ಚಳ್ಳಕೆರೆ : ಅಪ್ಪು ಅಮರ, ಅವರ ಹಾದಿಯಲ್ಲಿ ಇಂದು ನಾವೇಲ್ಲಾ ಸಾಗೋಣ ಅವರ ಸಾಮಾಜಿಕ ಕಳಕಳಿ ಇಂದಿನ ಮಕ್ಕಳಿಗೆ ಪ್ರೇರೆಪಿಸೋಣ ಎಂದು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಟಿ.ತಿಪ್ಪೆಸ್ವಾಮಿ ಹೇಳಿದ್ದಾರೆ.
ಅವರು ತಾಲೂಕಿನ ಗಂಜಿಗುAಟೆ ಲಂಬಾಣಿಹಟ್ಟಿ ಗ್ರಾಮದ ಶ್ರೀ ಸೇವಾಲಾಲ್ ದೇವಸ್ಥಾನದ ಆವರಣದಲ್ಲಿ ನೂತನವಾಗಿ ಪ್ರಾರಂಭವಾದ ಡಾ. ಪುನೀತ್ ರಾಜಕುಮಾರ್ ಸೇವಾ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಜೆಡಿಎಸ್ ತಾಲೂಕ ಅಧ್ಯಕ್ಷ ಪಿ.ತಿಪ್ಪೇಸ್ವಾಮಿ ಮಾತನಾಡಿ, ಸಮಾಜದಲ್ಲಿ ಇರುವಷ್ಟು ದಿನಗಳ ಕಾಲ ಸಾಮಾಜಿಕ ಜೀವನದಲ್ಲಿ ಯಾವ ರೀತಿಯಲ್ಲಿ ಇರಬೇಕು ಸಹಾಯ ಮನೋಧರ್ಮ ಯಾವ ರೀತಿಯಲ್ಲಿ ಬೆಳೆಸಿಕೊಳ್ಳಬೇಕು ಎಂಬುದು ಈಡೀ ಮನುಕುಲಕ್ಕೆ ತೋರಿಸಿ ಕೊಟ್ಟ ಮಹಾತ್ಮರಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ಅಭ್ಯರ್ಥಿಯಾದ ಎಂ.ರವೀಶ್ ಕುಮಾರ್ ಮಾತನಾಡಿದರು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಪ್ರಕಾಶ್‌ಮೂರ್ತಿ, ಮಾಜಿ ತಾಲೂಕ ಪಂಚಾಯತ್ ಸದಸ್ಯರಾದ ಆಂಜನೇಯ, ನಗರಸಭೆ ಸದಸ್ಯರಾದ ವೀರಭದ್ರಯ್ಯ, ಗ್ರಾಮ ಪಂಚಾಯಿತಿ ಸದಸ್ಯರಾದ ಆನಂದ, ಗೌರಮ್ಮ, ಗೀತಾ, ಲಕ್ಷ್ಮಣ್ ನಾಯ್ಕ, ರೂಪ್ಲ ನಾಯ್ಕ,ಸಂಘದ ಅಧ್ಯಕ್ಷರಾದ ಲಕ್ಷ್ಮಣ ನಾಯ್ಕ, ಉಪಾಧ್ಯಕ್ಷರಾದ ಮುನಿಯ ನಾಯ್ಕ, ಖಜಾಂಚಿಯಾದ ಹನುಮಂತ ನಾಯ್ಕ, ನಿರ್ದೇಶಕರುಗಳಾದ ಫೀರಾನಾಯ್ಕ, ಮೇಘನಾಥ, ವೆಂಕಟೇಶ್, ಶಿವರಾಜ್, ಶಿವಕುಮಾರ್ ಹಾಗೂ ವಿಶ್ವಕರ್ಮ ರಾಜ್ಯ ಅಧ್ಯಕ್ಷರಾದ ಆರ್.ಪ್ರಸನ್‌ಕುಮಾರ್, ಮುಖಂಡರುಗಳಾದ ತೋಳಚಾನಾಯ್ಕ, ಕೃಷ್ಣಮೂರ್ತಿ, ಮುಖಂಡರು, ಕಾರ್ಯಕರ್ತರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.