ಚಳ್ಳಕೆರೆ : ಅಂಬೇಡ್ಕರ್ ಬುದ್ಧ ಬಸವ ಅವರಂತಹ ಮಹಾನೀಯರ ವಿಚಾರಗಳನ್ನು ಯುವ ಪೀಳಿಗೆ ತಿಳಿದುಕೊಳ್ಳಬೇಕು ಎಂದು ಗ್ರಾಪಂ.ಅಧ್ಯಕ್ಷ ಕೆಎಸ್.ಮಂಜಣ್ಣ ಹೇಳಿದ್ದಾರೆ.
ಅವರು ನಾಯಕನಹಟ್ಟಿ ಹೋಬಳಿಯ ಗಜ್ಜುಗಾನಹಳ್ಳಿ ಗ್ರಾಮದ ದಲಿತ ಕಾಲೋನಿಯಲ್ಲಿ ಆಯೋಜಿಸಿದ್ದ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ 66ನೇ ಪರಿನಿಬ್ಬಾಣ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಒಂದು ಜಾತಿಗೆ ಸೀಮಿತವಲ್ಲ ಎಲ್ಲಾ ಸಮುದಾಯದವರು ಅವರ ಆದರ್ಶಗಳನ್ನ ಚಿಂತನೆಗಳನ್ನ ಅವರ ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲ ನಡೆಯಬೇಕು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಅತ್ಯಂತ ಶ್ರೇಷ್ಠವಾದ ಮತ್ತು ವಿಶ್ವವೇ ಮೆಚ್ಚುವಂತ ಸಂವಿಧಾನವನ್ನು ನಮಗೆ ನೀಡಿದ್ದಾರೆ ಎಂದರು.
ಬಾಬಾ ಸಾಹೇಬ್ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಕೊಟ್ಟಂತವರು ಆದ್ದರಿಂದ ಗ್ರಾಮಸ್ಥರು ತಮ್ಮ ಮಕ್ಕಳಿಗೆ ಶಿಕ್ಷಣವನ್ನು ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಗ್ರಾಮ ಪಂಚಾಯತಿ ಅಧ್ಯಕ್ಷ ಕೆ ಎಸ್ ಮಂಜಣ್ಣ ಕರೆ ನೀಡಿದರು.

ಈ ವೇಳೆ ಎಸ್‌ಡಿಎಂಸಿ ಅಧ್ಯಕ್ಷ ದಾಸಯ್ಯ ಮಾತನಾಡಿ ಡಾ. ಬಿಆರ್ ಅಂಬೇಡ್ಕರ್ ಅವರ ಒಂದು ಜಾತಿಗೆ ಸೀಮಿತವಲ್ಲ ಹಾರ್ದಿಕವಾಗಿ ಸಾಮಾಜಿಕವಾಗಿ ಹಿಂದುಳಿದ ಅಲ್ಪಸಂಖ್ಯಾತರ ಇಡಿ ದೇಶವೇ ಪೂಜಿಸುವಂತಹ ಮಹಾನ್ ಚೇತನ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಆದರ್ಶಗಳನ್ನ ಮಾರ್ಗದರ್ಶನವನ್ನ ಭಾರತದ ಪ್ರತಿಯೊಬ್ಬ ಪ್ರಜೆ ಅ ಪಾಲನೆ ಮಾಡಬೇಕು ಎಂದು ಎಸ್ ಡಿ ಎಂ ಸಿ ಅಧ್ಯಕ್ಷ ದಾಸಯ್ಯ ತಿಳಿಸಿದ್ದಾರೆ.
ನಂತರ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಾದ ಜಿಬಿ ತಿಪ್ಪೇಸ್ವಾಮಿ ಮಾತನಾಡಿ ಡಾ. ಬಿ ಆರ್ ಅಂಬೇಡ್ಕರ್ ಅವರು ಮೂರು ಸೂತ್ರಗಳನ್ನು ನಮಗೆ ಆದರ್ಶವಾಗಿ ನೀಡಿದ್ದಾರೆ ಅವುಗಳೆಂದರೆ ಶಿಕ್ಷಣ, ಸಂಘಟನೆ ಹಾಗೂ ಹೋರಾಟ ಈ ಮೂರು ಸೂತ್ರಗಳಿಂದ ಬದಲಾವಣೆಯನ್ನು ಬಯಸಬಹುದು ಬಾಬಾ ಸಾಹೇಬ್ ಅಂಬೇಡ್ಕರ್ ರವರು ಶಿಕ್ಷಣ ಎಂಬುದು ಹುಲಿಯ ಹಾಲಿದ್ದಂತೆ ಅದನ್ನು ಕುಡಿದವರು ಗರ್ಜಿಸಲೇಬೇಕು ಶಿಕ್ಷಣಕ್ಕೆ ಮೊದಲು ಆದ್ಯತೆಯನ್ನು ನಾವೆಲ್ಲರೂ ನೀಡಬೇಕು ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಾದ ಜಿ ಬಿ ತಿಪ್ಪೇಸ್ವಾಮಿ ಗ್ರಾಮಸ್ಥರಿಗೆ ಕಿವಿಮಾತು ಹೇಳಿದರು

ಈಸಂದರ್ಭದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಪಾಲಮ್ಮ ಜಿ ಬೋರಯ್ಯ ಸದಸ್ಯರಾದ ಬಸಕ್ಕ ತಿಪ್ಪೇಸ್ವಾಮಿ, ಶಂಕ್ರಣ್ಣ, ಹಟ್ಟಿಯ ಯಜಮಾನರಾದ ಚಿನ್ನಣ್ಣ, ಚಂದ್ರಣ್ಣ, ವಸಂತರಾಜ್, ಬಸಣ್ಣ ಮಲ್ಲೇಶ್, ನಾಗರಾಜ್, ಸೇರಿದಂತೆ ಮುಂತಾದವರು ಇದ್ದರು

Namma Challakere Local News
error: Content is protected !!