ಸ್ಮಶಾನ ಜಾಗ ಅಕ್ರಮ ಒತ್ತುವರಿದಾರರಿಗೆ ಕಟ್ಟುನಿಟ್ಟಿನ ಕ್ರಮ : ತಹಶಿಲ್ದಾರ್ ಎನ್ ರಘುಮೂರ್ತಿ ಸೂಚನೆ
ಚಳ್ಳಕೆರೆ : ಗ್ರಾಮೀಣ ಪ್ರದೇಶದ ಮುಗ್ಧ ಜನರಿಗೆ ಸ್ಮಶಾನ ಜಾಗ ನೀಡಲು ಕಂದಾಯ ಇಲಾಖೆ ಕಳೆದ ಸುಮಾರು ವರ್ಷಗಳ ಹಿಂದೆ ಸರಕಾರದ ಆದೇಶದ ಮೂಲಕ ಸ್ಮಶಾನ ಜಾಗ ಮಂಜೂರು ಮಾಡಲಾಗಿದೆ.
ಆದರೆ ಕೆಲವು ಪಟ್ಟ ಭದ್ರರು ಭೂಮಿಯ ದುರಾಸೆಗೆ ಸ್ಮಶಾನ ಜಾಗವನ್ನು ಸಹ ಬಿಡದೆ ಅಕ್ರಮವಾಗಿ ಒತ್ತುವಾರಿ ಮಾಡಿಕೊಂಡಿರುವುದು ಸ್ಥಳೀಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ತಲೆನೋವು ತಂದಿದೆ.
ಒಂದು ಕಡೆ ಸರಕಾರ ಮಂಜೂರು ಮಾಡಿದರೂ ಅದನ್ನು ಸೂಕ್ತ ರೀತಿಯಲ್ಲಿ ಸಾರ್ವಜನಿಕರ ಸೇವೆಗೆ ತಲುಪಿಸುವಲ್ಲಿ ಕೊಂಚ ತಡವಾಗುತ್ತಿದೆ.
ಇನ್ನೂ ಇಂತಹ ಪಟ್ಟ ಭದ್ರರನ್ನು ಎಡೆಮುರಿ ಕಟ್ಟಿ ಸ್ಮಶಾನ ಜಾಗ ಬಿಡಿಸಲು ಸ್ಥಳೀಯ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ತೀರ್ಮಾನ ದಂತೆ ತಾಲೂಕು ದಂಡಧಿಕಾರಿಗಳು ಹಾಗೂ ಕಂದಾಯ ಇಲಾಖೆ, ತಾಪಂ ಅಧಿಕಾರಿಗಳು ಸನ್ನದರಾಗಿ ಸ್ಮಶಾನ ಜಾಗ ಬೀಡಿಸಲು ಈಗಾಗಲೇ ಸಮಯ ನಿಗದಿಪಡಿಸಿ ಪ್ರತಿ ಹಳ್ಳಿ ಹಳ್ಳಿಗೆ ಬೇಟಿ ನೀಡಿ ಸರ್ವೇ ಮೂಲಕ ಸ್ಮಶಾನ ಜಾಗ ಅಭಿವೃದ್ಧಿಗೆ ತಾಲೂಕು ಆಡಳಿತ ಕಂಕಣ ಬದ್ಧವಾಗಿದೆ.
ತಾಲೂಕು ಆಡಳಿತ ತಹಶಿಲ್ದಾರ್ ಎನ್ ರಘುಮೂರ್ತಿ ಹಾಗೂ
ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಹೊನ್ನಯ್ಯ, ಜಂಟಿ ಕಾರ್ಯಾಚರಣೆಯಲ್ಲಿ ತಾಲೂಕಿನ ಎಲ್ಲಾ ಗ್ರಾಮಗಳಿಗೆ ಸ್ಮಶಾನ ಭೂಮಿ ನೀಡುವ ಮಹತ್ವದ ಯೋಜನೆಗೆ ಕಟಿ ಬದ್ಧರಾಗಿದ್ದಾರೆ.
ಇದಕ್ಕೆ ಪೂರಕವಾಗಿ ಸ್ಥಳೀಯ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಅಧ್ಯಕ್ಷತೆಯಲ್ಲಿ ಪ್ರತಿವಾರ ಪ್ರಗತಿ ಪರೀಶಿಲನೆಯಲ್ಲಿ ಪ್ರಥಮ ಅಜೆಂಡವಾಗಿ ಸ್ಮಶಾನ ಭೂಮಿ ಪ್ರಗತಿ ಕಾಣುತ್ತದೆ ಈಗೇ ತಾಲೂಕಿನ ಪ್ರತಿಯೊಂದು ಗ್ರಾಮಗಳು ಸಮಸ್ಯೆ ಮುಕ್ತ ಹಾಗೂ ಸ್ಮಶಾನ ಮುಕ್ತ ಗ್ರಾಮಗಳನ್ನಾಗಿ ಮಾಡಲು ಅಧಿಕಾರಿಗಳು ಪಣತೋಡುವ ನಿಟ್ಟಿನಲ್ಲಿ ಮಾದರಿ ತಾಲೂಕಿಗೆ ಶ್ರಮಿಸುತ್ತಿದ್ದಾರೆ.
ಬಾಕ್ಸ್ ಮಾಡಿ :
ಕಳೆದ ಹಲವು ವರ್ಷಗಳ ಹಿಂದೆ ಕಂದಾಯ ಇಲಾಖೆಯಿಂದ ತಾಲೂಕಿನ ಸುಮಾರು ಗ್ರಾಮಗಳಿಗೆ ಸ್ಮಶಾನ ಭೂಮಿ ನಿಗಧಿ ಮಾಡಿದೆ ಆದರೆ ಕೆಲವು ಕಾರಣಗಳಿಂದ ಸ್ಥಳೀಯವಾಗಿ ಅಭಿವೃದ್ಧಿ ಪಡಿಸಬೇಕಾದ ಅಧಿಕಾರಿಗಳು ವಿಫಲರಾಗಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವರು ನಿಗಧಿ ಪಡಿಸಿದ ಸ್ಮಶಾನ ಜಾಗದಲ್ಲಿ ಅಕ್ರಮವಾಗಿ ಕಣ, ಜಮೀನು ಮಾಡಿಕೊಂಡು ಸುಕಸುಮ್ಮನೆ ಕಿರಿಕಿರಿಯನ್ನುಂಟು ಮಾಡುವುದು ಕಂಡು ಬಂದಿದೆ, ಮುಂದಿನ ದಿನಗಳಲ್ಲಿ ಯಾರೇ ಹಾದರೂ ಸ್ಮಶಾನ ಜಾಗ ಒತ್ತುವರಿ ಮಾಡಿಕೊಂಡಿರುವುದು ಕಂಡು ಬಂದರೆ ಕ್ರಿಮಿನಲ್ ಪ್ರಕರಣ ದಾಖಲು ಮಾಡಲಾಗುವುದು ಎಂದು ಕಟ್ಟೆಚ್ಚರ ನೀಡಿದ್ದಾರೆ.
–ತಹಶಿಲ್ದಾರ್ ಎನ್ .ರಘುಮೂರ್ತಿ