ರಸರುಷಿಯ ದಿನಾಚರಣೆಗೆ ಕವಿವಾಣಿಯ ಸಂದೇಶ : ತಹಶೀಲ್ದಾರ್ ಎನ್.ರಘುಮೂರ್ತಿ

ಚಳ್ಳಕೆರೆ : ರಾಷ್ಟೀಯ ಹಬ್ಬಗಳ ಆಚರಣೆ ಹಾಗೂ ತಾಲ್ಲೂಕು ಆಡಳಿತ ವತಿಯಿಂದ ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ಇಂದು ವಿಶ್ವಮಾನವ ರಾಷ್ಟ್ರ ಕವಿ ಕುವೆಂಪು ಜನ್ಮ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಎನ್.ರಘುಮೂರ್ತಿ ಕುವೆಂಪು ರವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ನಂತರ ಮಾತನಾಡಿದ ಅವರು ಈಡೀ ವಿಶ್ವವೇ ಒಪ್ಪುವಂತ ಸಾಹಿತ್ಯವನ್ನು ಬರೆದು ಕೊಟ್ಟ ಮಹಾನೀಯ ಕುವೆಂಪುರವರು, ಕನ್ನಡಕ್ಕೆ ಮೊಟ್ಟ ಮೊದಲ ಜ್ಞಾನಪೀಠವನ್ನು ತಂದುಕೊಟ್ಟ ರಸರುಷಿಯ ಕವಿವಾಣಿಯನ್ನು ಎಲ್ಲಾರೂ ಮೈಗೂಡಿಸಿಕೊಂಡಾಗ ಮಾತ್ರ ವಿಶ್ವಮಾನವ ದಿನಚರಣೆಗೆ ಅರ್ಥಸಿಗುತ್ತದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ ಮಾತನಾಡಿ, ಕನ್ನಡನಾಡು ಕವಿಗಳ ಶಿಲ್ಪಿಗಳ ಬೀಡು ನಾಡು ಕಂಡು ಶೇಷ್ಠ ಕವಿಗಳಲ್ಲಿ ಕುವೆಂಪು ಒಬ್ಬರು ಅವರು ವಿಶ್ವಮಾನವ ಸಂದೇಶವನ್ನು ಸಾರಿದವರು, ಪ್ರತಿಯೊಬ್ಬ ಕನ್ನಡಿಗನೂ ಕುವೆಂಪು ಭಾಷಾ ಪ್ರೀತಿಯನ್ನು ಮೈಗೂಡಿಸಿಕೊಳ್ಳಬೇಕು. ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬ ವಿಶ್ವಮಾನವ ತತ್ವ ಬಿತ್ತಿದ ಮಹಾನ್ ಚೇತನ ಎಂದು ನುಡಿದರು.
ಬಿಇಓ ಕೆ.ಎಸ್.ಸುರೇಶ ಮಾತನಾಡಿ, ಮನುಷ್ಯ ಹುಟ್ಟಿದ ಮೇಲೆ ಜೀವನದ ಮೌಲ್ಯಗಳನ್ನು ಅಳವಡಿಸಿಕೊಂಡು ಕವಿಯ ಮಾರ್ಗದಲ್ಲಿ ನಡೆಯಬೇಕು. ವಿಶ್ವಮಾನವ ದಿನಾಚರಣೆಗೆ ಸಾರ್ಥಕವಾಗುತ್ತದೆ, ಕುವೆಂಪು ತಾನು ಹೇಗೆ ಬದುಕಿದ್ದರು ಹಾಗೇ ಬರೆದು, ಬರೆದ ಹಾಗೇ ಬದುಕಿದ ಮಹಾನ್ ಚೇತನ್ ಕುವೆಂಪುರವರು ಎಂದರು.
ಈ ಕಾರ್ಯಕ್ರಮದಲ್ಲಿ ರಾಜ್ಯ ರೈತಸಂಘದ ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ಗೃಹ ರಕ್ಷಕ ದಳದ ಅಧಿಕಾರಿಗಳಾದ ಲೋಕೇಶ, ಕೆ.ಜಗನ್ನಾಥ್, ರೈತ ಮುಖಂಡ ರಾಜಣ್ಣ ತಿಪ್ಪೆಸ್ವಾಮಿ, ಶ್ರೀನಿವಾಸ್‌ರೆಡ್ಡಿ, ದಯಾನಂದ, ಕುದಾಪುರತಿಪ್ಪೇಸ್ವಾಮಿ, ಕುಸುಮ, ಪಶುಸಂಗೋಪನ ಅಧಿಕಾರಿ ಡಾ.ರೇವಣ್ಣ, ತಿಪ್ಪಯ್ಯ ಸೇರಿದಂತೆ ರೈತರು ತಾಲ್ಲೂಕು ಮಟ್ಟದ ಅಧಿಕಾರಿಗಳು ಸಿಬ್ಬಂದಿ ಶ್ರೀನಿವಾಸ್ ಹಾಗೂ ಸಾಹಿತಿಗಳು ಕವಿಗಳು ಇದ್ದರು.

About The Author

Namma Challakere Local News
error: Content is protected !!