ಚಳ್ಳಕೆರೆ : ಕಾಂಗ್ರೇಸ್ ಪಕ್ಷ ಈಡೀ ದೇಶದಲ್ಲಿ ನೆಲ ಕಚ್ಚಿದೆ, ಕೋಲಾರದಲ್ಲಿ ಸಿದ್ದರಾಮಯ್ಯ ಜನರ ಬೆಂಬಲ ಕೋಡಿ ಎಂದು ಕೇಳುತ್ತಾರೆ, ಮೊದಲು ಅವರ ಪಕ್ಷದ ಡಿಕೆ.ಶಿವಕುಮಾರ್ ರವರ ಬೆಂಬಲ ಇದೆಯೇ ಎಂಬುದು ಮನಗಾಣಬೇಕು, ಕಾಂಗ್ರೇಸ್‌ನಲ್ಲಿ ಬಿನ್ನಭಿಪ್ರಾಯ ಇದೆ, ಭಾರತ್ ಜೋಡೋ ಪಾದಯಾತ್ರೆ ಸಂಪೂರ್ಣವಾಗಿ ವಿಫಲವಾಗಿದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ವಿರೋಧ ಪಕ್ಷಕ್ಕೆ ಟಾಂಗ್ ನೀಡಿದರು.
ಅವರು ನಗರದ ಬಿಸಿನೀರು ಮುದ್ದಪ್ಪ ಪ್ರೌಢಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಜನ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದರು, ರಾಜ್ಯದಲ್ಲಿ ಬಿಜೆಪಿ ಆಡಳಿತವನ್ನು ನೋಡಿ ಕಾಂಗ್ರೇಸ್ ಗಾಬರಿಯಾಗಿದೆ, ಕಾಂಗ್ರೇಸ್ ಬರೀ ಭ್ರಷ್ಟಚಾರದಲ್ಲಿ ಮುಳುಗಿದೆ, ಜಿಲ್ಲೆಯಲ್ಲಿ ಕಾಂಗ್ರೇಸ್ ಮಾಜಿ ಸಚಿವರು ಮಕ್ಕಳ ಹಾಸಿಗೆ ದಿಂಬುವಿನಲ್ಲಿ ಕೂಡ ಭ್ರಷ್ಟಾಚಾರ ಮಾಡಿರುವುದು ಕಂಡು ಬಂದಿದೆ, ಇನ್ನೂ ಬಿಡಿಎ, ನೀರಾವರಿ, ಸಣ್ಣನೀರಾವರಿ, ವಿದ್ಯುತ್ ಇಲಾಖೆ ಇಗೇ ಭ್ರಷ್ಟಾಚಾರದಲ್ಲಿ ತೊಡಗಿದೆ, ಭ್ರಷ್ಟಾಚಾರ ಎಂದರೆ ಕಾಂಗ್ರೇಸ್, ಕಾಂಗ್ರೇಸ್ ಅಂದರೆ ಭ್ರಷ್ಟಾಚಾರ, ಈ ಭ್ರಷ್ಟ ಕಾಂಗ್ರೇಸ್‌ನ್ನು ಬೇರು ಮಟ್ಟದಿಂದ ಕಿತ್ತೋಗೆಯಬೇಕು, ಅಪ್ಪರ ಭ್ರದ್ರಾಯೋಜನೆಗೆ 3ಸಾವಿರ ಕೋಟಿ ಅನುದಾನ ಮೀಸಲಿಡಲಾಗಿದೆ, ಇನ್ನೂ ಕೇಂದ್ರದಿAದ ಸು.16ಸಾವಿರ ಕೋಟಿ ನೀಡಲಾಗುತ್ತಿದೆ ಎಂದರು.

ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಚಳ್ಳಕೆರೆಯಲ್ಲಿ ಕಮಲ ಹರಳಿಸಿ ಬಿಜೆಪಿ ಅಭ್ಯರ್ಥಿ ಗೆಲ್ಲುವ ಶಕ್ತಿಪ್ರದರ್ಶನ ಇದಾಗಿದೆ ಚುನಾವಣೆಗೆ ಕೇವಲ ನಾಲ್ಕು ತಿಂಗಳು ಬಾಕಿ ಇದೆ, ಆದ್ದರಿಂದ ಈಗೀನಿಂದಲೆ ಮಹಿಳೆಯರು, ಯುವ ಮುಖಂಡರು ತಂಡ ಕಟ್ಟುವ ಮೂಲಕ ಚಳ್ಳಕೆರೆ ಅಭ್ಯರ್ಥಿ ಗೆಲ್ಲುವಿಗೆ ಕಾರಣಾವಗಬೇಕು.
ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗು, ಕೇಂದ್ರದಲ್ಲಿ ಮೋದಿ, ಅಮಿತ್ ಶಾ, ನಡ್ಡಾ ಆಡಳಿತ ಅಲೆ ನೋಡಿ ಕಾಂಗ್ರೇಸ್ ಮೂಲೆ ಗುಂಪಾಗಿದೆ. ದೇಶದಲ್ಲಿ ಹಾಗೂ ರಾಜ್ಯದಲ್ಲಿ ಬಿಜೆಪಿ ನೂರಕ್ಕೆ ನೂರು ರಷ್ಟು ಅಧಿಕಾರಕ್ಕೆ ಬರುವುದು ಶತಸಿದ್ದ, ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ನೀಡಿದ ಕಾರ್ಯಕ್ರಮಗಳು ಜನ ಮಾನಸದಲ್ಲಿ ಉಳಿದಿವೆ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ನೇತೃತ್ವದ ಸರಕಾರ ಜನ ಪರವಾಗಿದೆ ಎಂದರು.
ಸ್ವಾತAತ್ರ‍್ಯ ಭಾರತದ ಇತಿಹಾಸದಲ್ಲೆ ಮೊದಲ ಬಾರಿಗೆ ಎಸ್‌ಟಿ ಮೀಸಲಾತಿ ಹೆಚ್ಚಳ ಮಾಡಿರುವುದು ನಮ್ಮ ಸರಕಾರ, ಈಡೀ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಯಾರು ಕೂಡ ಮೀಸಲಾತಿ ಹೆಚ್ಚಳ ಮಾಡಿರಲಿಲ್ಲ, ಆದರೆ ಬಿಜೆಪಿ ಆಡಳಿತ ಸರಕಾರ ಮಾಡಿದೆ ಇದರಿಂದ ಲಕ್ಷಾಂತ ಯುವಕರಿಗೆ ಉದ್ಯೋಗ, ಶಿಕ್ಷಣ, ಸ್ವಾಲಂಭನೆ ಜೀವನ ಕಟ್ಟಿಕೊಳ್ಳಲು ನೆರವಾಗಿತ್ತದೆ ಎಂದರು.
ಇನ್ನೂ ಕಾಂಗ್ರೆಸ್ ಪಕ್ಷಕ್ಕೆ ನಾಯಕತ್ವ ಇಲ್ಲ ಪಕ್ಷ ದಿವಾಳಿಯಾಗಿದೆ ಅಧಿಕಾರಕ್ಕೆ ಬರಲು ಹಗಲು ಕನಸು ಕಾಣುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಚಳ್ಳಕೆರೆ ಜನರ ಪ್ರೀತಿ ವಿಶ್ವಾಸ ಹೆಮ್ಮರವಾಗಿದೆ, ರಾಣಿಕೆರೆ ರಾಜ್ಯದ ಅತೀ ದೊಡ್ಡಕೆರೆ ಇಂತ ಕೆರೆಗೆಬಾಗೀನ ಅರ್ಪಣೆ ಮಾಡಿರುವುದು ಸಂತಸ ತಂದಿದೆ, ಈ ಭಾಗದ ರೈತರು ನೆಮ್ಮದಿಯಿಂದ ಬದುಕುವ ಕಾಲಬಂದಿದೆ ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ, ಅದೇ ರೀತಿಯಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಸತ್ಯ ಎಂದರು.
ಬಾಕ್ಸ್ ಮಾಡಿ :
ಬಿಜೆಪಿ ಪಕ್ಷದ ಕೇಂದ್ರ ತಂಡದ ಸರ್ವೆ ಮಾಡಿಸಿ ಯಾವ ಕ್ಷೇತ್ರದಲ್ಲಿ ಯಾರ ಬಲವಿದೆ, ಯಾವ ಅಭ್ಯರ್ಥಿಗೆ ಬೆಂಬಲವಿದೆ ಎಂಬುದು ಮನಗಂಡು ಗೆಲ್ಲುವು ಅಭ್ಯರ್ಥಿಗೆ ಸ್ಥಾನ ನೀಡಲಾಗುತ್ತದೆ, ಆದ್ದರಿಂದ ಯಾವುದೇ ಆಕಾಂಕ್ಷಿಗಳಲ್ಲಿ ಗೊಂದಲ ಬೇಡ ಪಕ್ಷ ಸಂಘಟನೆಗೆ ದುಡಿಯಿರಿ, ಒಗ್ಗಟ್ಟಿನಿಂದ ಪಕ್ಷ ಬಲ ಪಡಿಸಿ ಗೆಲುವು ನಿಮದಾಗಿಸಿಕೊಳ್ಳಿ ಎಂದರು.

About The Author

Namma Challakere Local News
error: Content is protected !!