ಗೋಪನಹಳ್ಳಿ ಸರಕಾರಿ ಶಾಲೆಗೆ ವಿಬ್ರಾಕ್ ಔಷಧಿ ಕಂಪನಿಯಿಂದ ಶುಧ್ದ ಕುಡಿಯುವ ನೀರಿನ ಘಟಕ ಕೊಡುಗೆ
ಚಳ್ಳಕೆರೆ : ವಿಬ್ರಾಕ್ ಔಷಧಿ ಕಂಪನಿ
ಬೆಂಗಳೂರು, ಇವರ ವತಿಯಿಂದ ಚಳ್ಳಕೆರೆ ತಾಲ್ಲೂಕಿನ ಗೋಪನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶುದ್ಧ ಕುಡಿಯುವ ನೀರಿಗೆ ಫಿಲ್ಟರ್ ಕೊಡುಗೆ ನೀಡಿದ್ದು ಇಂದು ಉದ್ಘಾಟನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಕಂಪನಿ ವ್ಯವಸ್ಥಾಪಕರಾದ ಶ್ರೀ ಓಂ ಪ್ರಕಾಶ್, ಪ್ರತಿನಿಧಿ ಶ್ರೀ ಸುರೇಶ್, ಪಶುವೈದ್ಯಾಧಿಕಾರಿ ಶ್ರೀ ಡಾ. ಶಿವಣ್ಣ ಇ ಕೆ , ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ತಿಪ್ಪೇಸ್ವಾಮಿ ಎಸ್ ಟಿ, ಹಾಗೂ ಶಾಲಾ ಶಿಕ್ಷಕರು ಹಾಜರಿದ್ದರು.