ಚಳ್ಳಕೆರೆ ತಾಲೂಕು ಕಚೇರಿಗೆ ದಾವಿಸಿದ ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಬಣ ಬೆಳೆ ಪರಿಹಾರ ಹಾಗೂ ವಿವಿಧ ಬೇಡಿಕೆಗಳನ್ನು ಕುರಿತಾದ ಮನವಿಯನ್ನು ತಹಶೀಲ್ದಾರ್ ಎನ್.ರಘುಮೂರ್ತಿಗೆ ನೀಡಿ ಸರಕಾರದ ಕಾಲ ವಿಳಂಭ ಬೆಳೆ ಪರಿಹಾರಕ್ಕೆ ಮನವಿ ಸಲ್ಲಿಸಿದರು.
ಇನ್ನೂ ರಾಜ್ಯಾಧ್ಯಕ್ಷ ಸೋಮಗುದ್ದು ರಂಗಸ್ವಾಮಿ ರೈತ ಬಣದ ನೂರಾರು ರೈತರು ಸಮಸ್ಯೆಗಳ ಕುರಿತಾದ ಮನವಿಯನ್ನು ನೀಡಿದರು.
ರಾಜ್ಯಾಧ್ಯಕ್ಷ ಸೋಮಗುದ್ದು ರಂಗಸ್ವಾಮಿ ಮಾತನಾಡಿ, ರೈತರಿಗೆ ಅಗತ್ಯವಿರುವಂತಹ ದಾರಿ ವಿವಾದಗಳು ಪರಿಹಾರ ಮತ್ತು ಬ್ಯಾಂಕ್‌ಗಳಿAದ ರೈತರಿಗೆ ಸರಿಯಾದ ಸಮಯಕ್ಕೆ ಹಣವನ್ನು ನೀಡಿ ಸಹಕರಿಸುತ್ತಿಲ್ಲ ಮತ್ತು ವಿಮಾ ಕಂತಿನ ಹಣವನ್ನು ಸರಿಯಾಗಿ ಜಮಾ ಮಾಡುವಂತೆ ಕೋರಿದರು,
ಇದಕ್ಕೆ ತಹಶೀಲ್ದಾರ್ ಎನ್.ರಘುಮೂರ್ತಿ ಮಾತನಾಡಿ, ತಾಲೂಕಿನಲ್ಲಿ ಈಗಾಗಲೇ ಕೃಷಿ ಮತ್ತು ತೋಟಗಾರಿಕಾ ಬೆಳೆಗಳ 52,636 ಎಕ್ಟರ್ ಬೆಳೆಗಳಿಗೆ ಪರಿಹಾರದ ಮಾತು ಆನ್ಲೈನ್ ದತ್ತಾಂಶದಲ್ಲಿ ದಾಖಲಿಸಲಾಗಿದೆ ಇದರಲ್ಲಿ ಈಗಾಗಲೇ 82 ಶೇಕಡವಾರು ಪರಿಹಾರದ ಹಣ ರೈತರ ಖಾತೆಗೆ ಜಮಾ ಆಗಿದೆ
ಇನ್ನೂ ಉಳಿದಂತಹ ಹಣ ಮುಂದಿನ ದಿನಗಳಲ್ಲಿ ಜಮಾ ಆಗಲಿದೆ ರೈತರು ಇದಕ್ಕಾಗಿ ಆತಂಕಗೊAಡು ಪ್ರತಿದಿನ ತಾಲೂಕ್ ಕಚೇರಿ ಅಲೆಯುವುದು ಆತಂಕ ಪಡುವುದನ್ನು ಬಿಡಬೇಕು ಸರ್ಕಾರದ ಮಾನದಂಡದಲ್ಲಿ ನಿರ್ದಿಷ್ಟವಾಗಿ ಅವರವರ ಖಾತೆಗಳಿಗೆ ಪರಿಹಾರದ ಹಣ ಜಮಾ ಆಗುತ್ತದೆ ರೈತರಿಗೆ ಹಣ ಹಂತ ಹಂತವಾಗಿ ಜಮಾ ಆಗುತ್ತದೆ ರೈತರು ಇದನ್ನು ಮನಗಾಣದೆ ಸುಖ ಸುಮ್ಮನೆ ಆತಂಕ ಗೊಳ್ಳುವುದು ಬೇಡ ರೈತ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಈ ಬಗ್ಗೆ ರೈತರನ್ನು ಮನವೊಲಿಸಬೇಕು ಹಾಗೂ ಈಗಾಗಲೇ ತಾಲೂಕಿನಲ್ಲಿ 132 ರಸ್ತೆಗಳ ವಿವಾದವನ್ನು ಬಗೆಹರಿಸಲಾಗಿದೆ ಕೆಲವೊಂದು ತೊಂದರೆ ಕೊಡುತ್ತಿದ್ದ ರೈತರಿಂದಲೂ ಕೂಡ ರೂಡಿ ದಾರಿಯನ್ನು ಬಿಡಿಸಲಾಗಿದೆ.
ಇನ್ನೂ ಕೆಲವು ದಾರಿಗಳು ನ್ಯಾಯಾಲಯದಲ್ಲಿ ವಿವಾದ ಇರುವುದರಿಂದ ಬಗೆಹರಿಸಲಾಗಿಲ್ಲ ಮುಂದಿನ ದಿನಗಳಲ್ಲಿ ಸರ್ಕಾರದಿಂದ ನಿರ್ದಿಷ್ಟ ನಿಯಮಾವಳಿ ರೂಪಿತವಾದಲ್ಲಿ ತಕ್ಷಣವೇ ಇಂಥ ದಾರಿ ವಿವಾದಗಳನ್ನು ಬಗೆಹರಿಸಲಾಗುವುದು ಹಾಗೆ 82 ಗ್ರಾಮಗಳಲ್ಲಿ ರೈತರ ಜ್ವಾಲಾಂತ ಸಮಸ್ಯೆಗಳಾದಂತಹ ದರ್ಕಾಸ್ ಜಮೀನಿನ ಪೋಡಿ ಪಾವತಿ ಖಾತೆ ಪಿಂಚಣಿ ದಾರಿ ವಿವಾದ ನೈರ್ಮಲ್ಯ ಸೇರಿದಂತೆ ಗ್ರಾಮಗಳಿಂದ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲಾಗಿದೆ ಸರ್ಕಾರದ ಆಸೆಯಂತೆ ಸರ್ಕಾರಿ ಎಲ್ಲ ಸವಲತ್ತುಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸಲಾಗಿದೆ ಉಳಿದಂತ ಗ್ರಾಮಗಳನ್ನು ಕೂಡ ವಿಶೇಷ ಆಂದೋಲನ ರೂಪದಲ್ಲಿ ತೆಗೆದುಕೊಂಡು ಕಂದಾಯ ಇಲಾಖೆಯ ಸಮಸ್ಯೆ ಮುಕ್ತ ಗ್ರಾಮಗಳನ್ನಾಗಿ ಮಾಡಲಾಗುವುದು
ರೈತರ ಹಿತವನ್ನು ಮುಂದಿಟ್ಟುಕೊAಡು ಅದಷ್ಟೇ ಕಷ್ಟ ಬಂದರೂ ಕೂಡ ಕಂದಾಯ ಇಲಾಖೆ ಅಧಿಕಾರಿಗಳು ಮುಂದಿನ ದಿನಗಳಲ್ಲಿ ಈ ಕೆಲಸವನ್ನು ಮಾಡಲಾಗುವುದು ಎಂದು ಹೇಳಿದರು
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಅಶೋಕ್ ರೈತರ ಬೆಳೆಗಳು ನಷ್ಟವಾದ ಬಗ್ಗೆ ಪರಿಪೂರ್ಣವಾಗಿ ದತ್ತಾಂಶದಲ್ಲಿ ವಿವರವನ್ನು ದಾಖಲಿಸಲಾಗಿದೆ ರೈತರು ಆತಂಕ ಗೊಳ್ಳುವುದು ಬೇಡ ಎಂದು ಹೇಳಿದರು
ಇದೇ ಸಂದರ್ಭದಲ್ಲಿ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು