ಚಳ್ಳಕೆರೆ : ನಾಯಕನಹಟ್ಟಿ ಹೋಬಳಿಯ ನಲಗೇತನಹಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ರಾಮದುರ್ಗ ಗ್ರಾಮದಲ್ಲಿ ಪ್ರತಿವರ್ಷದಂತೆ ಕಿರು ದೀಪಾವಳಿಯ ಪ್ರಯುಕ್ತ ಕಳೆದ ಮೂರು ದಿನಗಳಿಂದ ಶ್ರೀ ಮಂದ ಬೊಮ್ಮಲಿಂಗೇಶ್ವರ ಜಾತ್ರಾ ಮಹೋತ್ಸವವು ರಾಮದುರ್ಗ ಗ್ರಾಮದಲ್ಲಿ ಅದ್ದೂರಿಯಾಗಿ ಜರುಗಿತು.
ಬುಡಕಟ್ಟು ಸಂಸ್ಕೃತಿಯ ಆಚರಣೆಯಂತೆ ಗ್ರಾಮದ ಆರಾಧ್ಯ ದೈವ ಶ್ರೀಮಂದಬೋಲಿAಗೇಶ್ವರ ದೇವರು ಗುರುವಾರ ಮಧ್ಯಾಹ್ನ 3:00ಯಿಂದ ಪ್ರಾರಂಭವಾದ ಶ್ರೀ ಮಂದ ಬೊಮ್ಮಲಿಂಗೇಶ್ವರ ದೇವರು ಎತ್ತುಗಳೊಂದಿಗೆ ಸಕಲವಾದ್ಯಗಳೊಂದಿಗೆ ಗ್ರಾಮದಿಂದ ಐದು ಕಿ.ಮೀ ದೂರದಲ್ಲಿರುವ ಅರಣ್ಯ ಪ್ರದೇಶದಲ್ಲಿರುವ ಸಣ್ಣ ಗಂಭಲದಿನ್ನಿಗೆ ಮೂಲಸ್ಥಾನಕ್ಕೆ ಆಗಮಿಸಿತು ಗ್ರಾಮಸ್ರೆಲ್ಲರೂ ಸೇರಿ ಶ್ರೀಮಂತ ಬೊಮ್ಮಲಿಂಗೇಶ್ವರ ದೇವರಿಗೆ ಪೂಜಾ ಕೈಕರಿಗಳನ್ನು ಸಲ್ಲಿಸಿದರು. ಮರುದಿನ ಶುಕ್ರವಾರ ಬೆಳಗಿನ ಜಾವ ನಾಲ್ಕು ಗಂಟೆಯ ಶ್ರೀ ಸ್ವಾಮಿಗೆ ಮಹಾಪೂಜೆ ಮತ್ತು ಶನಿವಾರ ದಾಸೋಹ ಪಟ್ಟದ ಎತ್ತುಗಳ ಆಗಮನ , ಭಂಡಾರ ಸೇವೆ, ಮಣೀವು ಗ್ರಾಮದ ಅಣ್ಣತಮ್ಮಂದಿರು ಎಲ್ಲ ಸೇರಿ ದೇವರ ಪೂಜಾ ಕಾರ್ಯವಲ್ಲ ನಡೆಸಿದರು.
ಮರುದಿನ ಭಾನುವಾರ ಗ್ರಾಮದ ಅಣ್ಣ ತಮ್ಮಂದಿರೆಲ್ಲರೂ ಸೇರಿ ಶ್ರೀಮಂದ ಬೊಮ್ಮಲಿಂಗೇಶ್ವರ ದೇವರನ್ನು ಸಕಲ ವಾದ್ಯಗಳೊಂದಿಗೆ ಗ್ರಾಮಕ್ಕೆ ಕರೆತಂದು ಮೂಲ ಸ್ಥಾನಕ್ಕೆ ಸೇರಿಸಿದರು ಪೂಜಾ ವಿಧ ವಿಧಾನಗಳನ್ನು ಪೂರೈಸಿ. ಶ್ರೀಮಂದ ಬೊಮ್ಮಲಿಂಗೇಶ್ವರ ದೇವರಿಗೆ ಅರಾಮದುರ್ಗ ಗ್ರಾಮದ ಸಮಸ್ತ ಗ್ರಾಮಸ್ಥರು ಭಕ್ತಿಯ ನಮನವನ್ನು ಸಲ್ಲಿಸಿ ದೇವರ ಕೃಪೆಗೆ ಪಾತ್ರರಾದರು.

ಇದೇ ಸಂದರ್ಭದಲ್ಲಿ ದೇವರ ಬುಡಕಟ್ಟಿನ ಅಣ್ಣ-ತಮ್ಮಂದಿರು ಹಾಗೂ ರಾಮದುರ್ಗದ ಯಾನೆ(ದೂಣಮಂಡಲಹಟ್ಟಿ) ಗ್ರಾಮಸ್ಥರು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು…

About The Author

Namma Challakere Local News
error: Content is protected !!