ಶ್ರೀ ಗೌರಿ ಮಹಿಳಾ ಜ್ಞಾನವಿಕಾಸ ಕೇಂದ್ರ ಉದ್ಘಾಟನೆ ಪಿ ಗೌರಿಪುರ
ಪರಶುರಾಂಪುರ:: ಹೋಬಳಿಯ ಪಿ ಗೌರಿಪುರ ಗ್ರಾಮದಲ್ಲಿ ಶ್ರೀ ಕ್ಷೇತ್ರ ರ‍್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ಶ್ರೀ ಗೌರಿ ಮಹಿಳಾ ಜ್ಞಾನ ವಿಕಾಸ ಕೇಂದ್ರದ ಉದ್ಘಾಟನೆ ಕರ‍್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಇದೆ ವೇಳೆ ಗ್ರಾಮ ಪಂಚಾಯತಿ ಸದಸ್ಯರಾದ ರಾಮಾಂಜನೇಯ್ಯ, ಮಾತನಾಡಿ ಮಹಿಳೆಯರ ಬದುಕನ್ನು ಬೆಳಗಿಸುವ ವಿಶೇಷ ಯೋಜನೆಯ ಜ್ಞಾನವಿಕಾಸ ಕರ‍್ಯಕ್ರಮ ಎಂದು ಹೇಳಿದ್ದಾರೆ .
ಅವರು ಭಾನುವಾರ ಪಿ ಗೌರಿಪುರ ಗ್ರಾಮದ ರ‍್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಆಯೋಜಿಸಿದ್ದ ಮಹಿಳಾ ಜ್ಞಾನ ವಿಕಾಸ ಕರ‍್ಯಕ್ರಮವನ್ನು ಉದ್ಘಾಟಿಸಿ ಚಾಲನೆ ನೀಡಿ ಮಾತನಾಡಿದ್ದಾರೆ. ಮಹಿಳೆಯರು ಉತ್ತಮ ಆರೋಗ್ಯವಂತರಾಗಿ ಇರಬೇಕಾದರೆ ಪೌಷ್ಟಿಕ ಆಹಾರ ಹಸಿರು ಸೊಪ್ಪು ಮೊಳಕೆ ಬೆರೆಸಿದ ಕಾಳು ಹಣ್ಣು ಹಂಪಲು ಸೇವನೆ ಮಾಡುವುದರಿಂದ ಉತ್ತಮ ಆರೋಗ್ಯವಂತ ಹೊರಗಿರಬಹುದು ಎಂದರು.
ಈ ವೇಳೆ ಪ್ರಾಸ್ತಾವಿಕ ನುಡಿಯನ್ನು ವಲಯ ಮೇಲ್ವಿಚಾರಕ ಮಂಜುನಾಥ್ ಮಾತನಾಡಿ ನಮ್ಮ ವಲಯ ವ್ಯಾಪ್ತಿಯಲ್ಲಿ 21 ಜ್ಞಾನವಿಕಾಸ ಕೇಂದ್ರಗಳಿವೆ ಅದರಿಂದ ಮಹಿಳೆಯರು ಸಂಘದ ಧ್ಯೇಯೋದ್ದೇಶಗಳನ್ನು ಅರಿತು ವ್ಯವಹಾರಿಸುವುದು ಬಹಳ ಮುಖ್ಯ ಇತ್ತೀಚಿನ ದಿನಗಳಲ್ಲಿ ಬಣ್ಣದ ಮಾತುಗಳನ್ನಾಡಿ ಏಕಾಏಕಿ ನಿಮಗೆ ಸಾಲ ನೀಡಿ ಸಾಲದ ಸುಳಿಯಲ್ಲಿ ನಿಮ್ಮನ್ನು ಸಿಲಿಕಿಸಲು ಬರುವ ಸಂಘಗಳ ಬಗ್ಗೆ ಮಹಿಳೆಯರು ಎಚ್ಚರದಿಂದ ವ್ಯವಹರಿಸಬೇಕು ಎಂದು ಕಿವಿಮಾತು ಹೇಳಿದರು.
ನಂತರ ತಾಲೂಕು ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಭವಾನಿ ಮಾತನಾಡಿ ಮಹಿಳೆಯರು ರ‍್ಥಿಕವಾಗಿ ಸಾಮಾಜಿಕವಾಗಿ ಸದೃಢರಾಗಲು ಸಂಘ ಸಂಸ್ಥೆಗಳು ಅತ್ಯಂತ ಮುಖ್ಯವಾದದ್ದು ಈ ಗ್ರಾಮದಲ್ಲಿ ಜ್ಞಾನ ವಿಕಾಸ ಕೇಂದ್ರವನ್ನ ತೆರೆಯಲು ಇಂದು ಯೋಗ ಕೂಡಿಬಂದಿದೆ ಜ್ಞಾನ ವಿಕಾಸ ಎಂದರೆ ಅನುಭವ ಮಹಿಳೆಯರು ಜ್ಞಾನವನ್ನು ಅರಿತುಕೊಳ್ಳುವುದು ಕಲಿಕೆಯನ್ನುವುದು ನಿರಂತರವಾಗಿ ಇರುತ್ತದೆ ಯಾವುದೇ ವಯಸ್ಸಿನ ಅಂತರವಿರುವುದಿಲ್ಲ ಜ್ಞಾನ ವಿಕಾಸ ಮಾತೃಶ್ರೀ ಅಮ್ಮನವರ ಕನಸಿನ ಕೂಸು ಜ್ಞಾನವಿಕಾಸ ಮೂಲ ಉದ್ದೇಶ ಮಹಿಳೆಯರು ಕೆಳಮಟ್ಟದಿಂದ ಸಹ ಮುಖ್ಯ ವಾಹಿನಿಗೆ ಕರೆತರುವ ಉದ್ದೇಶವಾಗಿದೆ ಮಹಿಳೆಯರು ಸಬಲೀಕರಣರಾಗಿ 2012ರಿಂದ ಗ್ರಾಮೀಣ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಸಾಲ ಸೌಲಭ್ಯ ಪಡೆದುಕೊಂಡು ಸದೃಢರಾಗಿದ್ದೀರಾ ಎಂದು ತಾಲೂಕುಗಳ ವಿಕಾಸ ಸಮನ್ವಯಾಧಿಕಾರಿ ಭವಾನಿ ತಿಳಿಸಿದರು.
ಈ ಸಂರ‍್ಭದಲ್ಲಿ ರಂಗನಾಥ, ಮಾಜಿ ಸದಸ್ಯರಾದ ತಿಮ್ಮರೆಡ್ಡಿ, ಶೀಲಾ, ಲಕ್ಷ್ಮಿ ಧನಂಜಯ, ಪಾಲ್ಗೊಂಡಿದ್ದರು, ಸೇವಾಪ್ರತಿನಿಧಿ ಮಂಜುಳಾ ಸ್ವಾಗತಿಸಿದರು, ನಳಿನಾ ಧನ್ಯವಾದ ಮಾಡಿದರು.