ದಾವಣಗೆರೆ : ಕ್ಯಾಸಿನೋದಲ್ಲಿ ದಂಧೆ, ಕ್ರಿಕೆಟ್ ಬೆಟ್ಟಿಂಗ್ ದಂಧೆ ಆರೋಪದ ಅಡಿಯಲ್ಲಿಚಿತ್ರದುರ್ಗ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿ ಅರ್ಜಿ ಸಲ್ಲಿದ್ದ K.C.ವೀರೇಂದ್ರ ಅಲಿಯಾಸ್ ಪಪ್ಪಿ ಮೇಲೆ 420 ಕೇಸ್ ದಾಖಲಾಗಿದೆ. ಕೇಸ್ ದಾಖಲಾಗ್ತಿದ್ದಂತೆ ಪಪ್ಪಿ ವೀರೇಂದ್ರ ದೇಶ ಬಿಟ್ಟಿದ್ಧಾರೆ.
ದಾವಣಗೆರೆಯ ಬಡಾಣೆ ಠಾಣೆಯಲ್ಲಿ ಕೆ.ಸಿ.ವೀರೇಂದ್ರ ಮೇಲೆ ಕೇಸ್ ದಾಖಲಾಗಿದೆ. ವೀರೇಂದ್ರ ಚಿತ್ರದುರ್ಗ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಪಪ್ಪಿ ವೀರೇಂದ್ರ ಕಳೆದ ಬಾರಿಯೂ ಚಿತ್ರದುರ್ಗದಿಂದ ಸ್ಪರ್ಧೆ ಮಾಡಿ ಸೂಲುಂಡಿದ್ದರು. ಗೋವಾ ಕ್ಯಾಸಿನೋದಲ್ಲಿ ದಂಧೆ, ರಾಜ್ಯದಲ್ಲಿ ಕ್ರಿಕೆಟ್ ಬೆಟ್ಟಿಂಗ್ ದಂಧೆ ಆರೋಪವಿದೆ. ದಾವಣಗೆರೆಯ ಕಿರಣ್, ಚೇತನ್, ಸೂರಜ್ ಕುಟ್ಟಿ , ಚಿತ್ರದುರ್ಗದ ವೀರೇಂದ್ರ @ ಪಪ್ಪಿ ವಿರುದ್ಧ ದೂರು ದಾಖಲಾಗಿತ್ತು. ವೆಂಕಟೇಶ್ ಬಡಾವಣೆ ಠಾಣೆಗೆ ದೂರು ನೀಡಿದ್ದಾರೆ. ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯದ ವೇಳೆ ಬೆಟ್ಟಿಂಗ್ ಮಾಡಿದ್ದರು. ಪಂದ್ಯ ಅಕ್ಟೋಬರ್ 20ರಂದು ರಂದು ನಡೆದಿತ್ತು. ಕ್ರಿಕೆಟ್ ಬೆಟ್ಟಿಂಗ್ ಆಸೆ ಹುಟ್ಟಿಸಿ ಮೊಬೈಲ್ ಆ್ಯಪ್ ಮೂಲಕ ಹಣ ಸಂಗ್ರಹವಾಗಿದೆ.
ಪೊಲೀಸರು ಕಿರಣ್, ಚೇತನ್ ಬಂಧಿಸಿ 7 ಲಕ್ಷ ರೂ ವಶಕ್ಕೆ ಪಡೆದಿದ್ದರು. ಪೊಲೀಸರು ಸೂರಜ್ ಕುಟ್ಟಿ, ವೀರೇಂದ್ರ ಪಪ್ಪಿ ಬಂಧನಕ್ಕೆ ಬಲೆ ಬೀಸಿದ್ಧಾರೆ. ವೀರೇಂದ್ರ ಪಪ್ಪಿ ದೂರು ದಾಖಲಾಗ್ತಿದ್ದಂತೆ ತಲೆ ಮರೆಸಿಕೊಂಡಿದ್ಧಾರೆ. ಕೆ.ಸಿ.ವೀರೇಂದ್ರ ಪಪ್ಪಿ ಬ್ಯಾಂಕ್ ಅಕೌಂಟ್ ಸೀಜ್ ಆಗಿದ್ದು, ಚಳ್ಳಕೆರೆ ಕೆನರಾ ಬ್ಯಾಂಕ್ ಸೇರಿ ವಿವಿಧ ಬ್ಯಾಂಕ್ಗಳ ಅಕೌಂಟ್ ಸೀಜ್ ಮಾಡಲಾಗಿದೆ.
ಫಾರಿನ್ಗೆ ಜಂಪ್ ಆದ ವೀರೇಂದ್ರ ವಿರುದ್ಧ ಲುಕ್ಔಟ್ ನೋಟಿಸ್ ಜಾರಿ ನೀಡಿದೆ. ಯಾವುದೇ ಏರ್ ಫೋರ್ಟ್ ಗೆ ಬಂದರೂ ತಕ್ಷಣ ಬಂಧಿಸಲು ಸೂಚನೆ ನೀಡಿದೆ. ಸ್ಥಳೀಯ ಕೋರ್ಟ್ನಲ್ಲಿ ಈಗಾಗಲೇ ಜಾಮೀನು ನಿರಾಕರಣೆ ಮಾಡಲಾಗಿದ್ದು, ವೀರೇಂದ್ರ ಅಲಿಯಾಸ್ ಪಪ್ಪಿ ಬೇಲ್ಗಾಗಿ ಹೈಕೋರ್ಟ್ ಮೆಟ್ಟಿಲು ಹತ್ತಿದ್ದಾನೆ ಎನ್ನಲಾಗಿದೆ