ಚಳ್ಳಕೆರೆ : ಅಬ್ದುಲ್ ನಜೀರ್ ಸಾಬ್ ರವರು ಗ್ರಾಮೀಣಾಭಿವೃದ್ಧಿಯ ಕಲ್ಪನೆ ಕಂಡAತವರು ಅವರು ಮಹಾತ್ಮ ಗಾಂಧೀಜಿ ಅವರು ಹಾಕಿಕೊಟ್ಟಂತ ನೈರ್ಮಲ್ಯಕರಣದ ಉದಾತ್ತವಾದಂತ ಕನಸು ಹೊಂದಿದAತವರು ಎಂದು ತಹಸಿಲ್ದಾರ್ ಎನ್ ರಘುಮೂರ್ತಿ ಹೇಳಿದರು.
ಅವರು ನಗರಗೆರೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರ ಚುನಾವಣೆಯಲ್ಲಿ ಚುನಾವಣಾ ಅಧಿಕಾರಿಯಾಗಿ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಶ್ರೀ ಕುಮಾರಸ್ವಾಮಿ ಅವರನ್ನು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಿ ನಂತರ ಮಾತನಾಡಿ ಈದಿನ ಅಧ್ಯಕ್ಷರಾಗಿ ಆಯ್ಕೆಗೊಂಡಿರುವAತ ಕುಮಾರಸ್ವಾಮಿ ಅವರು ಸರ್ಕಾರದ ಯೋಜನೆಗಳ ಗಣನೀಯವಾಗಿ ಸವಲತ್ತುಗಳನ್ನು ಪ್ರತಿಯೊಬ್ಬ ಅಸಹಾಯಕರು ಮತ್ತು ಶೋಷಿತರಿಗೆ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ದೀಕ್ಷೆ ತೆಗೆದುಕೊಳ್ಳಬೇಕು ಈ ಪಂಚಾಯಿತಿಯ ವ್ಯಾಪ್ತಿಯಲ್ಲಿರುವಂತಹ ಯಾವುದೇ ಅಸಹಾಯಕರು ಸೌಲಭ್ಯ ವಂಚಿತರಾಗಬಾರದು, ಪ್ರತಿಯೊಂದು ಸರ್ಕಾರಿ ಕಚೇರಿಗಳಲ್ಲಿ ಈ ವರ್ಗದ ಜನರಿಗೆ ಯಾವ ಸೌಲಭ್ಯಗಳಿವೆ ಎಂದು ತಿಳಿದುಕೊಳ್ಳಬೇಕು ಎಂದರು
ಗ್ರಾಮೀಣಾಭಿವೃದ್ಧಿಯಲ್ಲಿ ಕುಡಿಯುವ ನೀರು ಮತ್ತು ಸ್ವಚ್ಛತೆಗೆ ತಮ್ಮದೇ ಆದ ಕೊಡುಗೆ ನೀಡಿದವರು, ತಮ್ಮ ಆದರ್ಶಗಳನ್ನು ಸರಕಾರಿ ಇಲಾಖೆಯಲ್ಲಿ ಇಟ್ಟುಕೊಂಡಿರುವAತಹ ಕನಸನ್ನು ನನಸು ಮಾಡುವಂತ ಹೊಣೆಗಾರಿಕೆ ಹಾಗೂ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳಾದ ನಮ್ಮ ಮೇಲೆ ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರ ಮೇಲಿದೆ ಜನರಿಗೆ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಎಲ್ಲ ಪಂಚಾಯಿತಿ ಸದಸ್ಯರೊಂದಿಗೆ ಸಮನ್ವಯ ಮಾಡಿಕೊಂಡು ಪಂಚಾಯಿತಿ ಉತ್ತಮ ಪ್ರಗತಿ ದತ್ತ ಕೊಂಡೊಯಲು ಸಹಕಾರಿಯಾಗಬೇಕೆಂದು ಹೇಳಿದರು
ಈ ಸಂದರ್ಭದಲ್ಲಿ ನೂತನವಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಗೊಂಡ ಶ್ರೀ ಕುಮಾರಸ್ವಾಮಿ ಮತ್ತು ಎಲ್ಲ ಸದಸ್ಯರುಗಳು ಉಪಸ್ಥಿತರಿದ್ದರು