ಮನುಷ್ಯ ಜೀವನದಲ್ಲಿ ಮನುಷ್ಯತ್ವ ಎಂಬುದು ಮರೆಮಾಚುತ್ತಿದೆ
ಚಳ್ಳಕೆರೆ : ಇತ್ತೀಚೀನ ದಿನಗಳಲ್ಲಿ ಸೈಬರ್ ಕಳ್ಳರ ಆವಳಿಂದ ಸಾರ್ವಜನಿಕರು ಎಚ್ಚತ್ತುಕೊಳ್ಳಬೇಕಾದ ಅನಿವಾರ್ಯವಿದೆ ಎಂದು ಮುಖ್ಯ ನ್ಯಾಯಾಧೀಶರಾದ ರೇಷ್ಮಾ ಕಲಕಪ್ಪ ಗೋಣಿ ಹೇಳಿದ್ದಾರೆ.
ಅವರು ತಾಲೂಕಿನ ದೊಡ್ಡೆರಿ ಗ್ರಾಮದಲ್ಲಿ ಕಾಲೇಜು ವಿದ್ಯಾರ್ಥಿಗಳಿಂದ ದತ್ತುಗ್ರಾವÀನ್ನಾಗಿ ಆಯ್ಕೆ ಮಾಡಿಕೊಂಡ ದೊಡ್ಡೆರಿ ಗ್ರಾಮದಲ್ಲಿ ಎನ್‌ಎಸ್‌ಎಸ್ ವಾರ್ಷಿಕ ಶಿಬಿರದ ಅಮೃತಾ ಅಭಿವೃದ್ಧಿ ಸಮುದಾಯ ಯೋಜನೆ ಅಡಿಯಲ್ಲಿ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮನುಷ್ಯ ಇಂದಿನ ಪರಸ್ಥಿತಿಯಲ್ಲಿ ಮಾನವೀಯ ಗುಣಗಳು ಕಳೆದುಕೊಂಡಿದ್ದಾನೆ, ಪ್ರತಿನಿತ್ಯ ಮನುಷ್ಯ ಜೀವನದಲ್ಲಿ ಮನುಷ್ಯತ್ವ ಎಂಬುದು ಮರೆಮಾಚುತ್ತಿದೆ ಆದ್ದರಿಂದ ಕಾನೂನು ಎಲ್ಲಾರೂ ಹರಿತರೆ ಅದಕ್ಕೆ ಕಡಿವಾಣ ಹಾಕಿದಂತೆ ಹಾಗುತ್ತದೆ ಎಂದರು.
ಇನ್ನೂ ಮುಖ್ಯ ನ್ಯಾಯಾಧೀಶರಾದ ಗಾಯಿತ್ರಿ ಎಸ್,ಕಾಟೆ ಮಾತನಾಡಿ, ಕಾಲ ಕ್ರಮೇಣ ತಂತ್ರಜ್ಞಾನ ಮುಂದುವರೆಯುತ್ತಾ ಮನುಷ್ಯ ತನಗೇ ತಾನೇ ಹರಿವಿಲ್ಲದೆ ತಪ್ಪು ಮಾಡಲು ಕ್ರೆöÊಂ ಮಾಡುತ್ತಿದ್ದಾನೆ ಆದಕ್ಕೆಂದು ನಮ್ಮ ಹಿರಿಯರು ಕಾನೂನು ಚೌಕಟ್ಟು ಹಾಕಿಕೊಟ್ಟಿದ್ದಾರೆ ಅದನ್ನು ಪಾಲಿಸಿದರೆ ಸಾಕು ಮನುಷ್ಯ ಸಾಮಾನ್ಯವಾಗಿ ತಪ್ಪೆಸಗಲಾರ ಎಂದರು.
ಇನ್ನೂ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ಗ್ರಾಮ ಪಂಚಾಯಿತಿ ಸದಸ್ಯ ಶಿವಣ್ಣ, ನ್ಯಾಯದೀಶರಾದ ಗೌಡ ಜಗದೀಶ್ ರುದ್ರೆ ಭಾಗವಹಿಸಿದ್ದರು
ಮುಖ್ಯ ಅತಿಥಿಗಳಾಗಿ ಜಿಎಂ.ಆನAದಪ್ಪ, ಹಿರಿಯ ಉಪನ್ಯಾಸಕರಾದ ವಸಂತ್‌ಕುಮಾರ್ ಹಾಗೂ ಕುಮಾರ್‌ಸ್ವಾಮಿ, ವಕೀಲರಾದ ಮಲ್ಲಿಕಾರ್ಜುನ, ಪಾಲಯ್ಯ, ಆರ್‌ಟಿ.ಸ್ವಾಮಿ, ಪ್ರಕಾಶ್ ಒಡೆಯರ್ ಹಾಗೂ ಕೆಆರ್.ಜಯಣ್ಣ ಎಸ್‌ಬಿಐ ವಿಶೇಷ ಅಧಿಕಾರಿ ಹಾಗೂ ವಕೀಲರ ಸಂಘದ ಉಪಾಧ್ಯಕ್ಷರಾದ ಬಿಆರ್.ರಾಘವೇಂದ್ರ ಸೈಬರ್‌ಲಾಸ್ ಕುರಿತು ಉಪನ್ಯಾಸ ಮಾಡಿದರು. ಗ್ರಾಮ ಪಂಚಾಯತಿ ಸದಸ್ಯರಾದ ವೆಂಕಟೇಶ್, ಸುವರ್ಣಮ್ಮ, ಗುಂಡಣ್ಣ, ಗ್ರಂಥಪಾಲಕರಾದ ಈರಣ್ಣ ಹಾಗೂ ಊರಿನ ಗಣ್ಯರು ಉಪಸ್ಥಿತರಿದ್ದರು