ಚಳ್ಳಕೆರೆ : ಜೀವನದ ಪ್ರತಿಯೊಂದು ಘಟನಾವಳಿಗಳನ್ನು ಮೆಲುಕು ಹಾಕುವ ಸುದೀನ ದಿನ ಇಂದಾಗಿದೆ ಅವರು ರಚಿಸಿದ ಸಂವಿಧಾನ ಇಂದು ಪ್ರಪಂಚದ ಎಲ್ಲಾ ವರ್ಗದ ಧರ್ಮಿಯರು ಒಪ್ಪುವಂತ ಮಹತ್ವದ ಸಂವಿಧಾನವಾಗಿದೆ ಎಂದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಹೇಳಿದರು.
ನಗರದ ತಾಲೂಕು ಕಚೇರಿ ಮುಂಬಾಗದ ಅಂಬೆಡ್ಕರ್ ವೃತ್ತದ ಬಳಿ ತಾಲೂಕು ಆಡಳಿತ ಹಾಗೂ ಸಮಸ್ತ ದಲಿತ ಸಂಘಟನೆಗಳ ಸಹಯೋಗದೊಂದಿಗೆ ಏರ್ಪಡಿಸಿದ್ದ 66ನೇ ಅಂಬೇಡ್ಕರ್ ಪರಿನಿಬ್ಬಾಣ ದಿನದ ಅಂಗವಾಗಿ ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು, ಬಾಬಾ ಸಾಹೇಬ್‌ರ ಹಾದಿಯಲ್ಲಿ ನಡೆಯದಿದ್ದರು ಅವರ ಹಾಕಿಕೊಟ್ಟ ಮಾರ್ಗಗಳ ಮೂಲಕ ಸಂವಿಧಾನದ ಹಕ್ಕುಗಳನ್ನು ಪಡೆಯುವ ಮೂಲಕ ಅವರ ನಿಲುವಿಗೆ ಬದ್ದರಾಗಬೇಕು, ಅಂಬೇಡ್ಕರ್ ಕಾಲವಾದ ದಿನಗಳಲ್ಲಿ ಪ್ರಪಂಚದ 193ದೇಶಗಳು ಮರುಗಿದ್ದವು ಅಂತಹ ಮಹಾನ್ ವ್ಯಕ್ತಿಗಳು ಬರೆದ ಕೊಟ್ಟ ಸಂವಿಧಾನ ನಾವು ಉಳಿಸಿ ಬೆಳೆಸುವ ಅಗತ್ಯವಿದೆ ಎಂದರು.
ಜೆಡಿಎಸ್ ಮುಖಂಡ ಎಂ.ರವೀಶ್ ಮಾತನಾಡಿ, ಹಲವು ನೋವುಗಳನುಂಡು, ರಾಜಾಕೀಯವಾಗಿ, ಶೈಕ್ಷಣಿಕವಾಗಿ ಪ್ರಬುಧ್ದನಾಗಿ ಈಡೀ ದೇಶವೇ ಒಪ್ಪುವಂತ ಸಂವಿಧಾನ ರಚಿಸಿ ಇಂದು ನಮ್ಮ ಹೆಗಲಿಗೆ ಹಾಕಿ ಹೊಗಿದ್ದಾರೆ ಇದನ್ನು ಮುನ್ನಡೆಸಿಕೊಂಡು ಹೊಗುವ ಹೊಣೆಗಾರಿಕೆ ನಮ್ಮದಾಗಿದೆ, ಜಾತಿಯಲ್ಲಿ ಹುಟ್ಟಿದ ವ್ಯಕ್ತಿ ತಮ್ಮದೇ ಆದ ವೃತ್ತಿಯಲ್ಲಿ ಸೇವೆ ಸಲ್ಲಿಸುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದರು.
ಪಕ್ಷತೇರ ಅಭ್ಯರ್ಥಿ ಕೆಟಿ.ಕುಮಾರಸ್ವಾಮಿ ಮಾತನಾಡಿ, ನೌಕರಿ ವರ್ಗದ ಆಡಳಿತ ಶಾಯಿಯಲ್ಲಿ ನಿವೃತ್ತಿ ಹೊಂದಿದ ಮೇಲೆ ಸಮಾಜದ ತಮ್ಮ ಜಾತಿ ವರ್ಗಗಳ ಮೇಲೆ ಆಧಮ್ಯೆ ಮೋಹದ ಮೂಲಕ ಸೇವೆ ಸಲ್ಲಿಸುವುದು ಉತ್ತಮ ಬೆಳವಣಿಗೆ ಆದರೆ ಈ ಬೆಳವಣಿಗೆ ಸೇವೆಯಲ್ಲಿರುವಾಗ ಸಲ್ಲಿಸಿದರೆ ಉತ್ತಮ ಎಂದರು.
ಜಿಪA.ಮಾಜಿ ಸದಸ್ಯ ಬಿ.ಪಿ.ಪ್ರಕಾಶ್ ಮೂರ್ತಿ ಮಾತನಾಡಿ, ಸಮಾಜದಲ್ಲಿ ತುಂಬಿ ತುಳುಕುತ್ತಿರುವ ಜಾತಿ, ಮತ, ಪಂಥ, ಧರ್ಮಗಳೆಂಬ ಮತ್ತಿನಿಂದ ಹೊರ ಬರಬೇಕು ಜನತಂತ್ರ ವ್ಯವಸ್ಥೆಯಲ್ಲಿ ಜನರೆ ನಿರ್ಣಯಕರು, ದೇಶ ಬಲಿಷ್ಟವಾಗಬೇಕಾದರೆ ಮತದಾರ ಪ್ರಭುಗಳು ಬಲಿಷ್ಠರಾಗಬೇಕು, ಮೀಸಲಾತಿ ಪ್ರತಿಯೊಂದು ಜಾತಿಗೆ ಇದೆ ಆದರೆ ಕೇವಲ ಡಾಂಬಿಕತೆಗೆ ಪರಿಶಿಷ್ಟಜಾತಿ, ಪರಿಶಿಷ್ಟ ವರ್ಗದವರನ್ನು ಮಾತ್ರ ಸಿಲುಕಿಸುತ್ತಾರೆ, ಮಾನವನ ಮೌಲ್ಯಗಳನ್ನು ಪ್ರಪಂಚದ್ಯಾAತ ಬಿತ್ತಿದ್ದ ಮಹಾನ್ ಯುಗ ಪುರುಷ ಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿದ ಸಂವಿಧಾನ ಇಂದು ನಾವು ರಕ್ಷಿಸುವ ಕೆಲಸವಾಗಬೇಕಿದೆೆ ಎಂದರು.
ಈದೇ ಸಂಧರ್ಭದಲ್ಲಿ ಮಾಜಿ ತಾಪಂ.ಸದಸ್ಯ ಹೆಚ್.ಸಮರ್ಥರಾಯ್, ನಗರಸಭೆ ಸದಸ್ಯ ಕೆ.ವೀರಭದ್ರಯ್ಯ, ಸದಸ್ಯೆ ಜಯಲಕ್ಷಿö್ಮÃ, ಬಿ.ಆನಂದ್ ಕುಮಾರ್, ಎಂ.ಇAದ್ರೇಶ್, ಉಮೇಶ್‌ಚಂದ್ರ ಬ್ಯಾನರ್ಜಿ, ಮೈತ್ರಿ ದ್ಯಾಮಣ್ಣ, ತಾಪಂ.ಇಓ ಹೊನ್ನಯ್ಯ, ಬಿಇಓ ಕೆ.ಎಸ್.ಸುರೇಶ್, ಪೌರಾಯುಕ್ತ ಸಿ.ಚಂದ್ರಪ್ಪ, ಮಾತನಾಡಿದರು.
ಸ್ಥಳದಲ್ಲಿ ನಗರಸಭೆ ಅಧ್ಯಕ್ಷೆ ಸುಮಕ್ಕ, ಸದಸ್ಯ ರಮೇಶ್‌ಗೌಡ, ಶ್ರೀನಿವಾಸ್, ಕವಿತಾ, ವಿ.ವೈ.ಪ್ರಮೋದ್, ನಿರ್ಮಲಾ, ಜೆಡಿಎಸ್ ತಾಲೂಕು ಅಧ್ಯಕ್ಷ ಪಿ.ತಿಪ್ಪೆಸ್ವಾಮಿ, ಆಮ್ ಆದ್ಮಿ ಪಕ್ಷದ ತಾಲೂಕು ಅಧ್ಯಕ್ಷ ಪಾಪಣ್ಣ, ಡಿಎಸ್‌ಎಸ್ ಸಂಚಾಲಕ ಟಿ.ವಿಜಯ್ ಕುಮಾರ್, ಹೆಚ್.ಸಮರ್ಥರಾಯ್, ಬಿ.ಪಿ.ಪ್ರಕಾಶ್‌ಮೂರ್ತಿ, ಕೆ.ವೀರಭದ್ರಯ್ಯ, ಡಿ.ಚಂದ್ರಪ್ಪ, ವೆಂಕಟೇಶ್, ಆಂಜನೇಯ, ಟಿ.ವಿನೋದ್‌ಕುಮಾರ್, ಜಿ.ಅನಿಲ್‌ಕುಮಾರ್, ಹಳೆಟೌನ್ ಬದ್ರಿ, ಸಿ.ಶ್ರೀನಿವಾಸ್, ಭೀಮಣ್ಣ, ನಾಗರಾಜ್, ಮಾರಣ್ಣ. ಲಿಂಗರಾಜ್, ಸಹಾಯಕ ಅಧಿಕಾರಿ ಸಂತೋಶ್ ಕುಮಾರ್, ಬಿಇಓ.ಕೆ.ಎಸ್.ಸುರೇಶ್, ಆರೋಗ್ಯ ಸಹಾಯಕ ಅಧಿಕಾರಿ ತಿಪ್ಪೆಸ್ವಾಮಿ, ಸಮಾಜ ಕಲ್ಯಾಣ ಅಧಿಕಾರಿ ಮಂಜುನಾಥ್, ಮ್ಯಾನೇಜರ್ ದಯಾನಂದ್, ಸಿಡಿಪಿಓ ಕೃಷ್ಣಪ್ಪ, ಪೌರಾಯುಕ್ತ ಸಿ.ಚಂದ್ರಪ್ಪ, ಇತರ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.
ಪೋಟೋ, 1 ಚಳ್ಳಕೆರೆ ನಗರದ ತಾಲೂಕು ಕಚೇರಿ ಮುಂಬಾಗದ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಪರಿನಿಬ್ಬಾಣ ಸಭೆಯಲ್ಲಿ ಶಾಸಕ ಟಿ.ರಘುಮೂರ್ತಿ ಮಾತನಾಡಿದರು.
ಪೋಟೋ, 2 ಚಳ್ಳಕೆರೆ ನಗರದ ತಾಲೂಕು ಕಚೇರಿ ಮುಂಬಾಗದ ಅಂಬೇಡ್ಕರ್ ಪ್ರತಿಮೆಗೆ ಶಾಸಕ ಟಿ.ರಘುಮೂರ್ತಿ, ಹೂಮಾಲೆ ಅರ್ಪಿಸಿದರು.