ಚಳ್ಳಕೆರೆ : ಶ್ರೀ ರಾಮ ಸಮರ್ಥ ಪರಮ ಪೂಜ್ಯ ಶ್ರೀ ದತ್ತಾವಧೂತ ಗುರುಗಳ ದಿವ್ಯ ಉಪಸ್ಥಿತಿಯಲ್ಲಿ ರಾಮತಾರಕ ಹೋಮ ಮತ್ತು ಸಂಗವನ್ನು ಜ.08 ಭಾನುವಾರ, ಶ್ರೀ ಗಾಯಿತ್ರಿ ಕಲ್ಯಾಣ ಮಂಟಪ, ವಾಲ್ಮೀಕಿ ನಗರದಲ್ಲಿ ಆಯೋಜಿಸಲಾಗಿದೆ ಆದ್ದರಿಂದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆ ಭಾಗವಹಿಸಬೇಕು ಎಂದು ಸ್ವಾಮಿಜಿ ಹೇಳಿದ್ದಾರೆ.
ಸದ್ಗುರು ಶ್ರೀ ಬ್ರಹ್ಮಚೈತನ್ಯ ಮಹಾರಾಜರ ಮತ್ತು ಸದ್ಗುರು ಶ್ರೀ ಬ್ರಹ್ಮಾನಂದ ಮಹಾರಾಜರ ಕೃಪೆಯಿಂದ ಹಾಗೂ ಶ್ರೀ ಕ್ಷೇತ್ರ ಹೆಬ್ಬಳ್ಳಿಯ ಪರಮಪೂಜ್ಯ ಶ್ರೀ ದತ್ತಾವಧೂತ ಗುರುಗಳ ಆಶೀರ್ವಾದ ಹಾಗೂ ಅವರ ದಿವ್ಯ ಉಪಸ್ಥಿತಿಯಲ್ಲಿ “ಲೋಕಕಲ್ಯಾಣಾರ್ಥ ಹೋಮಗಳನ್ನು ಹಾಗೂ “ನಾಮ ಸಾಧನ ಸತ್ಯಂಗ’ವನ್ನು ಶ್ರೀ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಈ ಕಾರ್ಯಕ್ರಮಗಳಲ್ಲಿ ತಾವು ಭಾಗವಹಿಸಿ ಭಗವಂತನ ಮತ್ತು ಸದ್ಗುರುಗಳ ಕೃಪೆಗೆ ಪಾತ್ರರಾಗಬೇಕಾಗಿ ದೇವಾಸ್ತಾನ ಮಂಡಳಿ ಪ್ರಾರ್ಥನೆ ಮಾಡಿದೆ.

ಕಾರ್ಯಕ್ರಮಗಳು
ಬೆಳಿಗ್ಗೆ 6:00 ರಿಂದ ಕಾಕಡಾರತಿ, ಪಂಚಪದಿ ಭಜನೆ.
ಬೆಳಿಗ್ಗೆ 7:30 ರಿಂದ ಅಭಿಷೇಕಗಳು ನಂತರ ಉಪಹಾರ
ಬೆಳಿಗ್ಗೆ 8:00 ರಿಂದ ನವಗ್ರಹ ಹೋಮ, ಆಯುಷ್ಯ ಹೋಮ, ಸಹಸ್ರ ಮೋದಕ ಗಣ ಹೋಮ ಹಾಗೂ ರಾಮತಾರಕ ಹೋಮ
ಬೆಳಿಗ್ಗೆ 11:00 ಕ್ಕೆ “ಪೂರ್ಣಾಹುತಿ”
ಬೆಳಿಗ್ಗೆ 11:30 ರಿಂದ ಶ್ರೀ ಕ್ಷೇತ್ರ ಹೆಬ್ಬಳ್ಳಿಯ ಪರಮಪೂಜ್ಯ ಶ್ರೀ ದತ್ತಾವಧೂತ ಗುರುಗಳ ಆಶೀರ್ವಚನ.
ಮದ್ಯಾನ 1:00 ರಿಂದ ಮಂತ್ರ ಪುಷ್ಪ, ಅಷ್ಟಾವಧಾನ, ನೈವೇದ, ಮಹಾ ಮಂಗಳಾರತಿ,
ಮದ್ಯಾನ 1:30 ರಿಂದ ಕಾರ್ಯಕ್ರಮದ ಸಮಾರೋಪ ನಂತರ ಮಹಾ ಪ್ರಸಾದ ವಿನಿಯೋಗ, ಸರ್ವರಿಗೂ ಭಕ್ತಿ ಪೂರ್ವಕ ಸ್ವಾಗತ ಕಾರ್ಯಕ್ರಮದ ಆಯೋಜಕರು : ಶ್ರೀ ಬ್ರಹ್ಮಚೈತನ್ಯ ನಾಮಸಾಧನ ಭಕ್ತ ಮಂಡಳಿ, ಚಳ್ಳಕೆರೆ

About The Author

Namma Challakere Local News
error: Content is protected !!