ಚಳ್ಳಕೆರೆ : ಕೋವಿಡ್ ಮುನ್ಸೂಚನೆ ಇರುವುದರಿಂದ ಜನಸಂದಣಿ ಸೇರುವ ಸಂದರ್ಭದಲ್ಲಿ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಮಾಸ್ಕ ಧರಿಸಬೇಕೆಂದು ಭಕ್ತಾದಿಗಳಿಗೆ ತಹಶೀಲ್ದಾರ್ ಎನ್.ರಘುಮೂರ್ತಿ ಸೂಚಿಸಿದರು
ಅವರು ತಾಲೂಕಿನ ಯಲಗಟ್ಟೆ ಗೊಲ್ಲರಟ್ಟಿಯಲ್ಲಿ ಕ್ಯಾತಪ್ಪ ದೇವರ ಮರಕಡಿಯುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಎರಡನೇ ಅಲೆಯಲ್ಲಿ ಕೋವಿಡ್ ಮಹಾಮಾರಿಯಿಂದ ಅದೆಷ್ಟು ಜೀವ ಹಾನಿಗಳಾಗಿವೆ ಎಂಬುದು ಎಲ್ಲ ಸಾರ್ವಜನಿಕರಿಗೆ ನೆನಪಿರಲಿ, ಜೀವ ಮುಖ್ಯ ಕೋವಿಡ್ ಸಂಕಷ್ಟ ಬಗೆಹರಿದ ನಂತರ ನಾವು ಎಷ್ಟಾದರೂ ದೈವಿಕ ಕಾರ್ಯಗಳು ಧಾರ್ಮಿಕ ಕಾರ್ಯಗಳು ಪೂಜಾ ಕಾರ್ಯಗಳನ್ನು ನೆರವೇರಿಸಬಹುದು. ಆ ಭಗವಂತನಿಗೆ ಅರಿಕೆ 12 ವರ್ಷ ಎನ್ನುವ ಗಾದೆ ಇದೆ ಅದರ ಅನುಸರ ಮುಂದಿನ ದಿನಗಳಲ್ಲಿ ಪೂಜೆ ಕಾರ್ಯಗಳನ್ನು ವೈಭವವಾಗಿ ಮಾಡಬಹುದು ಆದರೆ ಸದ್ಯದ ಪರಿಸ್ಥಿತಿಯಲ್ಲಿ ಜನಗಳ ಆರೋಗ್ಯ ಮುಖ್ಯ ಪ್ರತಿಯೊಬ್ಬರ ಆರೋಗ್ಯವನ್ನು ಸರ್ಕಾರದಿಂದಲೇ ನಿರ್ವಹಿಸಲಾಗದು ತಮ್ಮ ತಮ್ಮ ಆರೋಗ್ಯದ ಮುಂಜಾಗ್ರತ ಕ್ರಮಗಳನ್ನು ತಾವೇ ತೆಗೆದು ಕೊಳ್ಳಬೇಕಾಗಿರುವುದರಿಂದ ಜನಸಂದಣಿ ಇರುವ ಪ್ರದೇಶದಲ್ಲಿ ಅಥವಾ ಜಾತ್ರೆ ಮುಂತಾದ ಪ್ರದೇಶದಲ್ಲಿ ಜಮಾವಣೆಯಾಗುವ ಸಂದರ್ಭದಲ್ಲಿ ಪ್ರತಿಯೊಬ್ಬರೂ ಕೂಡ ಎರಡು ಡೋಸ್ ವ್ಯಾಕ್ಸಿನ್ ಸೇರಿದಂತೆ ಬೂಸ್ಟರ್ ಡೋಸ್ ಅನ್ನು ಕೂಡ ಕಡ್ಡಾಯವಾಗಿ ತೆಗೆದುಕೊಳ್ಳಬೇಕು ಕಡ್ಡಾಯವಾಗಿ ಮಾಸ್ಕ ಧರಿಸಬೇಕು ಈ ನಿಯಮ ಸರ್ಕಾರದಿಂದ ನೀಡಲ್ಪಟ್ಟಿರುವುದರಿಂದ ಎಲ್ಲ ಸಾರ್ವಜನಿಕರು ಕೂಡ ಈ ನಿಯಮವನ್ನು ಪಾಲಿಸಬೇಕೆಂದು ಭಕ್ತಾದಿಗಳಲ್ಲಿ ಮನವಿ ಮಾಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ರಂಗಸ್ವಾಮಿ, ನಮ್ಮ ದೇಶ ಧಾರ್ಮಿಕ ಪರಂಪರೆ ಮತ್ತು ಧಾರ್ಮಿಕ ಭಾವನೆಗಳಲ್ಲಿ ಮತ್ತು ಆಧ್ಯಾತ್ಮಿಕ ನೆಲೆಗಟ್ಟಲ್ಲಿ ಅತ್ಯಂತ ಶ್ರೀಮಂತವಾಗಿದ್ದ ಇದರಿಂದಲೇ ವಿಶ್ವಶಾಂತಿ ನೆಲಸಿದ್ದು ಜಾಗತಿಕವಾಗಿ ವಿಶ್ವಗುರು ಆಗುವ ಹಂತಕ್ಕೆ ತಲುಪಿದ್ದೇವೆ ಇದಕ್ಕೆ ಭಾರತೀಯರದ ನಮಗೆ ಹೆಮ್ಮೆಯಿದೆ ಮುಂದಿನ ಸ್ವಲ್ಪ ದಿನಗಳ ಕಾಲ ಸರ್ಕಾರದ ಕಟ್ಟುಪಾಲನೆಯನ್ನು ಅನುಸರಿಸಬೇಕೆಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷರಾದಂತ ಸೂರನಹಳ್ಳಿ ಶ್ರೀನಿವಾಸ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಜೈಪಾಲಯ್ಯ, ಚೌಳೂರು ಗ್ರಾಮ ಪಂಚಾಯತಿ ಅಧ್ಯಕ್ಷ ಚಿಕ್ಕಣ್ಣ ಮತ್ತು ನೂರಾರು ಭಕ್ತರು ಉಪಸ್ಥಿತರಿದ್ದರು