ನಗರದ ಹೆಚ್ ಪಿ ಪಿ ಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಪಾಲಕ ಎಸ್.ಪಾಪಣ್ಣ ಇವರಿಗೆ ಪಿಹೆಚ್‌ಡಿ ಪದವಿ
ಚಳ್ಳಕೆರೆ: ನಗರದ ಹೆಚ್ ಪಿ ಪಿ ಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಯ್ಕೆ ಶ್ರೇಣಿ ಗ್ರಂಥಪಾಲಕ ಎಸ್.ಪಾಪಣ್ಣ ಇವರಿಗೆ ಭಾರತೀಯರ್ ವಿಶ್ವವಿದ್ಯಾಲಯ ಪಿಹೆಚ್‌ಡಿ ಪದವಿ ಘೋಷಿಸಿದೆ.
ಪಾಪಣ್ಣನವರು ತುಮಕೂರು ವಿಶ್ವವಿದ್ಯಾಲಯ ಡೆಪ್ಯೂಟಿ ಗ್ರಂಥಪಾಲಕ ಡಾ.ಬಿ. ರವ್ವಿವೆಂಕಟ್ ಮಾರ್ಗದರ್ಶನದಲ್ಲಿ “ಅವೈಲೆಬಿಲಿಟಿ ಅಂಡ್ ಯುಜ್ ಆಫ್ ಇನ್ಫರಮೇಷನ್ ಸೋರ್ಸಸ್ ಅಂಡ್ ಸರ್ವಿಸ್ ಫೆಸಿಲಿಟೀಸ್ ಇನ್ ಫಸ್ಟ್ ಗ್ರೇಡ್ ಕಾಲೇಜ್ ಲೈಬ್ರರೀಸ್ ಆಫ್ ಚಿತ್ರದುರ್ಗ ಜಿಲ್ಲೆ ಏ ಯುಜರ್ಸ್ ಸರ್ವೆ” ಎಂಬ ಮಹಾಪ್ರಬಂಧವನ್ನು ಮಂಡಿಸಿದ್ದಕ್ಕಾಗಿ ಅತೀ ಶೀಘ್ರದಲ್ಲಿ ನಡೆಯುವ ಘಟಿಕೋತ್ಸವದಲ್ಲಿ ಇವರಿಗೆ ಡಾಕ್ಟರೆಟ್ ಪದವಿಯನ್ನು ಪ್ರಧಾನ ಮಾಡಲಾಗುವುದು ಎಂದು ವಿವಿ ಮೂಲಗಳು ತಿಳಿಸಿವೆ.