ರಾಮಾಂಜನೇಯ.ಕೆ.ಚನ್ನಗಾನಹಳ್ಳಿ
ಚಳ್ಳಕೆರೆ : ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗಲೇ ಮುಖಂಡರು ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಜಿಗಿಯುವುದು ರಾಜಕೀಯ ಕಣ ರಂಗೇರಿದೆ
ಹೌದು ಆಯಿಲ್‌ಸಿಟಿ ಎಂದೇ ಪ್ರಖ್ಯಾತವಾದ ವಾಣಿಜ್ಯ ನಗರಿ ಈಗ ವಿಜ್ಞಾನ ನಗರಿಯಾಗಿ ಮಾರ್ಪಟುಗೊಳ್ಳುತ್ತಿದಂತೆ ಪ್ರತಿದಿನವೂ ಕೂಡ ರಾಜಾಕೀಯ ಏರುಪೇರು ಗಮನಿಸಬಹುದು, ಎಸ್‌ಟಿ ಮೀಸಲು ಕ್ಷೇತ್ರದವಾದ ವಿಜ್ಞಾನ ನಗರಿ ಚಳ್ಳಕೆರೆಯಲ್ಲಿ ಚುನಾವಣೆ ಕಣ ರಂಗೇರಿದೆ,
ಅದರಂತೆ ಮೂರು ಪಕ್ಷಗಳಿಂದ ಮುಖಂಡರನ್ನು ಆರ್ಕಷಿಸಲು ಸ್ಪರ್ಧಾಳುಗಳು ಇನ್ನಿಲದ ಕಸರತ್ತು ಮಾಡುತ್ತಿದ್ದಾರೆ.
ಅದೇ ರೀತಿಯಲ್ಲಿ ಸ್ಥಳೀಯ ಶಾಸಕ ಟಿ.ರಘುಮೂರ್ತಿ ಈಗಾಗಲೇ ಕಳೆದ ಹತ್ತು ವರ್ಷಗಳ ಸಾಧನೇಯ ಮೂಲಕ ಜನರ ಮನೆಮಾತಾಗಿದ್ದಾರೆ.
ಇನ್ನೂ ಕಳೆದ 2018 ರ ಚುನಾವಣೆಯಲ್ಲಿ ಅತೀ ಸಮೀಪ ಸ್ಪರ್ಧಿಯಾಗಿ ಕೆಲವೇ ಮತಗಳಿಂದ ಪರಾಜಿತರಾದ ಜೆಡಿಎಸ್ ಮುಖಂಡ ಎಂ.ರವೀಶ್ ಕುಮಾರ್ ಪ್ರತಿನಿತ್ಯವೂ ಒಂದಿಲ್ಲೊಂದು ಗ್ರಾಮಗಳಿಗೆ ತೆರಳಿ ಪಕ್ಷಸಂಘಟನೆಗೆ ಮುಂದಾಗಿದ್ದಾರೆ. ಈಗಾಗಲೇ ಸ್ಥಳೀಯ ಮುಖಂಡರು ಜೆಡಿಎಸ್ ಪಕ್ಷಕ್ಕೆ ನಿರಂತವಾಗಿ ಸೇರುವುದು ಈ ಭಾರಿ ಜೆಡಿಎಸ್ ಅಲೆ ಚಳ್ಳಕೆರೆಯಲ್ಲಿ ನೆಲೆ ಕಂಡಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಇನ್ನೂ ತಾಲೂಕಿನ ಗೊರ್ಲಕಟ್ಟೆ ಗ್ರಾಮದ ವಸಂತ, ಕೆಂಚಪ್ಪ, ವೆಂಕಟೇಶ್, ಅಜಯ್, ನಾಗಣ್ಣ, ಕೋಟಿ, ಕುಮಾರ, ಪಾಪಣ್ಣ, ಭೂಮೇಶ್, ದಿಲೀಪ್, ಗುರುಸ್ವಾಮಿ ಮಂತಣ್ಣ, ಜಯಣ್ಣ, ರಾಜಣ್ಣ ಇನ್ನು ಹಲವು ಯುವಕರು ಚಳಕೆರೆ ವಿಧಾನಸಭಾ ಕ್ಷೇತ್ರದ ಜೆ.ಡಿ.ಎಸ್ ಅಭ್ಯರ್ಥಿ ಎಂ.ರವೀಶ್ ಕುಮಾರ್ ರವರ ಸಮ್ಮುಖದಲ್ಲಿ ಕಾಂಗ್ರೆಸ್ ಮತ್ತು ಬಿ.ಜೆ.ಪಿ ಪಕ್ಷ ತೊರೆದು ಜೆ.ಡಿ.ಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಬಾಕ್ಸ್ ಮಾಡಿ :
ರಾಜ್ಯದಲ್ಲಿ ಇರುವ ಎರಡು ರಾಷ್ಟಿçಯ ಪಕ್ಷಗಳ ದುರಾಡಳಿತದಿಂದ ಈ ಬಾರಿ ಮತದಾರರು, ನಮ್ಮ ಜೆಡಿಎಸ್ ಪಕ್ಷಕ್ಕೆ ತಾವೇ ಖುದ್ದಾಗಿ ಬೆಂಬಲಿಸಿ ಸಾಗರೋಪಾದಿಯಲ್ಲಿ ಕ್ಷೇತ್ರದಲ್ಲಿ ನಮ್ಮ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಇನ್ನೂ ಈ ಬಾರಿ ಚಳ್ಳಕೆರೆ ಕ್ಷೇತ್ರದಲ್ಲಿ ಜೆಎಡಿಎಸ್ ವಶಕ್ಕೆ ಬರುವುದು ಶತ ಸಿದ್ದ ಹಾಗೂ ರಾಜ್ಯದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಯಾಗುವುದು ಶತಸಿದ್ದ..—ಎಂ.ರವೀಶ್ ಕುಮಾರ್ ಜೆಡಿಎಸ್ ಮುಖಂಡ