ಚಳ್ಳಕೆರೆ : ರಾಜ್ಯದ ಅತೀದೊಡ್ಡ ಎರಡನೇ ರಾಣೀಕೆರೆಗೆ ಬಾಗೀನ ಅರ್ಪಿಸಿರುವುದು ಸಂತಸ ತಂದಿದೆ, ಈ ಭಾಗದ ರೈತರ ಮುಖದಲ್ಲಿ ನಗುವು ಕಾಣಬಹುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಅವರು ನಗರದ ಬಿಎಂಜಿಹೆಚ್‌ಎಸ್ ಶಾಲಾ ಮೈದಾನದಲ್ಲಿ ಭಾರತೀಯ ಜನತಾ ಪಾರ್ಟಿಯಿಂದ ಆಯೋಜಿಸಿದ್ದ ಜನ ಸಂಕಲ್ಪ ಯಾತ್ರಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು, ಸಮೃದ್ದಿ ಕರ್ನಾಟಕಕ್ಕೆ ಮುನ್ನುಡಿ ಬರೆಯಲಾಗಿದೆ, ನವ ಭಾರತ ಕಲ್ಪನೆ ಈಡೇರಿದೆ, 1985ರಲ್ಲಿ ರಾಜ್ಯದ ಅತೀ ದೊಡ್ಡ ಕೆರೆಗೆ ರಾಜೀವ್ ಗಾಂಧಿ ಬಂದಿದ್ದರು ಆದರೆ ಆ ಸಂದರ್ಭದಲ್ಲಿ ಕೆರೆಯಲ್ಲಿ ಹನಿ ನೀರು ಕೂಡ ಇರಲಿಲ್ಲ, ಆದರೆ ನಮ್ಮ ಸುದೈವ ನಮ್ಮ ಬಿಜೆಪಿ ನೇತೃತ್ವದ ಸರಕಾರ ಆಡಳಿತಕ್ಕೆ ಬಂದಿದ್ದರಿAದ ಇಡೀ ರಾಜ್ಯ ಸಂವೃದ್ದವಾಗಿದೆ, ರೈತರ ಮೊಗದಲ್ಲಿ ಮಂದಹಾಸ ನಗೆ ಇದೆ, ರೈತನ ಬೆಳೆಗೆ ಸೂಕ್ತ ಮಾರುಕಟ್ಟೆ ಇದೆ, ಮುಂದಿನ ದಿನಗಳಲ್ಲಿ ಚಳ್ಳಕೆರೆಯನ್ನು ಎಣ್ಣೆ ನಗರಿಯನ್ನಾಗಿ ಮಾಡಲು ನಾನೇ ಸ್ವತಃ ಚಳ್ಳಕೆರೆ ಸಮಗ್ರ ಅಭಿವೃದ್ದಿಗೆ ಪಣ ತೋಡುತ್ತೆನೆ ಎಂದರು.
ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಕಾಂಗ್ರೆಸ್ ನವರಿಗೆ ಸೋಲುವ ಬೀತಿಯಿಂದ ಹತಾಶೆಯರಾಗಿ ಸುಳ್ಳು ಆರೋಪಗಳನ್ನು ಮಾಡಿ ಸಾಧನೆ ಮಾಡಲು ಹೊರಟ್ಟಿದ್ದಾರೆ, ಕಳೆದ 60ವರ್ಷ ಆಳ್ವಿಕೆಯ ಮಾಡಿದ ಅವರು ಜನರಿಗೆ ಮೋಸಮಾಡಿದ್ದಾರೆ, ನಲವತ್ತು ವರ್ಷಗಳಲ್ಲಿ ಈ ಜನಸಂಖ್ಯೆ ಮೀಸಲಾತಿ ಹೆಚ್ಚಳ ವಿಷಯದಲ್ಲಿ ಕಾಂಗ್ರೇಸ್ ತಿರುಗಿ ಸಹ ನೋಡಿಲ್ಲ, ರಾಜ್ಯನಾಯಕ ಸಿದ್ದರಾಮಯ್ಯ ದೀನ ದಲಿತರ ಕಡೆ ತಿರುಗಿ ಸಹ ನೋಡಿಲ್ಲ, ಅಹಿಂದ ಮುಖ್ಯಮಂತ್ರಿ ಎಂದು ಹೇಳುವ ಇವರಿಗೆ ರಾಜ್ಯದಲ್ಲಿ ಎಲ್ಲಿಯೂ ಸಹ ಸುರಕ್ಷಿತ ಕ್ಷೇತ್ರ ಸಿಗದೆ ಹುಡುಕಾಟದಲ್ಲಿ ಇದ್ದಾರೆ ಎಂದರು.
ಜಲಸAಪನ್ಮೂಲ ಸಚಿವ ಗೊಂವಿದ ಕಾರಜೋಳ ಮಾತನಾಡಿ, ನೀರಾವರಿ ಇಲಾಖೆಯಿಂದ 800ಕೋಟಿ 193ಹಳ್ಳಿಗೆ, 275 ಸಾವಿರ ಜನರಿಗೆ ವರದಾನ ಹಾಗಬಹುದಾದ ಭದ್ರಾ ಮೇಲ್ದಂಡೆ ಯೋಜನೆ, ಹಾಗೂ ಮೊಳಕಾಲ್ಮೂರು ಕ್ಷೇತ್ರದಲ್ಲಿ ಸುಮಾರು 53 ಕೆರೆಗಳಿಗೆ 500 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ. ಇದರಿಂದ ಬಯಲು ಸೀಮೆಯ ಜನರಿಗೆ ಸುಮಾರು ಎರಡು ಲಕ್ಷದ 70 ಸಾವಿರ ಎಕ್ಟೆರ್ ನೀರುಣಿಸುವ ಕಾರ್ಯವಾಗುತ್ತದೆ, ಆದ್ದರಿಂದ ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆಗೆ ಕೇಂದ್ರ ಸರಕಾರಕ್ಕೆ ಶಿಪಾರಸ್ಸು ಮಾಡಿದೆ ಕೇಂದ್ರದಿAದ ಸಾಕಷ್ಟು ಅನುದಾನ ತರಲಾಗುತ್ತದೆ, ಆದ್ದರಿಂದ ಮುಂದಿನ ಚುನಾವಣೆಗೆ ರಾಜ್ಯದಲ್ಲಿ ಸುಮಾರು 150ಕ್ಕೂ ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸವಿದೆ ಎಂದರು.
ಇದೇ ಸಂಧರ್ಭದಲ್ಲಿ ಸಾರಿಗೆ ಸಚಿವ ಬಿ.ಶ್ರಿರಾಮುಲು, ಕೆ.ಎಸ್.ಆರ್.ಟಿಸಿ. ನಿಗಮದ ಅಧ್ಯಕ್ಷ ಹಾಗೂ ಶಾಸಕ ಎಂ.ಚAದ್ರಪ್ಪ, ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಚಿತ್ರದುರ್ಗ ಕ್ಷೇತ್ರದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ವಿಧಾನ ಪರಿಷತ್ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ, ಕೆ.ಎಸ್.ನವೀನ್, ರವಿಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಕೆ.ಪರುಶುರಾಮ್, ಇತರರು ಇದ್ದರು.