ಚಳ್ಳಕೆರೆ : ಹಳೆ ವರ್ಷದಲ್ಲಿ ಕೆಲವು ಹಿನ್ನಡೆಯಾದ ಅಭಿವೃದ್ಧಿಗೆ ನೂತನ ವರ್ಷದಲ್ಲಿ ಸಾಧನೆ ಮಾಡಬೇಕು ಒಟ್ಟಾರೆ ನಗರದ ಸರ್ವತೋಮುಖ ಅಭಿವೃದ್ಧಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸರ್ವ ಸದಸ್ಯರ ವಿಶ್ವಾಸದಲ್ಲಿ ನಗರಸಭೆ ಅಭಿವೃದ್ಧಿ ಪಥದತ್ತ ಕೊಂಡುಯ್ಯುಬೇಕು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದ್ದಾರೆ.
ಅವರು ನಗರದ ನಗರಸಭೆ ಸಭಾಗಂಣದಲ್ಲಿ ನಗರಸಭೆ ಅಧ್ಯಕ್ಷೆ ಸುಮಕ್ಕ, ಹಾಗೂ ಸದಸ್ಯರು, ಪೌರಾಯುಕ್ತ ಸಿ.ಚಂದ್ರಪ್ಪ, ಕಛೇರಿ ಸಿಬ್ಬಂದಿ ಆಯೋಜಿಸಿದ್ದ ನೂತನ ಹೊಸ ವರ್ಷ ಆಚರಣೆಯಲ್ಲಿ ಶಾಸಕ ಟಿ.ರಘುಮೂರ್ತಿ ಕೆಕ್ ಕಟ್ ಮಾಡುವ ಮೂಲಕ ನೂತನ ವರ್ಷಕ್ಕೆ ಮುನ್ನುಡಿ ಬರೆದರು..
ನಂತರ ಪೌರಾಯುಕ್ತ ಸಿ.ಚಂದ್ರಪ್ಪ ಹಾಗೂ ಸಿಬ್ಬಂದಿಗೆ ನೀವು ಮಾಡುವ ಕಾರ್ಯ ಈಡೀ ನಗರದ ಜನತೆಯಲ್ಲಿ ಹಚ್ಚಹಳೆಯದೆ ಉಳಿಯುತ್ತದೆ ಆದ್ದರಿಂದ ಪ್ರತಿಯೊಂದು ಕಾರ್ಯದಲ್ಲಿ ನಿಮ್ಮ ಸೇವೆ ಅನನ್ಯ, ಹೊಸ ವರ್ಷ ನಿಮ್ಮ ಬಾಳಲ್ಲಿ ಹೊಸ ಬೆಳಕನ್ನು ತರಲಿ ಎಂದು ಆಶಿಸಿದರು.
ಇನ್ನೂ ಈದೇ ಸಂಧರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸುಮಕ್ಕ, ಸದಸ್ಯೆ ಸುಮಾ, ಕವಿತಾ, ಸುಜಾತಾ ಪಾಲಯ್ಯ, ರಮೇಶ್ ಗೌಡ, ಪ್ರಕಾಶ್, ವೀರಭದ್ರಯ್ಯ, ವೆಂಕಟೇಶ್, ರಾಘವೇಂದ್ರ, ಪ್ರಸನ್ನ ಕುಮಾರ್, ಬೊರಣ್ಣ, ಕೃಷ್ಣಮೂರ್ತಿ, ಪಾಲಯ್ಯ, ಇತರರು ಇದ್ದರು.