಕ್ಷರಕರ ಖರೀದಿ ಇನ್ನೋದೆಡೆ ಇಂತಹ ಮನಕಲುಕುವ ದೃಶ್ಯವನ್ನು ಚಳ್ಳಕೆರೆ ನಗರದ ಬಳ್ಳಾರಿ ರಸ್ತೆಯಲ್ಲಿ ಕಾಣಬಹುದು
ಹೌದು ನಿಜಕ್ಕೂ ಶೋಚನೀಯ ಇಂತಹ ಪರಿಸ್ಥಿತಿ ಯಾವ ಶತ್ರುವಿಗೂ ಬೇಡ ಸಾವಿನಿಂದ ದೂರ ಮಾಡುವ ಮೂಖಪ್ರಾಣಿಯ ಮೂಖವೇಧನೆಯನ್ನು ಅರ್ಥೈಸುವÀ ಮನುಷ್ಯ ಅದರ ಮೇಲೆ ಎಷ್ಟು ಲಾಭ ಮಾಡಬಹುದು ಎಂದು ಲೆಕ್ಕಾಚಾರ ಹಾಕುತ್ತಿದ್ದಾನೆ.
ಈಗೇ ಕಾಲ ಎಷ್ಟು ವಿಸ್ಮಯ ಸಾವಿನಲ್ಲೂ ಲೆಕ್ಕಾಚಾರ ಹಾಕುವ ಈ ಕಾಲಘಟ್ಟದಲ್ಲಿ ಅದರ ದೇಹದ ಮಾಂಸದ ಕೆಜಿ ಲೆಕ್ಕದ ತೂಕದಲ್ಲಿ ಅಳತೆ ಮಾಡುವ ಮಾನವನ ಗುಣ ಧರ್ಮ ಯಾವ ನಿಲುವಿನಡೆಗೆ ಸಾಗುತ್ತಿದೆ ಎಂಬುದು ತಿಳಿಯದಾಗಿದೆ.
ಪ್ರಾಣವನ್ನು ಉಳಿಸಬೇಕಾದ ಸಂದ್ಗತಿಯಲ್ಲಿ ಅದರ ದೇಹವನ್ನು ತೂಕದ ಲೆಕ್ಕಾದಲ್ಲಿ ವ್ಯಾಪಾರಿಕರಣ ಮಾಡುವ ಈ ಆಧುನಿಕ ಜಗತ್ತು ಎಷ್ಟೋಂದು ಬದಲಾಗಿದೆ.. ಮನುಷ್ಯ ಧರ್ಮ ಎತ್ತ ಸಾಗುತ್ತಿದೆ, ಎಂಬುದು ನಿಲಕದ್ದಾಗಿದೆ, ಈತಂಹ ಒಂದು ಘಟನೆಯನ್ನು ಗೋವುಗಳ ಆರಾಧ್ಯ ದೈವ ಎಂದು ಬಿಂಬಿತವಾದ ಬುಡಕಟ್ಟು ಸಂಪ್ರಾದಯಾಗಳೆ ಹಾಸುಹೊದ್ದಿರುವ ಚಳ್ಳಕೆರೆ ತಾಲೂಕಿನಲ್ಲಿ ಕಾಣಬಹುದಾಗಿದೆ.

ವಂಶಪರAರೆಯಾಗಿ ಸಾಕು ಪ್ರಾಣಿಗಳ ತವರೂರು ಎಂದು ಕರೆಸಿಕೊಂಡಿರುವ ಚಳ್ಳಕೆರೆಯಲ್ಲಿ ಈ ವಿಚಿತ್ರ ಘಟನೆಯಿಂದ ಮನಸ್ಸು ಕದಡಿಹೊಗಿದೆ. ಇಂತಹ ದೃಶ್ಯವೊಂದು ಚಳ್ಳಕೆರೆ ನಗರದ ಹೃದಯ ಭಾಗದ ನೆಹರು ವೃತ್ತದಲ್ಲಿ ಕಂಡ ನನ್ನ ಕಣ್ಣುಗಳು ಮಂಕಾದವು. ಮುಂಜಾನಯ ಹೊತ್ತಲ್ಲಿ ಚುಮು ಚುಮು ಚಳಿಯಲ್ಲಿ ಗ್ರಾಮೀಣ ಪ್ರದೇಶದಿಂದ ಹೊತ್ತು ತಂದ ಆ ಬಡ ವ್ಯಕ್ತಿಯ ಕಾಲಡಿಯಲ್ಲಿ ಬಿದ್ದು ಹೊದ್ದಾಡುವ ಪ್ರಾಣಿಯ (ಕುರಿಮರಿಯ)ದೃಶ್ಯ ಒಂದೆಡೆ ಅದೇ ಪ್ರಾಣಿಯ ದೇಹವ ಮೇಲೆ ಅದರ ದೇಹದ ಮಾಂಸದ ತೂಕದ ಲೆಕ್ಕಾಚಾರ ಮಾಡುವ ಕಟುಕರ ಕರುಣೆ ಎಲ್ಲಿ ಮಾಯವಾಯಿತು..! ಎಂಬುAದು ಕಾಣದೆ ಕಣ್ಣಾಂಚಲಿನ ನೀರು ಜಿನುಗಿತು.

ಮರೆಯುವ ಮುನ್ನ :
ಇಂತಹ ಘಟನೆಗಳಿಗೆ ಕಡಿವಾಣ ಹಾಕಬೇಕಾದ ಚಳ್ಳಕೆರೆ ನಗರಸಭೆ ಅಧಿಕಾರಿಗಳಿಗೆ ನನ್ನ ದಿಕ್ಕಾರವಿರಲಿ.. ಇಂತಹ ಹಳ್ಳಿ ಪ್ರಾಣಿಗಳ ಮೇಲೆ ನಿಗಾವಿರಲಿ ಪ್ರತಿದಿನವೂ ಇಂತಹ ಘಟನೆಗಳು ಜರುಗುತ್ತಲೆ ಇವೆ ಆದ್ದರಿಂದ ಅನಾರೋಗ್ಯದ ಪ್ರಾಣಿಗಳ ಬಲಿದಾನ ನಿಲ್ಲಿಸಲು ನಗರಸಭೆ ಅಧಿಕಾರಿಗಳು ಮುಂದಾಗುವರೋ ಕಾದು ನೋಡಬೇಕಿದೆ.

About The Author

Namma Challakere Local News
error: Content is protected !!