ಚಳ್ಳಕೆರೆ : ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಗುಣವಾಗಿ ನೂತನವಾಗಿ ನಿರ್ಮಾಣವಾಗುವ ಭೋಧನ ಕೊಠಡಿಗಳ ಕಾಮಗಾರಿ ಶೀಘ್ರದಲ್ಲಿ ಮುಗಿಸಬೇಕು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಅವರು ನಗರದ ಹೆಚ್‌ಪಿಪಿಸಿ ಪ್ರಥಮ ದರ್ಜೆ ಕಾಲೇಜು ಸಂಭಾಗಣದಲ್ಲಿ ಆಯೋಜಿಸಿದ್ದ ಸಿಸಿಡಿಸಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು, ಕಾಲೇಜಿನಲ್ಲಿ ಮೂಲ ಭೂತ ಸೌಲಭ್ಯಗಳ ಬಗ್ಗೆ ಅತೀ ತುರ್ತಾಗಿ ಗಮನಹರಿಸಿ ರೂಪರೇಷಿ ತಯಾರಿಸಬೇಕು, ವಿದ್ಯಾರ್ಥಿಗಳಿಗೆ ಅನುಗುಣವಾಗು ಕುಡಿಯುವ ನೀರು, ಶೌಚಾಲಯ, ಭೋದನಾ ಕೊಠಡಿಗಳು ಈಗೇ ಅವಶ್ಯಕವಾದ ಸೌಲಭ್ಯ ಹೊದಗಿಸಬೇಕು, ಈಡೀ ತಾಲೂಕಿನಲ್ಲಿ ಮಾದಿರಿಯಾಗಿ ವಿಶ್ವವಿದ್ಯಾಲಯದ ಮಾದರಿಯ ಕಾಲೇಜು ನಮ್ಮ ಕಾಲೇಜು ಕಟ್ಟಡ ಮೂಡಿ ಬಂದಿದೆ ಇನ್ನೂ ಕೆಲವೆ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಲಭ್ಯವಾಗಲಿದೆ, ಕಾಲೇಜಿನಲ್ಲಿ ಸುಮಾರು 2600 ಜನ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದರು.
ಇನ್ನೂ ಕೆಲವೆ ದಿನಗಳಲ್ಲಿ ಕಾಲೇಜಿಗೆ ನ್ಯಾಕ್ ಸಮಿತಿ ಆಗಮಿಸುವುದರಿಂದ ಕಾಲೇಜಿನ ಅಭಿವೃದ್ದಿಗೆ ಶ್ರಮಿಸಬೇಕು ಉತ್ತಮ ಶ್ರೇಣಿ ಪಡೆಯುವುದ ಮೂಲಕ ಕಾಲೇಜಿಗೆ ಕಿರ್ತಿ ತರಬೇಕು ಎಂದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ರಂಗಪ್ಪ ಹಾಗೂ ಉಪನ್ಯಾಸಕರುಗಳು, ಹೌಸಿಂಗ್ ಬೋರ್ಡ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶರಣಪ್ಪ, ಎ.ಈ.ಈ. ಜಿಯಾವುಲ್ಲ, ಸುನಿಲ್, ಕಾಲೇಜು ಸಮಿತಿಯ ಸದಸ್ಯರುಗಳಾದ ಕುಶಾಲಪ್ಪ, ಅನ್ವರ್ ಮಾಸ್ಟರ್, ಮಂಜುಳಮ್ಮ ತ್ಯಾಗರಾಜ್, ಮಂಜುಳಮ್ಮ, ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಪ್ರಕಾಶ್‌ಮೂರ್ತಿ, ರುದ್ರಮುನಿ, ಮತ್ತು ಕಾಲೇಜು ಉಪನ್ಯಾಸಕರುಗಳು ಉಪಸ್ಥಿತರಿದ್ದರು