ಚಳ್ಳಕೆರೆ
ಕನ್ನಡ ನೆಲ ಕನ್ನಡ ಜಲ ಕನ್ನಡ ಸಂಸ್ಕೃತಿಯನ್ನು ರಾಜ್ಯದ ಉದ್ದಗಲಕ್ಕೂ ಹರಡಿಸಿದ ಮೇರು ನಟ ಸಾಹಸಸಿಂಹ ಡಾಕ್ಟರ್ ವಿಷ್ಣುವರ್ಧನ್ ಕನ್ನಡದ ಉಸಿರಾಗಿ ಬಂದಿದ್ದಾರೆ ಎಂದು ತಹಸಿಲ್ದಾರ್ ಎನ್ ರಘು ಮೂರ್ತಿ ಹೇಳಿದರು
ಇವರು ನಗರದ ಹೃದಯ ಭಾಗವಾದ ನೆಹರುರತ್ತದ ಬಳಿ 13ನೇ ವರ್ಷದ ಸ್ಮರಣಾರ್ಥಕವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ಹಾರ ಸಲ್ಲಿಸಿ ಮಾತನಾಡಿದರು
ಸಾಹಸಸಿಂಹ ಡಾಕ್ಟರ್ ವಿಷ್ಣುವರ್ಧನ್ ರವರು ಒಬ್ಬ ಮೇರು ನಟ ಕನ್ನಡದ ನೆಲ ಜಲ ಸಂಸ್ಕೃತಿಯನ್ನು ನಮ್ಮ ನೆಲಗಟ್ಟಿನಲ್ಲಿ ಅನೇಕ ಚಿತ್ರಗಳಲ್ಲಿ ನಟಿಸಿ ಸಾಮಾಜಿಕ ಹಾಗೂ ಪೌರಾಣಿಕ ಚಲನಚಿತ್ರ ನಟಿಸಿ ಕರ್ನಾಟಕದ ಹೆಮ್ಮೆಯ ಪುತ್ರರಾಗಿದ್ದಾರೆ ಇವರು ನಟಿಸಿದ ಕೃಷ್ಣ ರುಕ್ಮಣಿ ಚಿತ್ರವು ರಾಜ್ಯದ ಜನತೆಗೆ ಹೆಮ್ಮೆ ತರುವಂತ ಕನ್ನಡ ಸಂಸ್ಕೃತಿಯನ್ನು ಎತ್ತಿ ಹಿಡಿದಿದ್ದಾರೆ ಅಲ್ಲದೆ ನಾಗರಹಾವು ಚಿತ್ರದಲ್ಲಿ ಒಂದೇ ಹಾಡಿನಲ್ಲಿ ಚಿತ್ರದುರ್ಗದ ಇತಿಹಾಸವನ್ನು ಸಾರಿರುವ ಮಹಾನ್ ಮೇರು ನಟ ಡಾಕ್ಟರ್ ವಿಷ್ಣುವರ್ಧನ್ ರವರು ಇಂಥವರ ನಡೆ ನುಡಿಗಳನ್ನು ಮಾದರಿಯಾಗಿ ತೆಗೆದುಕೊಂಡು ಅವರ ದಾರಿಯಲ್ಲಿ ಸಾಗಬೇಕು ಎಂದರು
ಈ ವೇಳೆ ಡಾಕ್ಟರ್ ವಿಷ್ಣುವರ್ಧನ್ ಬಳಗದ ಅಧ್ಯಕ್ಷ ರಘುವೀರ್ ಗೌರವಾಧ್ಯಕ್ಷ ರವಿ ಕರಣ ಚೇತನ್ ಕುಮಾರ್ ಸಿದ್ದಾಪುರ ಮಂಜುನಾಥ್ ಕೃಷ್ಣ ಶಾಂತಣ್ಣ ಕ್ರಿಕೆಟ್ ಸತೀಶ್ ರಾಮಾಚಾರಿ ಅಭಿಲಾಶ್ ಭಾಷಾ ನೂರುಲ್ಲಾ ಹರೀಶ್ ಗಾಯಕಿ ಸುಮಾ ಚಂದ್ರ ಚಾರ್ ಆದರ್ಶ್ ಇನ್ನೂ ಹಲವಾರು ಅಭಿಮಾನಿರೊಂದದವರು ಹಾಜರಿದ್ದರು