ಕನ್ನಡ ರಾಜ್ಯೋತ್ಸವದ ಹಂಗವಾಗಿ ಚಳ್ಳಕೆರೆ ಜಿಟಿಟಿಸಿ ಕೇಂದ್ರದ ಸ್ವಚ್ಚತಾ ಕಾರ್ಯ : ತಹಶೀಲ್ದಾರ್ ಎನ್.ರಘುಮೂರ್ತಿಯಿಂದ ಚಾಲನೆ

ಚಳ್ಳಕೆರೆ : ಕನ್ನಡ ರಾಜ್ಯೋತ್ಸವದ ಹಂಗವಾಗಿ ಚಳ್ಳಕೆರೆ ಜಿಟಿಟಿಸಿ ಕೇಂದ್ರದ ವಿದ್ಯಾರ್ಥಿಗಳು ಹಮ್ಮಿಕೊಂಡ ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಸ್ವಚ್ಚತಾ ಕಾರ್ಯಕ್ರಮಕ್ಕೆ ತಹಶೀಲ್ದಾರ್ ಎನ್.ರಘುಮೂರ್ತಿ ತಾವೇ ಸ್ವತಃ ಕಸ ಬಳಿಯುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು
ಗಾಂಧಿಜೀ ಕಂಡ ಕನಸು ನನಸು ಮಾಡಲು ಸ್ವಚ್ಚತಾ ಆಂದೋಲ ಪ್ರಮುಖವಾದ ಅಸ್ತçವಾಗಿದೆ ಅದರಂತೆ ಪ್ರತಿಯೊಂದು ಹಂತದಲ್ಲಿ ಸ್ವಚ್ಚತೆಗೆ ಹೆಚ್ಚಿನ ಆಧ್ಯತೆ ನೀಡಲಾಗಿದೆ, ಆದ್ದರಿಂದ ದೇಶದ ಮೂಲ ಮಂತ್ರ ಕೂಡ ಸ್ವಚ್ಚತೆ ಯಾಗಿರುವುದು ಇಲ್ಲಿ ಕಾಣಬಹುದು ಎಂದರು.

ಇನ್ನೂ ಜಿಟಿಟಿಸಿ ತರಬೇತಿ ಕೇಂದ್ರದ ಪ್ರಾಂಶುಪಾಲ ಜಿ.ಆರ್.ತಿಪ್ಪೇಸ್ವಾಮಿ ಮಾತನಾಡಿ, ನಮ್ಮ ಕಾಲೇಜಿನ ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಹಾಗೂ ಸಿಬ್ಬಂದಿವರ್ಗ ಈ ಸ್ವಚ್ಚತಾ ಕಾರ್ಯದಲ್ಲಿ ಪಾಲ್ಗೊಂಡು ನಗರದ ಖಾಸಗಿ ಬಸ್ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶದಲ್ಲಿನ ಬಸ್ ನಿಲ್ದಾಣ, ಒಳ ಭಾಗ, ಈಗೇ ಸುತ್ತಲಿನ ಪ್ರದೇಶದಲ್ಲಿ ಬಿದ್ದಿರುವ ಬಾಟಲಿ ಪ್ಲಾಸ್ಟಿಕ್, ಗುಟ್ಕ ಕವರ್ ಈಗೇ ಸ್ವಚ್ಚ ಮಾಡಿ ಜಾಗೃತಿ ಮೂಡಿಸಿದರು.

ಈ ಸಮಯದಲ್ಲಿ ತಹಶೀಲ್ದಾರ್ ಎನ್ ರಘುಮೂರ್ತಿ ಜಿಟಿಸಿ ಕೇಂದ್ರದ ಪ್ರಾಂಶುಪಾಲ ಜಿ.ಆರ್.ತಿಪ್ಪೇಸ್ವಾಮಿ, ನಗರಸಭೆ ಆರೋಗ್ಯ ಅಧಿಕಾರಿಗಳಾದ ಮಹಾಲಿಂಗಪ್ಪ, ದಾದಾಪೀರ್, ವಿಎ. ಪ್ರಕಾಶ್, ಜಿಟಿಟಿಸಿ ಕೇಂದ್ರದ ಉಪನ್ಯಾಸಕರಾದ ಹನುಮೇಶ್‌ಪೂಜಾರ್, ರಾಘವೇಂದ್ರ, ಮಲ್ಲಿಕಾರ್ಜುನ್ ಬೆಳಗಿ, ಬಸವರಾಜ್, ಕಲ್ಪನಾ, ಲಕ್ಷ್ಮಿ, ಚೇತನ್, ಆದರ್ಶ್, ಕಿರಣ್, ಕೃಷ್ಣಮೂರ್ತಿ, ಸೌಮ್ಯರಾಣಿ, ಸ್ವಾತಿ, ಲೋಕೇಶ್.ಇತರರು ಪಾಲ್ಗೊಂಡಿದ್ದರು.

About The Author

Namma Challakere Local News
error: Content is protected !!