ಇಂದು ನಡೆಯುವ ಜನಸಂಕಲ್ಪ ಯಾತ್ರೆಯಲ್ಲಿ,
ಮುಖ್ಯಮಂತ್ರಿ ಭಾಷಣಕ್ಕೆ ಅಡ್ಡಿಯಾಗಬಹುದಾ..?? ಆಕಾಂಕ್ಷಿ ಬೆಂಬಲಿಗರ ಜೈಕಾರದ ಕೂಗು..!!

ಚಳ್ಳಕೆರೆ : ಇಂದು ನಡೆಯುವ ಜನ ಸಂಕಲ್ಪ ಯಾತ್ರೆಗೆ ಈಗಾಗಲೇ ಕ್ಷೇತ್ರದಲ್ಲಿ ಭರ್ಜರಿ ತಯಾರಿ‌ನಡೆಸುವ ಮೂಲಕ ಸುಮಾರು15 ಸಾವಿರ ಕಾರ್ಯಕರ್ತರು, ಸಾರ್ವಜನಿಕರು ಸೇರುವ ನಿರೀಕ್ಷೆ ‌ಇದೆ.

ಇನ್ನೂ ಚಳ್ಳಕೆರೆ ಕ್ಷೇತ್ರಕ್ಕೆ ಮಧ್ಯಾಹ್ನ 2ಗಂಟೆ ಸುಮಾರಿಗೆ ಆಗಮಿಸುವ ಮುಖ್ಯ ಮಂತ್ರಿಗಳು ತಾಲೂಕಿನ ರಾಣಿಕೆರೆಗೆ ಬಾಗೀನ ಅರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ನಂತರ ಭಾರತೀಯ ಜನತಾ ಪಾರ್ಟಿ ಆಯೋಜಿಸಿದ್ದ ಜನ ಸಂಕಲ್ಪ ಯಾತ್ರೆಯಲ್ಲಿ ರಾಜ್ಯ ಬಿಜೆಪಿ ನಾಯಕರು ಹಾಗೂ ‌ಮುಖ್ಯ ಮಂತ್ರಿ‌ ಬಸವರಾಜ್ ಬೊಮ್ಮಾಯಿ ಭಾಷಣ ಮಾಡಲಿದ್ದಾರೆ.

ಆದರೆ ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದಿಂದ ಕಣಕ್ಕಿಳಿಯುವ ಅಭ್ಯರ್ಥಿಗಳು ಜನ ಸಂಕಲ್ಪ ಯಾತ್ರೆಯಲ್ಲಿ ರಾಜ್ಯ‌ನಾಯಕರ ಹಾಗೂ ಕ್ಷೇತ್ರದ ಜನರಿಗೆ ತಮ್ಮ ವರ್ಚಸ್ಸು ತೋರಿಸಲು, ತಮ್ಮ ಬೆಂಬಲಿಗರಿಂದ ಪೆಂಡಲ್ ಒಳಗಡೆ ತಮ್ಮ ಆಕಾಂಕ್ಷಿಯ ಹೆಸರಿನೊಂದಿಗೆ ಜೈ ಕಾರ ಮೊಳಗಿಸುವ ತಯಾರಿ ಈಗಾಗಲೇ ಸದ್ದಿಲ್ಲದೆ ನಡೆಯುತ್ತಿದೆ.

ಆಕಾಂಕ್ಷಿಗಳ ಪರ‌ ಸುಮಾರು ಇನ್ನೂರಿಂದ‌ ಐನೂರು‌ ಜನ ಬೆಂಬಲಿಗರು‌ ಒಂದೆಡೆ‌ ಸೇರಿ‌ ಆಕಾಂಕ್ಷಿ ಪರ ಜೈಕಾರ ಕೂಗಿದರೆ, ತಮ್ಮ ತಮ್ಮ ಬಲವನ್ನು ಹೆಚ್ಚಿಸಿಕೊಂಡು ರಾಜ್ಯ ನಾಯಕರ ಗಮನ ಸೇಳೆಯಲು ತಂತ್ರಗಾರಿಕೆ ಎಣಿದಿದ್ದಾರೆ ಎಂಬ ಮಾಹಿತಿ ಬಲ್ಲ‌ಮೂಲಗಳಿಂದ‌ ಹೊರಬಿದ್ದಿದೆ.

ಇದರಿಂದಾಗಿ ಮುಖ್ಯಮಂತ್ರಿ ಭಾಷಣಕ್ಕೆ ಜೈಕಾರದ ಕೂಗು ಅಡ್ಡಿಯಾಗಿ ಭಾಷಣದಲ್ಲಿ ಗೊಂದಲ ಮೂಡಬಹುದಾ ಎಂಬುದನ್ನು ಕಾದು ನೋಡಬೇಕಿದೆ….

About The Author

Namma Challakere Local News
error: Content is protected !!