ಚಳ್ಳಕೆರೆ : ಇನ್ನೊಬ್ಬರ ಮುಖದಲ್ಲಿರುವಂತಹ ನಗುವಿಗೆ ನಾವು ಯಾವಾಗ ಕಾರಣವಾಗುತ್ತೇವೋ ಆಗ ನಮ್ಮ ಬದುಕು ಸಾರ್ಥಕವೆನಿಸುತ್ತದೆ ಎಂದು ತಹಸಿಲ್ದಾರ್ ಎನ್.ರಘುಮೂರ್ತಿ ಹೇಳಿದರು
ಅವರು ಚಿತ್ರದುರ್ಗ ತಾಲೂಕಿನ ಪ್ರಬಾರಿ ತಹಶೀಲ್ದಾರ್ ಹುದ್ದೆ ಅಲಂಕರಿಸಿ ಚಿತ್ರದುರ್ಗ ತಾಲೂಕ ವ್ಯಾಪ್ತಿಯ ಮುದ್ದಾಪುರ ಗ್ರಾಮ ಪಂಚಾಯಿತಿ ಗ್ರಾಮದ ಚಿಕ್ಕ ಗೊಂಡನಹಳ್ಳಿ ಮತ್ತು ಮುದ್ದಾಪುರ ಗ್ರಾಮಕ್ಕೆ ತೆರಳಿ ಗ್ರಾಮಸ್ಥರು ನೀಡಿದ ಮನವಿ ಮೆರೆಗೆ ಮಾತನಾಡಿದ ಅವರು, ಮುದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ 5ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಈ ಗ್ರಾಮಗಳಲ್ಲಿ ಇರುವಂತ ಸಮಸ್ಯೆಗಳಾದಂತಹ ಸ್ಮಶಾನ ಒತ್ತುವರಿ, ತೆರವು ದಾರಿವಿವಾದ ಸಾಮಾಜಿಕ ಭದ್ರತಾ ಪಿಂಚಣಿಗಳು ಪಾವತಿ ಖಾತೆಗಳು ದರಕಾಸ್ತು ಜಮೀನಿನ ಪೋಡಿ ಸೇರಿದಂತೆ ಕಂದಾಯ ಇಲಾಖೆಯ ಎಲ್ಲ ಸಮಸ್ಯೆಗಳನ್ನು ಕೂಡ ನೂರಕ್ಕೆ ನೂರರಷ್ಟು ನಾಲ್ಕು ದಿನಗಳೊಳಗೆ ಬಗೆಹರಿಸುವಂತೆ ರಾಜಸ್ವ ವೀಕ್ಷಕರು ಮತ್ತು ಗ್ರಾಮ ಲೆಕ್ಕಾಧಿಕಾರಿಗಳಿಗೆ ತಹಸಿಲ್ದಾರ್ ಎನ್.ರಘುಮೂರ್ತಿ ಸೂಚಿಸಿದರು

ಚಳ್ಳಕೆರೆ ತಾಲೂಕಿನ ಗ್ರಾಮಗಳನ್ನು ಸಮಸ್ಯೆ ಮುಕ್ತ ಗ್ರಾಮಗಳನ್ನಾಗಿ ಮಾಡಿದ ರೀತಿಯಲ್ಲಿ ನಮ್ಮ ಪಂಚಾಯಿತಿಯನ್ನು ಕೂಡ ಸಮಸ್ಯೆಮುಕ್ತ ಗ್ರಾಮವನ್ನಾಗಿ ಮಾಡಲು ಆಗ್ರಹಿಸಿ ಸ್ಮಶಾನ ಮತ್ತು ದಾರಿಯ ಸಮಸ್ಯೆಗಳು ತುಂಬಾ ಗಂಭೀರವಾಗಿದ್ದು ಇವುಗಳನ್ನು ಬಗೆಹರಿಸುವಂತೆ ಆಗ್ರಹಿಸಿದಾಗ ತಕ್ಷಣಕ್ಕೆ ಸ್ಪಂದಿಸಿದ ತಹಶೀಲ್ದಾರ್ ಎನ್.ರಘುಮೂರ್ತಿ ಸ್ಥಳೀಯ ಕಂದಾಯ ಪರಿ ವೀಕ್ಷಕರು ಗ್ರಾಮ ಲೆಕ್ಕಾಧಿಕಾರಿ ಮತ್ತು ಉಪ ತಹಶಿಲ್ದಾರ್ ರೊಂದಿಗೆ ಮುದ್ದಾಪುರ ಗ್ರಾಮಕ್ಕೆ ಭೇಟಿನೀಡಿ ಸಮಸ್ಯೆ ಪರಿಶಿಲಿಸಿದರು.
ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಶೋಷಿತರ ಬಡವರ ಮತ್ತು ಅಸಾಹಾಯಕರ ಇಂತಹ ಕೆಲಸಗಳನ್ನು ಆಂದೋಲನ ರೂಪದಲ್ಲಿ ಕಾಲನಿಗದಿ ಮಾಡಿಕೊಂಡು ಮಾಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ, ಜೊತೆಗೆ ಸರ್ಕಾರದ ನಿರ್ದೇಶನವೂ ಕೂಡ ಇದೇ ಆಗಿದೆ ಹಾಗೂ ಸರ್ಕಾರದ ಆಶಯವಿದೆ ಹಾಗಾಗಿ ಯಾವುದೇ ಸಾರ್ವಜನಿಕರು ಕಂದಾಯ ಇಲಾಖೆಯ ಎಂತಹ ಸಮಸ್ಯೆಗಳು ಇದ್ದರೂ ಕೂಡ ಆತಂಕ ಪಡುವ ಅಗತ್ಯವಿಲ್ಲ ಇಲಾಖೆಯಿಂದ ಕೂಡ ಮಾಡುವಂತಹ ಎಲ್ಲ ಸವಲತ್ತುಗಳನ್ನು ಕೂಡ ಇಂತಹ ವರ್ಗದ ರೈತರ ಮನೆ ಬಾಗಿಲಿಗೆ ತಲುಪಿಸಲಾಗುವುದು ಗಂಭೀರವಾದ ಸಮಸ್ಯೆಗಳಿದ್ದಲ್ಲಿ ತಕ್ಷಣ ಇಲಾಖೆಯ ಗಮನಕ್ಕೆ ತರುವಂತೆ ಪಂಚಾಯಿತಿಯ ಪ್ರತಿನಿಧಿಗಳಿಗೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸಂತೋಷ್, ಗ್ರಾಮ ಪಂಚಾಯತಿ ಸದಸ್ಯ ಲಿಂಗರಾಜು, ರಾಜಶೇಖರ್, ನಾಗರಾಜ್, ರೂಮಗಟ್ಟೆ ಮಂಜು, ಕಪ್ಪನಹಳ್ಳಿ ಸಂತೋಷ, ರೈತ ಸಂಘದ ರುದ್ರಸ್ವಾಮಿ, ಪ್ರಕಾಶ್ ರಾಜಸ್ಥ ನಿರೀಕ್ಷಕರದಂತ ಯೋಗೀಶ್ ಮತ್ತು ಗ್ರಾಮಸ್ಥರುಗಳು ಉಪಸ್ಥಿತರಿದ್ದರು

About The Author

Namma Challakere Local News
error: Content is protected !!